Tech Tips: ಬೇಸಿಗೆಯ ಬಿಸಿಲಿನಲ್ಲಿ ಬಾಂಬ್​ನಂತೆ ಸಿಡಿಯುತ್ತೆ ಮೊಬೈಲ್​ಗಳು: ನಿರ್ಲಕ್ಷಿಸದಿರಿ

Mobile Blast: ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣದಲ್ಲಿ ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಚಾರ್ಜ್​ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಪ್ರೊಸೆಸರ್​ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗಿ ಮೊಬೈಲ್​ ಬೇಗನೇ ಬಿಸಿಯಾಗುತ್ತದೆ.

Tech Tips: ಬೇಸಿಗೆಯ ಬಿಸಿಲಿನಲ್ಲಿ ಬಾಂಬ್​ನಂತೆ ಸಿಡಿಯುತ್ತೆ ಮೊಬೈಲ್​ಗಳು: ನಿರ್ಲಕ್ಷಿಸದಿರಿ
Mobile Blast
Follow us
Vinay Bhat
|

Updated on: Mar 12, 2024 | 3:10 PM

ಭಾರತದಲ್ಲಿ ಬೇಸಿಗೆ ಬಿಸಿಲು (Summer 2024) ವಿಪರೀತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಯ ತಾಪಮಾನ ಏರಿಕೆ ಆಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ. ಹಲವು ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ದಾಟಿದೆ. ದೆಹಲಿಯ ಬಹುತೇಕ ಎಲ್ಲಾ ಭಾಗವು ತೀವ್ರ ಶಾಖದ ಪರಿಣಾಮದಿಂದ ಅಪಾಯದಲ್ಲಿದೆ ಎಂದು ಇತ್ತೀಚೆಗಷ್ಟೆ ವರದಿ ಹೇಳಿತ್ತು. ಈ ಬಿಸಿಲ ಬಿಸಿ ಸ್ಮಾರ್ಟ್​ಫೋನ್​ಗಳಿಗೂ ತಟ್ಟಿದೆ. ಮೊಬೈಲ್​ಗಳು ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಈಗಿರುವ ಫಾಸ್ಟ್ ಚಾರ್ಜರ್​ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್​ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್ ಆಗುತ್ತಿದೆ. ಹಾಗಾದರೆ ಬಿಸಿಲ ಬೇಗೆಯಿಂದ ನಿಮ್ಮ ಮೊಬೈಲ್ ಅನ್ನು ತಂಪಾಗಿಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.

ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣದಲ್ಲಿ ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಚಾರ್ಜ್​ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಪ್ರೊಸೆಸರ್​ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗಿ ಮೊಬೈಲ್​ ಬೇಗನೇ ಬಿಸಿಯಾಗುತ್ತದೆ. ತಾಪಮಾನ ಕೂಡ ಅಧಿಕವಿರುವ ಕಾರಣ ಹೆಚ್ಚಿನ ಸಂದರ್ಭದಲ್ಲಿ ಇದು ಬ್ಲಾಸ್ಟ್​ ಕೂಡಾ ಆಗುತ್ತದೆ. ಚಾರ್ಜ್ ಮಾಡುವಾಗ ಕೆಲವು ಫೋನ್‌ಗಳು ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತವೆ ಎಂಬುದು ನಿಮಗೆ ಗೊತ್ತಿರಲಿ.

ಭಾರತದಲ್ಲಿ ಮೊದಲ ಬಾರಿಗೆ ನಥಿಂಗ್ ಫೋನ್ 2a ಮಾರಾಟ ಶುರು: ಬೆಲೆ, ಫೀಚರ್ಸ್ ಏನಿದೆ?

ಇನ್ನು ಕಾರನ್ನು ನಿಲ್ಲಿಸುವಾಗ ಮತ್ತು ಲಾಕ್ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಕಾರಿನಲ್ಲಿ ಇಡುತ್ತಾರೆ. ಬೇಸಿಗೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತದೆ. ಇಂತಹ ಬಿಸಿ ವಾತಾವರಣದಲ್ಲಿ ಸೆಲ್ ಫೋನ್ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನದ ಸ್ಥಿತಿಯಲ್ಲಿ ಇರಿಸಿದಾಗ ಐಫೋನ್ ಬ್ಯಾಟರಿಗಳು ವಿಶೇಷವಾಗಿ ಪರಿಣಾಮ ಬೀರುತ್ತವೆ ಎಂದು ಗಮನಿಸಬೇಕು. ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚು ಬಿಸಿ ಆದರೆ ಸ್ಮಾರ್ಟ್​ಫೋನ್​ಗಳು ಸ್ಪೋಟಗೊಳ್ಳಬಹುದು.

ಸ್ಮಾರ್ಟ್‌ಫೋನ್‌ಗಳು ಇತರೆ ವಸ್ತುವಿನಂತೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸೂರ್ಯನ ಬೆಳಕಿಗೆ ಒಡ್ಡುವುದನ್ನು ತಪ್ಪಿಸಿ. ಸ್ಮಾರ್ಟ್‌ಫೋನ್ ಅನ್ನು ತಂಪಾದ, ಶುಷ್ಕ ಸ್ಥಳದಲ್ಲಿರಿಸಿ ಚಾರ್ಜ್ ಮಾಡಿ. ಅಂತೆಯೆ ನಿಮ್ಮ ಮೊಬೈಲ್​​ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಕಂಪ್ಯೂಟರ್​​ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ.

ಇಂದಿನ ದಿನದಲ್ಲಿ ಬಳಕೆದಾರರು ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಅನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಫ್ಯಾಷನ್​​ಗಾಗಿಯೂ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ. ಇದರಿಂದ ಬ್ಯಾಟರಿ ಬಾಳಿಕೆ ಮತ್ತು ವೇಗವಾಗಿ ಚಾರ್ಜ್ ಆಗಲಿದೆ. ಮೊಬೈಲ್ ಬಿಸಿಯಾಗುವುದು ಕೂಡ ತಪ್ಪಲಿದೆ.

50MP ಕ್ಯಾಮೆರಾ, ಫಾಸ್ಟ್ ಚಾರ್ಜರ್: ಭಾರತದಲ್ಲಿ ಬಹುನಿರೀಕ್ಷಿತ ಐಕ್ಯೂ Z9 5G ಫೋನ್ ಬಿಡುಗಡೆ

ನಾವು ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್​ಗಳನ್ನು ತೆಗೆಯದೆ ಇದ್ದಾಗ, ಫೋನಿನ ವೇಗ ಕಡಿಮೆಯಗುವುದಲ್ಲದೆ ನಮ್ಮ ಮೊಬೈಲ್ ಬಿಸಿ ಆಗಬಹುದು. ಇದಕ್ಕಾಗಿ ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಸ್ವಯಂ ಚಾಲನೆಯಲ್ಲಿ ಇರುತ್ತದೆ. ಹಾಗೆಯೆ ಬಹಳ ಸಮಯ Wi-Fi ಮತ್ತು HotSpot ಬಳಸಿದರೆ ನಮ್ಮ ಮೊಬೈಲ್ ಬಿಸಿ ಬರುತ್ತದೆ.

ಮನೆಯ ಒಳಗಡೆ ಮತ್ತು ರಾತ್ರಿಯ ಸಮಯದಲ್ಲಿ ಬ್ರೈಟ್ ನೆಸ್ ಅಧಿಕವಾಗಿ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಆಗ ಬ್ರೈಟ್ ಕಡಿಮೆಗೊಳಿಸಿ, ಇದರಿಂದ ಮೊಬೈಲ್ ಬಿಸಿ ಆಗುವುದು ತಪ್ಪುತ್ತದೆ. ಇನ್ನು ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಈ ಅಭ್ಯಾಸ ರೂಡಿಸಿಕೊಂಡರೆ ಒಳ್ಳೆಯದರು. ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿರಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್