ವೋಕ್ಸ್‌ವ್ಯಾಗನ್ ನೊಂದಿಗೆ ಮಹಾಬಲೇಶ್ವರ ಪ್ರವಾಸದ ರೋಚಕ ಅನುಭವ ಹಂಚಿಕೊಂಡ ಪತ್ರಕರ್ತ ಮಾನವ್

ಕರ್ನಾಟಕದಲ್ಲಿ ಕೊಡಗಿನಂತೆಯೇ ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರ ಸಾಕಷ್ಟು ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಪ್ರಕೃತಿ ಸೌಂದರ್ಯ, ಅದ್ಭುತ ವಾತಾವರಣ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಈ ತಾಣಕ್ಕೆ ವರ್ಷ ಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೀಗ ವೋಕ್ಸ್‌ವ್ಯಾಗನ್ ನೊಂದಿಗೆ ಮಹಾಬಲೇಶ್ವರ ಪ್ರವಾಸಕ್ಕೆ ತೆರಳಿರುವ ಆಟೋ ಪತ್ರಕರ್ತ ಮಾನವ್ ತಮ್ಮ ರೋಚಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ಈ ದೇವಾಲಯ ಇತಿಹಾಸ, ಏನಿದರ ವಿಶೇಷತೆ ಎನ್ನುವ ಮಾಹಿತಿ ಇಲ್ಲಿದೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2025 | 6:48 PM

ಭಾರತದಲ್ಲಿ ಕಣ್ಣು ಹಾಯಿಸಿದತ್ತ ಕಣ್ಮನ ಸೆಳೆಯುವ ಪ್ರವಾಸಿ ತಾಣಗಳು ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯಗಳು ಸಾಕಷ್ಟು ಇವೆ. ಮಹಾರಾಷ್ಟ್ರದಿಂದ ಕೇರಳದವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ವೈವಿಧ್ಯತೆಯಿಂದ ಕೂಡಿದ್ದು, ತನ್ನ ವಿಶೇಷತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಂತಹ ತಾಣಗಳ ಪೈಕಿ ಮಹಾಬಲೇಶ್ವರ ಕೂಡ ಒಂದು. ಇದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಒಂದು ಸುಂದರ ಗಿರಿಧಾಮವಾಗಿದ್ದು, ಪ್ರಕೃತಿಯ ಸೌಂದರ್ಯದಿಂದ ತುಂಬಿ ತುಳುಕುತಿದೆ. ಇದೀಗ ವೋಕ್ಸ್‌ವ್ಯಾಗನ್ ನೊಂದಿಗೆ ಮಹಾಬಲೇಶ್ವರ ಪ್ರವಾಸಕ್ಕೆ ತೆರಳಿರುವ ಟಿವಿ 9 ಭಾರತ್ ವರ್ಷ್ ಆಟೋ ಪತ್ರಕರ್ತ ಮಾನವ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

ನಮ್ಮ ಪ್ರಯಾಣದ ಪಟ್ಟಿಯಲ್ಲಿ ಮಹಾಬಲೇಶ್ವರ ಸ್ಥಳದ ಹೆಸರೇ ಇರಲಿಲ್ಲ, ಆದರೆ ವೋಕ್ಸ್‌ವ್ಯಾಗನ್ ನಿಂದ ನಮಗೆ ಕರೆ ಬಂದಾಗ ನಾವು ಮಹಾಬಲೇಶ್ವರಕ್ಕೆ ಹೋಗಲು ತಕ್ಷಣವೇ ತಯಾರಾದೆವು. ಇದೊಂದು ಸಣ್ಣ ಗಿರಿಧಾಮವಾಗಿದ್ದು, ಈ ಸ್ಥಳದ ಬಗ್ಗೆ ಮೂಲಭೂತ ಮಾಹಿತಿಯನ್ನು ಮಾತ್ರ ತಿಳಿದಿದ್ದೆವು. ಹೌದು, ತಮ್ಮ ಮಹಾಬಲೇಶ್ವರ ಈ ಪ್ರಯಾಣದ ಪ್ರಾರಂಭದಲ್ಲಿಯೇ ವೋಕ್ಸ್‌ವ್ಯಾಗನ್ ನಮಗೆ ವಾಹನವನ್ನು ತೆಗೆದುಕೊಳ್ಳುವ ಆಯ್ಕೆ ನೀಡಿತು. ಈ ಡ್ರೈವ್‌ಗಾಗಿ ನಾವು ವಿಡಬ್ಲ್ಯೂ ಟೈಗನ್ ಕಾರನ್ನು ಆಯ್ಕೆ ಮಾಡಿಕೊಂಡೆ. ಇದನ್ನೇ ನೆಪವಾಗಿಟ್ಟುಕೊಂಡು ಕಾರನ್ನು ಪರೀಕ್ಷೆ ಮಾಡೋಣ ಎಂದು ಯೋಚಿಸಿದೆ. ಈ ಸ್ಥಳದ ಬಗ್ಗೆ ಹೆಚ್ಚೇನು ಮಾಹಿತಿ ಕಲೆ ಹಾಕದೇ ಸ್ಥಳೀಯರಿಂದಲೇ ಕೇಳಿ ತಿಳಿಯುವ ಎಂದುಕೊಂಡು ಹೊರಟೆನು ಎಂದಿದ್ದಾರೆ.

ಈ ಮಹಾಬಲೇಶ್ವರದಲ್ಲಿ ಕೃಷ್ಣ ಬಾಯಿ ದೇವಸ್ಥಾನಕ್ಕೆ ಹೋದೆವು. ಕೆಲವರು ಇದನ್ನು ಕೃಷ್ಣೈ ದೇವಾಲಯ ಎಂದು ಕರೆದರೆ, ಇನ್ನು ಕೆಲವರು ಪಾಂಡವರ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯವು ಸುಮಾರು 5000 ವರ್ಷಗಳಷ್ಟು ಹಳೆಯದು. ಆ ಸ್ಥಳಕ್ಕೆ ತಲುಪಿದಾಗ ಕೂಡಲೇ ಈ ಪಾಂಡವರ ದೇವಾಲಯವನ್ನು ಕಣ್ಣು ಮಿಟುಕಿಸದೇ ನೋಡುತ್ತಲೇ ಇದ್ದೆವು. ಈ ದೇವಾಲಯದ ರಚನೆ ಮತ್ತು ವಿನ್ಯಾಸವು ವಿಶೇಷವಾಗಿದ್ದು, ವಾಣಿಜ್ಯೇತರ ಸ್ಥಳವಾಗಿದೆ. ಇಲ್ಲಿ ಹೂವು ಮಾರುವವರಿಲ್ಲ, ಪ್ರಸಾದ ಕೊಡುವವರಿಲ್ಲ, ಒಳಗೆ ಅರ್ಚಕರಿಲ್ಲ, ಪ್ರವೇಶ ಶುಲ್ಕವಂತೂ ಇಲ್ಲವೇ ಇಲ್ಲ. ಈ ಸ್ಥಳವು ಅಷ್ಟೇ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ವೋಕ್ಸ್‌ವ್ಯಾಗನ್ ಟೈಗನ್‌ ಚಾಲನೆ ಅನುಭವ ಬಿಚ್ಚಿಟ್ಟ ಪತ್ರಕರ್ತ ಮಾನವ್, ದೇವಾಲಯದ ರಚನೆಯಲ್ಲಿ ಹಳೆಯ ಕಾಲದ ಇಂಜಿನಿಯರ್ ಗಳ ಸಾಮರ್ಥ್ಯವನ್ನೇ, ಈಗಿನ ಆಧುನಿಕ ಇಂಜಿನಿಯರ್ಸ್ಗಳಲ್ಲಿ ನೋಡಬಹುದು. ಈ ಸ್ಥಳಕ್ಕೆ ತಲುಪಿದ ವೇಳೆ ವೋಕ್ಸ್‌ವ್ಯಾಗನ್ ಟೈಗನ್‌ನಲ್ಲಿ ಅದೇ ಆಧುನಿಕ ತಂತ್ರಜ್ಞಾನವನ್ನು ನಾವು ನೋಡುತ್ತೇವೆ. ಮಹಾಬಲೇಶ್ವರವು ಬೆಟ್ಟದ ಮೇಲಿದ್ದು, ಈ ಕಾರು ಹೆದ್ದಾರಿಯಲ್ಲಿ ಮಾತ್ರವಲ್ಲದೆ ಈ ಬೆಟ್ಟದ ಮೇಲೆಯೂ ಚೆನ್ನಾಗಿ ಓಡುತ್ತದೆ. ಯಾವುದೇ ವಾಹನದ ನೈಜತೆಯನ್ನು ಬೆಟ್ಟ ಗುಡ್ಡಗಳ ಮೇಲೆ ಮಾತ್ರ ಪರೀಕ್ಷಿಸಲಾಗುತ್ತದೆ. ಆಗ ಮಾತ್ರ ಅದು ಎಷ್ಟು ಟಾರ್ಕ್ ನೀಡುತ್ತಿದೆ, ಎಷ್ಟು ವಿದ್ಯುತ್ ಹೊರತೆಗೆಯುತ್ತಿದೆ, ಕಾರು ಹೇಗಿದೆ ಎಂಬುದನ್ನು ತಿಳಿಯಲು ಸಾಧ್ಯ. ನೀವು ಯಾವುದೇ ಕಾರನ್ನು ಖರೀದಿಸಬಹುದಾಗಿದ್ದು, ಆದರೆ ವಿಶ್ವಾಸಾರ್ಹವಾದದ್ದು ವರ್ಷಗಳವರೆಗೆ ಇರುತ್ತದೆ. ಟೈಗನ್ ಈ ವಿಷಯದಲ್ಲಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ