ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ

ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ

ವಿವೇಕ ಬಿರಾದಾರ
|

Updated on:Oct 02, 2024 | 7:47 AM

ದಸರಾ ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿವೆ. ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಳಗಾವಿ-ಮೀರಜ್​ ನಡುವೆ ವಿಶೇಷ ರೈಲು ಬಿಡಲಾಗಿದೆ.

ಬೆಳಗಾವಿ, ಅಕ್ಟೋಬರ್​ 02: ದಸರಾ (Dasara) ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿವೆ. ಶಾಲಾ ಮಕ್ಕಳಿಗೆ ದಸರಾ ರಜೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯ (South Western Railway) ಬೆಳಗಾವಿ-ಮೀರಜ್​ ನಡುವೆ ವಿಶೇಷ ರೈಲು (Belagavi-Miraj Train) ಬಿಟ್ಟಿದೆ.

ರೈಲುಗಳ ಸಂಖ್ಯೆ 07301/07302 ಬೆಳಗಾವಿ- ಮೀರಜ್-ಬೆಳಗಾವಿ ಮತ್ತು 07303/07304 ಬೆಳಗಾವಿ-ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 30ರವರೆಗೆ ನಡೆಸಲು ಸೂಚಿಸಲಾಗಿತ್ತು. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಸಂಚಾರ ವಿಸ್ತರಿಸಲಾಗಿದೆ.

ರೈಲು ಸಂಖ್ಯೆ 07301: ಬೆಳಗಾವಿ-ಮೀರಜ್ ಕಾಯ್ದಿರಿಸದ ವಿಶೇಷ ರೈಲು ಬೆಳಗಾವಿ ನಿಲ್ದಾಣದಿಂದ ಬೆಳಗ್ಗೆ 6:00 ಗೆ ಹೊರಟು 9:00 ಗಂಟೆಗೆ ಮೀರಜ್ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 07302: ಮೀರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲು ಮೀರಜ್‌ನಿಂದ ಬೆಳಿಗ್ಗೆ 9:50 ಹೊರಟು ಮಧ್ಯಾಹ್ನ 12:50ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ (07303): ಬೆಳಗಾವಿ-ಮೀರಜ್ ರೈಲು ಬೆಳಗಾವಿ ನಿಲ್ದಾಣದಿಂದ ಮಧ್ಯಾಹ್ನ 1:30ಕ್ಕೆ ಹೊರಡಲಿದೆ. ಮತ್ತು ಸಂಜೆ 4:30ಕ್ಕೆ ಮೀರಜ್‌ಗೆ ತಲುಪಲಿದೆ.

ರೈಲು ಸಂಖ್ಯೆ (07304): ಮೀರಜ್-ಬೆಳಗಾವಿ ರೈಲು ಮೀರಜ್‌ನಿಂದ ಸಂಜೆ 5:35ಕ್ಕೆ ಹೊರಟು ರಾತ್ರಿ 8:35ಕ್ಕೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Oct 02, 2024 07:45 AM