ಸಿಂಗಲ್ ಆಗಿರೋನೇ ಸಿಂಹ: ಅಸಲಿ ಆಟ ತೋರಿಸಲು ರೆಡಿಯಾದ ಲಾಯರ್ ಜಗದೀಶ್

ಸಿಂಗಲ್ ಆಗಿರೋನೇ ಸಿಂಹ: ಅಸಲಿ ಆಟ ತೋರಿಸಲು ರೆಡಿಯಾದ ಲಾಯರ್ ಜಗದೀಶ್

ಮದನ್​ ಕುಮಾರ್​
|

Updated on: Oct 01, 2024 | 8:24 PM

ತಮ್ಮದೇ ತಂಡದವರ ವಿರೋಧ ಇದ್ದರೂ ಕೂಡ ಮಾನವೀಯತೆಯ ದೃಷ್ಟಿಯಿಂದ ಬೇರೆಯವರಿಗೆ ಲಾಯರ್​ ಜಗದೀಶ್​ ಸಹಾಯ ಮಾಡಿದ್ದಾರೆ. ಆದ್ದರಿಂದ ಅವರ ತಂಡದವರು ಗರಂ ಆಗಿದ್ದಾರೆ. ಆದರೂ ಕೂಡ ಲಾಯರ್​ ಜಗದೀಶ್​ ಬದಲಾಗಿಲ್ಲ. ‘ಲೀಡರ್​ ಆದವನು ಗುಂಪಲ್ಲಿ ಇರಲ್ಲ. ಸಿಂಗಲ್​ ಆಗಿರೋನೇ ಸಿಂಹ’ ಎಂದು ಘರ್ಜಿಸೋಕೆ ಅವರು ರೆಡಿಯಾಗಿದ್ದಾರೆ.

ಲಾಯರ್​ ಜಗದೀಶ್​ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಮೊದಲ ಸಂಚಿಕೆಯಿಂದಲೇ ಜಗದೀಶ್​ ಗಮನ ಸೆಳೆಯುತ್ತಿದ್ದಾರೆ. ಲಾಯರ್​ ಜಗದೀಶ್​ ಅವರು ಗುಂಪಿನಲ್ಲಿ ಕಾಣೆಯಾಗುತ್ತಿಲ್ಲ. ಸಿಂಗಲ್ ಆಗಿಯೇ ತಮ್ಮ ಅಭಿಪ್ರಾಯವನ್ನು ಹೇಳುವ ಮೂಲಕ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಆ ಬಗ್ಗೆ ಅವರು ನರಕವಾಸಿಗಳ ಜೊತೆ ಮಾತನಾಡಿದ್ದಾರೆ. ಜಗದೀಶ್​ ಅವರ ತಂತ್ರಗಾರಿಕೆ ಬೇರೆ ರೀತಿಯೇ ಇದೆ. ಸ್ವರ್ಗದಲ್ಲಿ ಇರುವ ಅವರು ನರಕದ ಮಂದಿ ಜೊತೆ ಕ್ಲೋಸ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.