AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟ ಕನ್ನಡತಿಯರು: ಗೆದ್ದವರಿಗೆ ಸಿಗುವ ಹಣವೆಷ್ಟು?

Bigg Boss Telugu Finale: ಕನ್ನಡತಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್ ಸೀಸನ್ 09 ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಒಟ್ಟು ಐವರು ಫಿನಾಲೆಗೆ ಎಂಟ್ರಿ ನೀಡಿದ್ದು, ನಿಜವಾದ ಫೈಟ್ ಇರುವುದು ಇಬ್ಬರು ಸ್ಪರ್ಧಿಗಳ ನಡುವೆ ಎನ್ನಲಾಗುತ್ತಿದೆ. ಸಂಜನಾ ಮತ್ತು ತನುಜಾ ಅವರಿಗೆ ಗೆಲ್ಲುವ ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ...

ಬಿಗ್​​ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟ ಕನ್ನಡತಿಯರು: ಗೆದ್ದವರಿಗೆ ಸಿಗುವ ಹಣವೆಷ್ಟು?
Telugu Bigg Boss
ಮಂಜುನಾಥ ಸಿ.
|

Updated on:Dec 16, 2025 | 11:23 AM

Share

ತೆಲುಗು ಬಿಗ್​​ಬಾಸ್ ಸೀಸನ್ 09 (Telugu Bigg Boss season 09) ಫಿನಾಲೆಗೆ ಬಂದು ತಲುಪಿದೆ. 98 ದಿನಗಳ ಮುಗಿದಿದ್ದು, ಈ ವಾರ ಫಿನಾಲೆ ವಾರ ಆಗಿರಲಿದೆ. ಕನ್ನಡತಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂಸಹ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಒಟ್ಟು ಐವರು ಫಿನಾಲೆಗೆ ಎಂಟ್ರಿ ನೀಡಿದ್ದು, ನಿಜವಾದ ಫೈಟ್ ಇರುವುದು ಇಬ್ಬರು ಸ್ಪರ್ಧಿಗಳ ನಡುವೆ ಎನ್ನಲಾಗುತ್ತಿದೆ. ಸಂಜನಾ ಮತ್ತು ತನುಜಾ ಅವರಿಗೆ ಗೆಲ್ಲುವ ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ…

ಭಾನುವಾರದ ಎಪಿಸೋಡ್​ನಲ್ಲಿ ಭರಣಿ ಮತ್ತು ನಟ ಸುಮನ್ ಅವರು ಎಲಿಮಿನೇಟ್ ಆಗುವ ಮೂಲಕ ಐವರು ಫಿನಾಲೆ ತಲುಪಿದರು. ತನುಜಾ, ಸಂಜನಾ, ಕಲ್ಯಾಣ್, ಇಮಾನ್ಯುವೆಲ್ ಮತ್ತು ಪವನ್ ಅವರುಗಳು ಈಗ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ತನುಜಾ ಮತ್ತು ಸಂಜನಾ ಇಬ್ಬರೂ ಸಹ ಶೋನ ಆರಂಭದಿಂದಲೂ ಅದ್ಭುತವಾಗಿ ಆಡುತ್ತಾ ಬರುತ್ತಿದ್ದಾರೆ. ಅಸಲಿಗೆ ಮೂರನೇ ವಾರವೇ ಸಂಜನಾ ಅವರು ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಅದು ಸರ್ಪ್ರೈಸ್ ಎಲಿಮಿನೇಷನ್ ಆಗಿತ್ತು, ಮರಳಿ ಮನೆಗೆ ಬಂದ ಸಂಜನಾ ಅದ್ಭುತವಾಗಿ ಆಡುತ್ತಾ, ಇದೀಗ ಫಿನಾಲೆ ತಲುಪಿದ್ದಾರೆ.

ಇನ್ನು ತನುಜಾ ಅವರು ಆರಂಭದಿಂದಲೂ ಬಹಳ ಚೆನ್ನಾಗಿ ಆಡುತ್ತಾ ಬಂದಿದ್ದಾರೆ. ತನುಜಾ ಅವರು ಮೊದಲಿನಿಂದಲೂ ತಮ್ಮ ಸಮಚ್ಛಿತ್ತದ ಆಟದಿಂದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಕೆಲವು ಟಾಸ್ಕ್​​ಗಳಲ್ಲಿ ತಮ್ಮ ಏಕಾಗ್ರತೆ, ಶಕ್ತಿಯನ್ನು ಪ್ರದರ್ಶಿಸುವ ಜೊತೆಗೆ ಸಖತ್ ಎಂಟರ್ಟೈನ್ ಸಹ ಮಾಡಿದ್ದಾರೆ. ತನುಜಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದು ಈ ಬಾರಿ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ

ಆದರೆ ತನುಜಾಗೆ ಪ್ರಬಲ ಪೈಪೋಟಿ ಒಡ್ಡುತ್ತಿರುವುದು ಕಲ್ಯಾಣ್. ಇವರು ತಮ್ಮ ಆಟ, ಒಳ್ಳೆಯ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಳೆದ ವಾರವೇ ಫಿನಾಲೆ ಸ್ಪರ್ಧಿಯಾಗಿ ಕಲ್ಯಾಣ್ ಆಯ್ಕೆ ಆಗಿದ್ದು, ಅವರು ಸಹ ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಈಗ ಕಲ್ಯಾಣ್ ಮತ್ತು ತನುಜಾ ನಡುವೆ ಪ್ರಬಲ ಪೈಪೋಟಿ ಇದೆ. ಇನ್ನು ಇಮಾನ್ಯುಯೆಲ್ ಸಹ ಒಳ್ಳೆಯ ಸ್ಪರ್ಧಿ ಆಗಿದ್ದು, ಅವರೂ ಸಹ ತಮ್ಮ ಹಾಸ್ಯ, ಉತ್ತಮ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ತೆಲುಗು ಬಿಗ್​​ಬಾಸ್ ಸೀಸನ್ 09 ಸೆಪ್ಟೆಂಬರ್ 09ರಂದು ಪ್ರಾರಂಭ ಆಗಿದ್ದು, ಈಗ 99 ದಿನಗಳ ಆಟವನ್ನು ಮುಗಿಸಿದೆ. ಈ ಬಾರಿ ವಿನ್ನರ್ ಆದವರಿಗೆ 50 ಲಕ್ಷ ರೂಪಾಯಿ ನಗದು ಹಣ ಸಿಗಲಿದೆ. ಜೊತೆಗೆ ಬಿಗ್​​ಬಾಸ್ ಟ್ರೋಫಿ ಮತ್ತು ಕೆಲವು ಉಡುಗೊರೆಗಳು ಸಹ ಸಿಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Tue, 16 December 25

8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ