ಕೌಟುಂಬಿಕ ಕಲಹ: ಶಿವರಾತ್ರಿಯಂದೆ ಪತ್ನಿಯ ಬರ್ಬರ ಕೊಲೆ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿಯಂದೇ  ಪತಿಯೋರ್ವ ಪತ್ನಿಯನ್ನ ಚಾಕುವಿನಿಂದ ಇರಿದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹ: ಶಿವರಾತ್ರಿಯಂದೆ ಪತ್ನಿಯ ಬರ್ಬರ ಕೊಲೆ
ಆರೋಪಿ ಗಂಡ, ಮೃತ ಪತ್ನಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 09, 2024 | 8:59 PM

ಚಿಕ್ಕಬಳ್ಳಾಪುರ, ಮಾ.09: ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿಯಂದೇ  ಪತಿಯೋರ್ವ ಪತ್ನಿಯನ್ನ ಚಾಕುವಿನಿಂದ ಇರಿದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ನಡೆದಿದೆ. 48 ವರ್ಷದ ನರಸಮ್ಮ ಕೊಲೆಯಾದ ಮಹಿಳೆ. ಪತಿ ಗಂಗುಲಪ್ಪ ಕೊಲೆ ಆರೋಪಿಯಾಗಿದ್ದಾನೆ. ತಡರಾತ್ರಿ ವೇಳೆ ಪತ್ನಿ ನರಸಮ್ಮಳನ್ನ ಜಾನುವಾರುಗಳಿಗೆ ಹುಲ್ಲು ತರಲು ಕರೆದುಕೊಂಡು ಹೋಗಿ, ಹುಲ್ಲಿನ ಬಣವೆಯ ಬಳಿ ಕೊಲೆಗೈದಿದ್ದು, ಕೌಟುಂಬಿಕ ಕಲಹದಿಂದ ಪತ್ನಿಯ ಹತ್ಯೆ ಮಾಡಿದ್ದಾಗಿ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ಘಟನೆ ಸಂಬಂದ ಆರೋಪಿ ಗಂಗುಲಪ್ಪನನ್ನ ಪೊಲೀಸರು ಬಂಧಿಸಿದ್ದು, ಪಾತಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‘

ಈಜಲು ತೆರಳಿದ ಯುವಕ‌ ನೀರು ಪಾಲು

ಕೊಡಗು: ಇದೇ ಮಾರ್ಚ್​.07 ರಂದು ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿದ್ದರು. ಅದರ ಬೆನ್ನಲ್ಲೆ ಇದೀಗ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮದಲ್ಲಿ‌ ಈಜಲು ತೆರಳಿದ ಯುವಕ‌ನಿರು ಪಾಲಾದ ಘಟನೆ ನಡೆದಿದೆ. ಕಂಡಕೆರೆ ಗ್ರಾಮದ ಶರತ್ (24) ಮೃತ ಯುವಕ. ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರಾಮನಗರ: 500 ರೂಪಾಯಿಗೆ ಯುವಕನ ಕೊಲೆ; ಮಲಗೋದಕ್ಕೆ ಜಾಗ ಕೊಟ್ಟು, ಹತ್ಯೆ ಮಾಡಿದವ ಅಂದರ್

ಚಂಡ್ರಕಿ ಬಳಿ ನಾಲ್ಕೈದು ದುಷ್ಕರ್ಮಿಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಬಳಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ. ಚಂಡ್ರಕಿ ಗ್ರಾಮದ ನರಸಿಂಹಲು(48) ಮೃತ ರ್ದುದೈವಿ. ಆಸ್ತಿ ವಿಚಾರವಾಗಿ ನರಸಿಂಹಲುನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಬಳಿಕವೇ ನಿಖರ ಕಾರಣ ತಿಳಿಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Sat, 9 March 24