Call History Trick: ನಿಮ್ಮ ಫೋನ್ನಿಂದ ನೀವೇ ಕಳೆದ 6 ತಿಂಗಳ ಕಾಲ್ ಹಿಸ್ಟರಿ ತೆಗೆಯಿರಿ: ಹೇಗೆ ಗೊತ್ತೇ?
ಹಿಂದೆಲ್ಲ ಕಾಲ್ ಹಿಸ್ಟರಿ ತೆಗೆಯಬೇಕು ಎಂದರೆ ಅದಕ್ಕೆ ಸಾಕಷ್ಟು ನಿಯಮವಿತ್ತು. ಆದರೀಗ ಕೆಲವು ಸುಲಭ ವಿಧಾನದ ಮೂಲಕ ನಿಮ್ಮ ಮೊಬೈಲ್ನ ಕಾಲ್ ಹಿಸ್ಟರಿಯನ್ನು ಸ್ವತಃ ನೀವೇ ಕ್ಷಣಾರ್ಧದಲ್ಲಿ ತೆಗೆಯಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.
ನಿಮಗೆ ನಿಮ್ಮ ಫೋನ್‌ನ ಕಾಲ್ ಹಿಸ್ಟರಿ ಬೇಕು ಎಂದಾದರೆ ಸೈಬರ್ ಸೆಲ್‌ಗೆ ಅಥವಾ ಟೆಲಿಕಾಂ ಕಂಪನಿಗಳಿಗೆ ಅರ್ಜಿ ಸಲ್ಲಿಸಬೇಕು. ಅವರಿಗೆ ಸೂಕ್ತ ಕಾರಣಗಳನ್ನು ನೀಡಿದ ಬಳಿಕ, ಅವರು ಕಾಲ್ ಹಿಸ್ಟರಿ ನಿಮಗೆ ನೀಡುತ್ತಾರೆ. ಆದರೆ ಇದೀಗ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಈ ಸೇವೆಯನ್ನು ತನ್ನ ಬಳಕೆದಾರರಿಗೆ ಲಭ್ಯಗೊಳಿಸಿದೆ. ಇದರ ಮೂಲಕ ಯಾವುದೇ ನಂಬರ್ನ ಕರೆ ಇತಿಹಾಸವನ್ನು ನೀವೇ ಪಡೆಯಲು ಸಾಧ್ಯವಾಗುತ್ತದೆ. ಏರ್‌ಟೆಲ್ ಮತ್ತು ಜಿಯೋ ತಮ್ಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಂದ ಆರು ತಿಂಗಳ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಸಂಖ್ಯೆಯ ಕಾಲ್ ಹಿಸ್ಟರಿಯನ್ನು ಪಡೆಯುವ ಆಯ್ಕೆ ನೀಡಿದೆ
ಜಿಯೋ ಸಂಖ್ಯೆಯ ಕಾಲ್ ಹಿಸ್ಟರಿ ಪಡೆಯಲು ನೀವು MyJio ಅಪ್ಲಿಕೇಶನ್ ಅನ್ನು ಬಳಸಬೇಕು. ಈ ಅಪ್ಲಿಕೇಶನ್‌ನಿಂದ ಸುಲಭವಾಗಿ ಕಾಲ್ ಹಿಸ್ಟರಿಯನ್ನು ಪಡೆಯಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಬಳಸಿ.
ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಡೌನ್‌ಲೋಡ್ ಮಾಡಿ ಮತ್ತು MyJio ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ. ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ನಿಮ್ಮ ಜಿಯೋ ಸಂಖ್ಯೆಯನ್ನು ಲಿಂಕ್ ಮಾಡಿ. ಈಗ ನೀವು ಮೆನುಗೆ ಹೋಗಿ ಸ್ಟೇಟ್ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನೀವು ಇದನ್ನು ಮಾಡಿದ ತಕ್ಷಣ, ಕೆಲ ಆಯ್ಕೆಗಳು ನಿಮಗೆ ಗೋಚರಿಸುತ್ತವೆ. 7 ದಿನಗಳು, 15 ದಿನಗಳು, 30 ದಿನಗಳು ಹಾಗೂ ಕಸ್ಟಮ್ ಡೇಟ್ ಆಯ್ಕೆ ಇರುತ್ತದೆ. ಇದರಲ್ಲಿ ನಿಮಗೆ ಬೇಕಾಗಿರುವುದನ್ನು ಸೆಲೆಕ್ಟ್ ಮಾಡಿ ಮತ್ತು ವೀವ್ ಸ್ಟೇಟ್ಮೆಂಟ್ ಆಯ್ಕೆಯನ್ನು ಒತ್ತಿರಿ. ಈಗ ಮೇಲ್ಬಾಗದಲ್ಲಿರುವ ಯೂಸೇಜ್ ಚಾರ್ಜೆಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ವಾಯ್ಸ್ ಹಾಗೂ ಕ್ಲಿಕ್ ಹಿಯರ್ ಸೆಲೆಕ್ಟ್ ಮಾಡಿದರೆ ಕಾಲ್ ಹಿಸ್ಟರಿ ಸಿಗುತ್ತದೆ.
ಏರ್‌ಟೆಲ್ ಬಳಕೆದಾರರು ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಆಯ್ಕೆಗಳ ಮೂಲಕ ಕಾಲ್ ಹಿಸ್ಟರಿ ಪಡೆಯಬಹುದು. ಏರ್‌ಟೆಲ್ ಕಸ್ಟಮರ್ ಕೇರ್ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಕೂಡ ನೀವು ಕರೆ ಇತಿಹಾಸವನ್ನು ಪಡೆಯಬಹುದು.
ಏರ್‌ಟೆಲ್ ಸಂಖ್ಯೆಯ ಕಾಲ್ ಹಿಸ್ಟರಿ ಈ ರೀತಿ ಪಡೆಯಿರಿ
ಏರ್‌ಟೆಲ್ ವೆಬ್‌ಸೈಟ್ https://www.airtel.in/ ಗೆ ಹೋಗಿ ಮತ್ತು ಲಾಗ್ ಇನ್ ಮಾಡಿ. ವೆಬ್‌ಸೈಟ್‌ನಲ್ಲಿ ‘ಬಳಕೆಯ ವಿವರಗಳು’ ವಿಭಾಗಕ್ಕೆ ಹೋಗಿ. ಅದರಲ್ಲಿ ಕರೆ ರೆಕಾರ್ಡ್ ವೀಕ್ಷಿಸಲು ಆಯ್ಕೆಯನ್ನು ಆರಿಸಿ. ಕರೆ ದಾಖಲೆಗಳನ್ನು ವೀಕ್ಷಿಸಲು ಬಯಸಿದ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ ಮತ್ತು ಸಬ್ಮಿಟ್ ಕ್ಲಿಕ್ ಮಾಡಿ. ಆಗ ನಿಮ್ಮ ಕರೆ ದಾಖಲೆಯನ್ನು ಡಿಸ್ಪ್ಲೇ ಮೇಲೆ ಪ್ರದರ್ಶಿಸಲಾಗುತ್ತದೆ.
ವೊಡಾಫೋನ್-ಐಡಿಯಾದ ಕಾಲ್ ಹಿಸ್ಟರಿ
ವೊಡಾಫೋನ್-ಐಡಿಯಾದ ಕರೆ ವಿವರಗಳನ್ನು ಆನ್‌ಲೈನ್‌ನಲ್ಲಿ ಹಿಂಪಡೆಯಲು, Myvi.in ವೆಬ್‌ಸೈಟ್‌ಗೆ ಭೇಟಿ ನೀಡಿ. ಸೈನ್-ಇನ್ ಆಯ್ಕೆ ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಲಾಗಿನ್ ಆದ ನಂತರ ನನ್ನ ಖಾತೆಯ ಮೇಲೆ ಕ್ಲಿಕ್ ಮಾಡಿ. ನಂತರ ‘ಯೋಜನೆ ಮತ್ತು ಬಳಕೆಗಳು’ ಆಯ್ಕೆಗೆ ಹೋಗಿ. ‘ಧ್ವನಿ ಬಳಕೆ’ ಆಯ್ಕೆಯನ್ನು ಆರಿಸಿದ ನಂತರ ನೀವು ಹಿಂದಿನ ಕಾಲ್ ಹಿಸ್ಟರಿಯನ್ನು ತೆಗೆದುಹಾಕಬಹುದು.
Published On - 11:04 am, Tue, 1 October 24