AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ಕ್’ ಚಿತ್ರದ ಹೊಸ ಹಾಡು: ಸುದೀಪ್ ಜತೆ ನಿಶ್ವಿಕಾ ನಾಯ್ಡು ಮಸ್ತ್ ಡ್ಯಾನ್ಸ್

ಕಿಚ್ಚ ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಅವರು ಡ್ಯಾನ್ಸ್ ಮಾಡಿರುವ ‘ಮಸ್ತ್ ಮಲೈಕಾ’ ಹಾಡು ಬಿಡುಗಡೆ ಆಗಿದೆ. ‘ಮಾರ್ಕ್’ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವಾಗ ಚಿತ್ರತಂಡ ಈ ಹಾಡನ್ನು ರಿಲೀಸ್ ಮಾಡಿದೆ. ಈ ಹಾಡಿಗೆ ಕಿಚ್ಚನ ಪುತ್ರಿ ಸಾನ್ವಿ ಸುದೀಪ್ ಅವರು ಧ್ವನಿ ನೀಡಿದ್ದಾರೆ. ಅವರ ಜೊತೆ ನಕಾಶ್ ಅಜೀಜ್ ಹಾಡಿದ್ದಾರೆ.

‘ಮಾರ್ಕ್’ ಚಿತ್ರದ ಹೊಸ ಹಾಡು: ಸುದೀಪ್ ಜತೆ ನಿಶ್ವಿಕಾ ನಾಯ್ಡು ಮಸ್ತ್ ಡ್ಯಾನ್ಸ್
Nishvika Naidu, Kichcha Sudeep
ಮದನ್​ ಕುಮಾರ್​
|

Updated on: Dec 15, 2025 | 7:20 PM

Share

ನಟಿ ನಿಶ್ವಿಕಾ ನಾಯ್ಡು (Nishvika Naidu) ಅವರು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಾತ್ರವಲ್ಲದೇ ಸ್ಪೆಷಲ್ ಸಾಂಗ್​​ಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕವೂ ಮಿಂಚುತ್ತಿದ್ದಾರೆ. ಈಗ ಅವರು ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ (Mark Movie) ಸಿನಿಮಾದ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ‘ಮಸ್ತ್ ಮಲೈಕಾ..’ ಎಂಬ ಈ ಹಾಡು ಈಗ ಬಿಡುಗಡೆ ಆಗಿದೆ. ಸುದೀಪ್ (Kichcha Sudeep) ಮತ್ತು ನಿಶ್ವಿಕಾ ನಾಯ್ಡು ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹೊಸ ವರ್ಷದ ಪಾರ್ಟಿಗಳಲ್ಲಿ ಕೂಡ ಈ ಹಾಡು ಧೂಳೆಬ್ಬಿಸಲಿದೆ. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.

ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ಕ್ರಿಸ್ಮಸ್ ಪ್ರಯುಕ್ತ ತೆರೆಗೆ ಬರಲಿದೆ. ಪ್ರಚಾರ ಕಾರ್ಯ ಕೂಡ ಈಗಾಗಲೇ ಭರದಿಂದ ಸಾಗಿದೆ. ಪ್ರಚಾರದ ಭಾಗವಾಗಿ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಗೆ ಈ ಸಾಂಗ್ ಇಷ್ಟ ಆಗುತ್ತಿದೆ. ಅನೂಪ್ ಭಂಡಾರಿ ಅವರು ಈ ಹಾಡನ್ನು ಬರೆದಿದ್ದಾರೆ.

ಈ ಹಾಡಿನಲ್ಲಿ ಮಲೈಕಾ ಆಗಿ ನಿಶ್ವಿಕಾ ನಾಯ್ಡು ಅವರು ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಈ ಹಾಡು ಬಿಡುಗಡೆ ಆಗಿದೆ. ಕನ್ನಡದಲ್ಲಿ ಈ ಹಾಡಿಗೆ ಸುದೀಪ್ ಮಗಳು ಸಾನ್ವಿ ಮತ್ತು ನಕಾಶ್ ಅಜೀಜ್ ಅವರು ಧ್ವನಿ ನೀಡಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ‘ಸೈಕೋ ಸೈತಾನ್..’ ಹಾಡು ಕೂಡ ಸಖತ್ ಸೌಂಡು ಮಾಡಿದೆ. ಈಗ ‘ಮಸ್ತ್ ಮಲೈಕಾ’ ಬಿಡುಗಡೆ ಆಗಿದೆ.

‘ಮಸ್ತ್ ಮಲೈಕಾ’ ಹಾಡು:

‘ಮ್ಯಾಕ್ಸ್’ ಸಿನಿಮಾ ಖ್ಯಾತಿಯ ವಿಜಯ್ ಕಾರ್ತಿಕೇಯನ್ ಅವರು ‘ಮಾರ್ಕ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆ ಮೂಲಕ ಕಿಚ್ಚ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರು ಮತ್ತೊಮ್ಮೆ ಒಂದಾಗಿ ಕೆಲಸ ಮಾಡಿದ್ದಾರೆ. ‘ಮ್ಯಾಕ್ಸ್’ ರೀತಿಯೇ ‘ಮಾರ್ಕ್’ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂಬ ಭರವಸೆ ಚಿತ್ರತಂಡಕ್ಕೆ ಇದೆ. ಈಗಾಗಲೇ ಟ್ರೇಲರ್ ಗಮನ ಸೆಳೆದಿದೆ.

ಇದನ್ನೂ ಓದಿ: ಮಾರ್ಕ್ ಟ್ರೇಲರ್ ವೀವ್ಸ್ ಪೇಯ್ಡ್ ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ಸುದೀಪ್

‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಜೊತೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ , ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.