ಟ್ರೆಂಡ್ನಲ್ಲಿರೋ ‘ಧುರಂಧರ್’ನ ಈ ಹಾಡು ಒಂದಲ್ಲ, ಎರಡಲ್ಲ 65 ವರ್ಷ ಹಳೆಯದು
ಧುರಂಧರ್ ಸಿನಿಮಾ 350 ಕೋಟಿ ರೂ.ಗೂ ಹೆಚ್ಚು ಗಳಿಸಿ ಯಶಸ್ವಿ ಯಾತ್ರೆ ಮುಂದುವರೆಸಿದೆ. ಸಿನಿಮಾದ 'ನಾ ತೋ ಕಾರವಾನಕಿ ತಲಾಶ ಹೇ' ಹಾಡು ವೈರಲ್ ಆಗಿದೆ. ಇದು 65 ವರ್ಷ ಹಳೆಯ ಹಾಡಾಗಿದ್ದು, 1960ರ ಬಸರತ್ ಕಿ ರಾತ್ ಚಿತ್ರದ್ದು. ಹೃತಿಕ್ ರೋಷನ್ ತಾತ ರೋಷನ್ ಸಂಗೀತ ಸಂಯೋಜಿಸಿದ್ದ ಈ ಕವ್ವಾಲಿಯನ್ನು ಮನ್ನಾ ಡೇ, ಮೊಹಮ್ಮದ್ ರಫಿ ಅಂತಹ ದಿಗ್ಗಜರು ಹಾಡಿದ್ದಾರೆ.

‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 350+ ಕೋಟಿ ರೂಪಾಯಿ ಬಾಚಿಕೊಂಡು ಮುಂದಕ್ಕೆ ಸಾಗುತ್ತಿದೆ. ಈ ಸಿನಿಮಾ ಶೀಘ್ರವೇ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈಗ ‘ಧುರಂಧರ್’ ಸಿನಿಮಾದ ಹಾಡು ಗಮನ ಸೆಳೆದಿದೆ. ಈ ಹಾಡು 65 ವರ್ಷ ಹಿಂದಿನದು.
‘ಧುರಂಧರ್’ ಸಿನಿಮಾದಲ್ಲಿ ಬರೋ ‘ನಾ ತೋ ಕಾರವಾನಕಿ ತಲಾಶ ಹೇ’ ಹಾಡು ಗಮನ ಸೆಳೆಯುತ್ತಿದೆ. ರೀಲ್ಸ್ ಮಾಡಲಾಗುತ್ತಿದೆ. ಎಲ್ಲರೂ ಈ ಹಾಡು ಹೊಸದಾಗಿ ಕಂಪೋಸ್ ಮಾಡಿರೋದು ಎಂದು ಭಾವಿಸಿದ್ದರು. ಆದರೆ, ಈ ಹಾಡು ಮೊದಲು ಕಂಪೋಸ್ ಆಗಿದ್ದು ಆರೂವರೆ ದಶಕಗಳ ಹಿಂದೆ.
ಈ ಸಾಲುಗಳು ಹೃತಿಕ್ ರೋಷನ್ ಅವರ ತಾತ ಅವರ ಕವ್ವಾಲಿಯಿಂದ ತೆಗೆದುಕೊಂಡ ಸಾಲುಗಳಾಗಿವೆ. ‘ಬಸರತ್ ಕಿ ರಾತ್’ ಸಿನಿಮಾದ ಹಾಡು ಇದು. ಈ ಸಿನಿಮಾ ಬಂದಿದ್ದು 1960ರಲ್ಲಿ. ಮೂಲ ಹಾಡು ಕೂಡ ‘ನಾ ತೋ ಕಾರವಾನಕಿ ತಲಾಶ ಹೇ’ ಎಂದೇ ಇದೆ. ಆ ಕಾಲದ ಅತಿ ಉದ್ದದ ಕವ್ವಾಲಿಯಾಗಿತ್ತು. ಶಾರುಖ್ ಖಾನ್ ಈ ಕವ್ವಾಲಿಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದರು.
View this post on Instagram
ರೋಷನ್ ಈ ಕವ್ವಾಲಿಯನ್ನು ರಚಿಸಿದ ನಂತರ ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಪತ್ನಿಯೊಂದಿಗೆ ಈ ಬಗ್ಗೆ ಹೇಳಿದ್ದರಂತೆ. ‘ಇಂದು ನಾನು 13 ನಿಮಿಷಗಳ ಕವ್ವಾಲಿಯನ್ನು ರಚಿಸಿದ್ದೇನೆ’ ಎಂದಿದ್ದರು. ಆಗ ಅವರ ಪತ್ನಿ ‘ಇತ್ತೀಚಿನ ದಿನಗಳಲ್ಲಿ, ಯಾರೂ ನಾಲ್ಕು ನಿಮಿಷಗಳ ಹಾಡನ್ನು ಕೇಳುವುದಿಲ್ಲ. ಹೀಗಿರುವಾಗ ನೀವು 13 ನಿಮಿಷಗಳ ಕವ್ವಾಲಿಯನ್ನು ರಚಿಸಿದ್ದೀರಲ್ಲ’ ಎಂದರಂತೆ. ಆದರೆ, ನಿರ್ದೇಶಕ ಪಿ.ಎಲ್. ಸಂತೋಷಿ ಅವರಿಗೆ ಇದರ ಮೇಲೆ ಸಂಪೂರ್ಣ ನಂಬಿಕೆ ಇತ್ತು.
ಇದನ್ನೂ ಓದಿ: ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
ಈ ಕವ್ವಾಲಿಯಲ್ಲಿ ಮನ್ನಾ ಡೇ, ಆಶಾ ಭೋಂಸ್ಲೆ, ಎಸ್.ಡಿ. ಬತೀಶ್, ಸುಧಾ ಮಲ್ಹೋತ್ರಾ ಮತ್ತು ಮೊಹಮ್ಮದ್ ರಫಿ ಅವರಂತಹ ಪ್ರಸಿದ್ಧ ಗಾಯಕರು ಇದ್ದರು. ಈ ಕವ್ವಾಲಿ ದೀರ್ಘವಾಗಿದ್ದರೂ ಕೇಳಲು ಇಂಪಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




