AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್

‘ಡೆವಿಲ್’ ಸಿನಿಮಾ ಸೋಮವಾರದ ಗಳಿಕೆಯಲ್ಲಿ ಪಾತಾಳ ಕಂಡಿದೆ. ಕೇವಲ ಒಂದು ಕೋಟಿ ಗಳಿಸಿದೆ. ‘ಅಖಂಡ 2’ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಅತ್ತ ‘ಧುರಂಧರ್’ ತನ್ನ ಎರಡನೇ ಸೋಮವಾರವೂ 29 ಕೋಟಿ ರೂ. ಬಾಚಿಕೊಂಡು, ಒಟ್ಟು 379 ಕೋಟಿ ರೂ. ಗಳಿಸಿ 500 ಕೋಟಿ ಕ್ಲಬ್ ಸೇರುವತ್ತ ಸಾಗಿದೆ.

ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್
ಕಲೆಕ್ಷನ್ ವಿವರ
ರಾಜೇಶ್ ದುಗ್ಗುಮನೆ
|

Updated on:Dec 16, 2025 | 7:35 AM

Share

ಯಾವುದೇ ಸಿನಿಮಾ ಇರಲಿ, ವಾರದ ಮೊದಲ ದಿನವಾದ ಸೋಮವಾರ ಎಷ್ಟು ಗಳಿಕೆ ಮಾಡುತ್ತದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರವಾಗುತ್ತದೆ. ಈಗ ‘ಡೆವಿಲ್’ (Devil Movie), ‘ಅಖಂಡ 2’ ಹಾಗೂ ‘ಧುರಂಧರ್’ ಸಿನಿಮಾಗಳ ಸೋಮವಾರದ (ಡಿಸೆಂಬರ್ 15) ಗಳಿಕೆ ಲೆಕ್ಕ ಸಿಕ್ಕಿದೆ. ಈ ಚಿತ್ರಗಳ ಪೈಕಿ ಧುರಂಧರ್ ಸಿನಿಮಾದ್ದು ಭಾರೀ ಗಳಿಕೆ. ‘ಅಖಂಡ 2’ ಚಿತ್ರ ಕೂಡ ಉತ್ತಮ ಕಲೆಕ್ಷನ್ ಮಾಡಿದೆ. ‘ಡೆವಿಲ್’ ಗಳಿಕೆ ಪಾತಾಳ ಕಂಡಿದೆ.

‘ಡೆವಿಲ್’ ಸಿನಿಮಾ ಮೊದಲ ದಿನ 13 ಕೋಟಿ ರೂಪಾಯಿ ಗಳಿಸಿತ್ತು. ಆ ಬಳಿಕ ಸಿನಿಮಾ ಗಳಿಕೆ ದಿನ ಕಳೆದಂತೆ ಕುಸಿತ ಕಂಡಿತ್ತು. ಭಾನುವಾರ ಈ ಚಿತ್ರ 4 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರಕ್ಕೆ ಹೋಲಿಸಿದರೆ ಕಲೆಕ್ಷನ್ ಕೊಂಚ ಹೆಚ್ಚಿತ್ತು. ಈಗ ಸೋಮವಾರದ ಗಳಿಕೆಯಲ್ಲಿ ದಿಢೀರ್ ಕುಸಿತ ಕಂಡಿದೆ. ಈ ಚಿತ್ರ ಮೊದಲ ಸೋಮವಾರ 1.40 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ.

ಇಂದಿನಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಕುಸಿಯಬಹುದು. ಹಾಗಾದಲ್ಲಿ ಸಿನಿಮಾಗೆ ಅದು ದೊಡ್ಡ ಹೊಡೆತ. ಡಿಸೆಂಬರ್ 25ರಂದು ‘45’ ಹಾಗೂ ‘ಮಾರ್ಕ್’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವೇಳೆ ‘ಡೆವಿಲ್’ಗೆ ಸಿಕ್ಕ ಶೋ ಸಂಖ್ಯೆ ಕಡಿಮೆ ಆಗಬಹುದು. ಇದು ತಂಡದ ಆತಂಕಕ್ಕೆ ಕಾರಣವಾಗಿದೆ. ಸಿನಿಮಾದ ಒಟ್ಟೂ ಗಳಿಕ 25 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ಇನ್ನು, ‘ಅಖಂಡ 2’ ಮೊದಲ ಸೋಮವಾರದ ಪರೀಕ್ಷೆಯಲ್ಲೇ ಪಾಸ್ ಆಗಿದೆ. ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕ ಹೊರತಾಗಿಯೂ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಸೋಮವಾರ ಈ ಸಿನಿಮಾ ಐದೂವರೆ ಕೋಟಿ ಗಳಿಸಿದ್ದು, ನಾಲ್ಕು ದಿನಕ್ಕೆ ಈ ಚಿತ್ರ 66.45 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: ಸಿಕ್ಕಿದ್ದು ಕೆಟ್ಟ ವಿಮರ್ಶೆಯಾದರೂ ಭಾನುವಾರ ಡೆವಿಲ್​ಗಿಂತ ನಾಲ್ಕುಪಟ್ಟು ಹೆಚ್ಚು ಗಳಿಸಿದ ‘ಅಖಂಡ 2’

ಇನ್ನು, ‘ಧುರಂಧರ್’ ಕಲೆಕ್ಷನ್ ವಿಚಾರದಲ್ಲಿ ಗೆದ್ದು ಬೀಗಿದೆ. ಈ ಸಿನಿಮಾ ಎರಡನೇ ಸೋಮವಾರ 29 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟಾರೆ ಕಲೆಕ್ಷನ್ 379 ಕೋಟಿ ರೂಪಾಯಿ ಆಗಿದೆ. ಈ ಚಿತ್ರ ಶೀಘ್ರವೇ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Tue, 16 December 25