Tech Tips: ನಿಮ್ಮ ಬಳಿ ಹೊಸದಾದ ಹಳೆಯ ಬಟ್ಟೆ ಇದೆಯೇ?: ಹಾಗಾದರೆ ಇಲ್ಲಿ ಸೇಲ್ ಮಾಡಿ, ಹಣ ಗಳಿಸಿ

ನಿಮ್ಮ ಹಳೆಯ ಬಟ್ಟೆಗಳನ್ನು ಮಾರಿ ಅದರಿಂದ ಹಣ ಸಂಪಾದಿಸಬಹುದು. ಈಗಾಗಲೇ ಈ ರೀತಿಯ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಭಾರತದಲ್ಲಿ ನಿಮ್ಮ ಹಳೆಯ ಬಟ್ಟೆಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಅದಕ್ಕಾಗಿ ನಿಮಗೆ ಹಣವನ್ನು ಸಹ ನೀಡಲಾಗುತ್ತದೆ.

Tech Tips: ನಿಮ್ಮ ಬಳಿ ಹೊಸದಾದ ಹಳೆಯ ಬಟ್ಟೆ ಇದೆಯೇ?: ಹಾಗಾದರೆ ಇಲ್ಲಿ ಸೇಲ್ ಮಾಡಿ, ಹಣ ಗಳಿಸಿ
ನಿಮ್ಮ ಹಳೆಯ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ, ಹಣ ಗಳಿಸಿ: ಹೇಗೆ
Follow us
| Updated By: Digi Tech Desk

Updated on: Oct 01, 2024 | 11:56 AM

ಮದುವೆ ಸಮಾರಂಭಕ್ಕೆ ಅನೇಕ ಬಾರಿ ನಾವು ದುಬಾರಿ ಬಟ್ಟೆಗಳನ್ನು ಖರೀದಿಸುತ್ತೇವೆ. ಆದರೆ, ಅದನ್ನು ಒಂದೋ ಎರಡೋ ಬಾರಿ ಮಾತ್ರ ಧರಿಸಿ ನಂತರ ಮೂಲೆಗೆ ಹಾಕುತ್ತೇವೆ. ಹೆಣ್ಣುಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ-ವೀಡಿಯೊ ಹಾಕಿದ ನಂತರ ಮತ್ತೆ ಆ ಬಟ್ಟೆಗಳನ್ನು ಧರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಬಹುದೇ?. ನಿಮ್ಮ ಹಳೆಯ ಬಟ್ಟೆಗಳನ್ನು ಮಾರಾಟ ಮಾಡಿ ಉತ್ತಮ ಹಣವನ್ನು ಗಳಿಸುವ ಅಂತಹ 4 ವೆಬ್‌ಸೈಟ್‌ಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ಈ ಕೆಲವು ಅಪ್ಲಿಕೇಶನ್‌ಗಳು ನಿಮಗೆ ಡೋರ್ ಸರ್ವಿಸ್ ಸಹ ಒದಗಿಸುತ್ತವೆ. ಈ ಮೂಲಕ ಅವರೇ ನಿಮ್ಮ ಮನೆಯಿಂದ ಬಟ್ಟೆ ತೆಗೆದುಕೊಂಡು ಹೋಗುತ್ತಾರೆ.

ಹಳೆಯ ಬಟ್ಟೆಗಳನ್ನು ಮಾರಾಟ ಮಾಡಲು ಈ ನಾಲ್ಕು ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತವೆ:

ನಿಮ್ಮ ಹಳೆಯ ಬಟ್ಟೆಗಳನ್ನು ಮಾರಿ ಅದರಿಂದ ಹಣ ಸಂಪಾದಿಸಬಹುದು. ಈಗಾಗಲೇ ಈ ರೀತಿಯ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಭಾರತದಲ್ಲಿ ನಿಮ್ಮ ಹಳೆಯ ಬಟ್ಟೆಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಅದಕ್ಕಾಗಿ ನಿಮಗೆ ಹಣವನ್ನು ಸಹ ನೀಡಲಾಗುತ್ತದೆ. ಇದಕ್ಕಾಗಿ, ಮೀಶೋ, ಫ್ರೀ ಅಪ್, ರಿಲವ್ ಮತ್ತು ಗ್ಲೆಟಾಟ್ ಎಂಬ ಈ ನಾಲ್ಕು ಅಪ್ಲಿಕೇಶನ್‌ಗಳನ್ನು ಉಪಯೋಗಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಯಾವುದೇ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡುವ ಮೂಲಕ ಮಾರಾಟ ಮಾಡಬಹುದು. ಇನ್ಸ್ಟಾಲ್ ಆದ ಬಳಿಕ ನಿಮ್ಮ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ, ಸರಿಯಾದ ವಿಳಾಸವನ್ನು ಭರ್ತಿ ಮಾಡಿದ ನಂತರ ನಿಮ್ಮ ಬಟ್ಟೆಗಳನ್ನು ಮಾರಾಟ ಮಾಡಬಹುದು. GLETOT ನಂತಹ ಅಪ್ಲಿಕೇಶನ್‌ಗಳು ನಿಮಗೆ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸುತ್ತವೆ.

ಇದರ ಹೊರತಾಗಿ, ನೀವು H&M ನಂತಹ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಅವರ ವೆಬ್‌ಸೈಟ್ ಅಥವಾ ಆಫ್‌ಲೈನ್ ಸ್ಟೋರ್‌ನಲ್ಲಿ ಹಿಂತಿರುಗಿಸಿದರೆ, ನೀವು ಶೇಕಡಾ 15 ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ.

ಇದೆಲ್ಲವನ್ನೂ ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ NGO NEAR ME ಎಂದು ಬರೆಯುವ ಮೂಲಕ ಗೂಗಲ್ನಲ್ಲಿ ಹುಡುಕಿ. ನಿಮ್ಮ ಹತ್ತಿರ ಯಾವ NGO ಇದೆಯೊ ಅಲ್ಲಿಗೆ ಹೋಗಿ ನಿಮ್ಮ ಬಟ್ಟೆಗಳನ್ನು ಕೊಡಬಹುದು. ಇದು ನಿಮಗೆ ಹಣವನ್ನು ನೀಡದಿರಬಹುದು ಆದರೆ ಖಂಡಿತವಾಗಿಯೂ ನಿಮಗೆ ಸಂತೋಷವನ್ನು ನೀಡುತ್ತದೆ.

ಬಟ್ಟೆಗಳ ಮರುಮಾರಾಟದ ಮೌಲ್ಯವನ್ನು ಪ್ಲಾಟ್‌ಫಾರ್ಮ್‌ಗಳು ನಿರ್ಧರಿಸುತ್ತವೆ ಎಂಬುದನ್ನು ಗಮನಿಸಿ, ನಿಮ್ಮ ಬಟ್ಟೆಗಳು ಅವರ ನಿಯಮ ಮತ್ತು ಷರತ್ತಿನ ಪ್ರಕಾರ ಸೂಕ್ತವಾಗಿದ್ದರೆ, ಅದಕ್ಕಾಗಿ ಅವರು ನಿಮಗೆ ಉತ್ತಮ ಮೊತ್ತವನ್ನು ನೀಡುತ್ತಾರೆ.

ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್