ಟಿವಿ9 ವಾಹಿನಿಯ ವಿಲಾಸ್ ನಾಂದೋಡ್ಕರ್, ನಾರಾಯಣಸ್ವಾಮಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ಜೀವಮಾನ ಸಾಧನೆ, ವಾರ್ಷಿಕ ಮತ್ತು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಟಿವಿ9 ವಾಹಿನಿಯ ವಿಲಾಸ್ ನಾಂದೋಡ್ಕರ್ ಮತ್ತು ನಾರಾಯಣಸ್ವಾಮಿ ಅವರಿಗೆ ವಾರ್ಷಿಕ ಪ್ರಶಸ್ತಿ ಲಭಿಸಿದೆ. 30ಕ್ಕೂ ಹೆಚ್ಚು ಪತ್ರಕರ್ತರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಬೆಂಗಳೂರು, ಜನವರಿ 02: ಕರ್ನಾಟಕ ಮಾಧ್ಯಮ ಅಕಾಡೆಮಿಯು 2023, 24ನೇ ಸಾಲಿನ ಜೀವಮಾನ ಸಾಧನೆಯ ವಿಶೇಷ ಪ್ರಶಸ್ತಿ, ವಾರ್ಷಿಕ ಮತ್ತು ವಿವಿಧ ದತ್ತಿ ಪ್ರಶಸ್ತಿಗಳನ್ನು (Karnataka Media Academy Awards) ಗುರುವಾರ ಪ್ರಕಟಿಸಿದೆ. ಟಿವಿ9 ವಾಹಿನಿಯ ಇಬ್ಬರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ವಿಲಾಸ್ ನಾಂದೋಡ್ಕರ್ ಹಾಗೂ ನಾರಾಯಣಸ್ವಾಮಿ ಅವರು ಮಾಧ್ಯಮ ಅಕಾಡೆಮಿ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಟಿವಿ9 ಚೀಫ್ ಎಕ್ಸ್‌ಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ಇನ್‌ಪುಟ್ ಎಡಿಟರ್ ವಿಲಾಸ್ ನಾಂದೋಡ್ಕರ್‌ಗೆ 2023ನೇ ಸಾಲಿನ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಲಾಗಿದ್ದು, ಟಿವಿ9 ಸೀನಿಯರ್ ಪ್ರೋಗ್ರಾಮ್ ಪ್ರೊಡ್ಯೂಸರ್, ಹೀಗೂ ಉಂಟೆ ನಾರಾಯಣಸ್ವಾಮಿ ಅವರಿಗೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ‘ಟಿವಿ9’ನ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ
ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 30 ಪತ್ರಕರ್ತರನ್ನು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಫೆಬ್ರವರಿಯಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2023 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಗಂಗಾಧರ ಮೊದಲಿಯಾರ್, ಪ್ರೊ. ಉಷಾರಾಣಿ.ಎನ್. ಸುಶೀಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಲೈಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯ ಹೆಂಜಾರಪ್ಪ, ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬೆಳ್ಳಿ, ಮನೋಜ್‌ಗೌಡ ಪಾಟೀಲ, ಆನಂದ ಬೈದನಮನೆ, ಮಧು ಜವಳಿ, ಎಂ.ಆರ್. ದಿನೇಶ್, ತಾರಾನಾಥ್, ಕೆ. ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು (ಪುಂಡಲೀಕ ಪೈ) ಭಾವನಾ ನಾಗಯ, ಹನುಮಾನ್ ಸಿಂಗ್ ಜಮಾದಾರ್, ಜೈಮುನಿ, ಶಿವಮೂರ್ತಿ ಗುರುಮಠ, ಸಿರಾಜ್ ಬಿಸ್ಸಳ್ಳಿ.
2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಪ್ರೊ. ಎಎಸ್. ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ. ಗುರುರಾಜ್, ಕುಮಾರನಾಥ್ ಯುಕೆ, ಸಿದ್ದು ಕಾಳೋಜಿ, ಆರ್.ಕೆ. ಜೋಷಿ, ಪ್ರಕಾಶ್ ಶೇರ್, ಆರುಂಡಿ ಶ್ರೀನಿವಾಸ ಮೂರ್ತಿ, ರವೀಶ್ ಹೆಚ್.ಎಸ್, ಭಾನುಪ್ರಕಾಶ್, ಮಹೇಶ ಶೆಟಗಾರ, ರಮೇಶ್ ಜಹಗೀರದಾರ, ನಿರುಪಮಾ, ದಿನೇಶ್ ಗೌಡಗೆರೆ, ಡಿ.ಸಿ. ಮಹೇಶ್, ಹೆಚ್.ಎಸ್.ಹರೀಶ್, ಶರಣಯ್ಯ ಒಡೆಯರ್, ಅಶ್ವಿನಿ ಎಂ. ಶ್ರೀಪಾದ, ರಿಜ್ಞಾನ್ ಅಸದ್, ಬನ್ನಿ ಕಾಳಪ್ಪ, ಮನುಜಾ ವೀರಪ್ಪ, ಜಯಂತ್ ಜಿ, ವಿಖಾರ್ ಅಹ್ಮದ್ ಸಯೀದ್, ಡಿ.ಎನ್. ಶಾಂಭವಿ ನಾಗರಾಜ್, ರಮೇಶ್ (ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, అನೀಸ್ ನಿಸಾರ್ ಹಮೀದ್, ಸಂದೀಪ್ ಸಾಗರ್.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:03 pm, Thu, 2 January 25