AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾಳಕೊಪ್ಪ ಪ್ರೇಮಿಗಳ ನಿಶ್ಚಿತಾರ್ಥದ ವೇಳೆ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿಯ ಚಿಕ್ಕ ತಮ್ಮ, ಕಾರಣವೇನು?

Shiralakoppa in Shikaripura: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಪ್ರೇಮಿಗಳು ಮದುವೆಯ ಸಂಭ್ರಮದಲಿದ್ದರು. ಯುವಕನೂ ನಿಶ್ಚಿತಾರ್ಥಕ್ಕೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದ. ಈ ನಡುವೆ ನಿನ್ನೆ ರಾತ್ರಿ ಪ್ರಿಯಕರನ ಕೊಲೆಗೆ ಹುಡುಗಿಯ ತಮ್ಮ ಯತ್ನ ನಡೆಸಿದ ಘಟನೆಯಿಂದ ಕುಟುಂಬಕ್ಕೆ ದೊಡ್ಡ ಆಘಾತ. ಸದ್ಯ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮದ ಬದಲಿಗೆ ನೋವು ಕಣ್ಣೀರಿನಲ್ಲಿ ಕುಟುಂಬಸ್ಥರು ಮುಳುಗಿದ್ದಾರೆ..

ಶಿರಾಳಕೊಪ್ಪ ಪ್ರೇಮಿಗಳ ನಿಶ್ಚಿತಾರ್ಥದ ವೇಳೆ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿಯ ಚಿಕ್ಕ ತಮ್ಮ, ಕಾರಣವೇನು?
ನಿಶ್ಚಿತಾರ್ಥದ ವೇಳೆ ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿಯ ಚಿಕ್ಕ ತಮ್ಮ
Basavaraj Yaraganavi
| Edited By: |

Updated on:Mar 09, 2024 | 9:53 AM

Share

ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ವಿರೋಧದ ಹಿನ್ನೆಲೆ ಮದುವೆಯಾಗಬೇಕೆಂದು ಪ್ರೇಮಿಗಳು ಮನೆಬಿಟ್ಟು ಹೋಗಿದ್ದರು. ಆದರೂ ಕುಟುಂಬಸ್ಥರು ಇಬ್ಬರನ್ನೂ ಮನವೊಲಿಸಿ ವಾಪಸ್ ಕರೆಸಿದ್ದರು. ನಿನ್ನೆ ಶುಕ್ರವಾರ ಪ್ರೇಮಿಗಳ ಮದುವೆ ನಿಶ್ಚಿತಾರ್ಥವಿತ್ತು. ಯುವತಿಯ ತಮ್ಮನು ನಿನ್ನೆ ರಾತ್ರಿ ಪ್ರೇಮಿಯ ಹೊಟ್ಟೆಗೆ ಚಾಕು ಇರಿದ್ದಾನೆ. ಈ ಘಟನೆಯಿಂದ ಪ್ರೇಮಿಗಳ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿದೆ. ಪ್ರೇಮಿಯು ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾನೆ. ಲವರ್ ಗೆ ಚಾಕು ಇರಿತ ಶಾಕ್ ಕುರಿತು ಒಂದು ವರದಿ ಇಲ್ಲಿದೆ.

ಸಲ್ಮಾನ್ ಅಲಿಯಾಸ್ ಸೈಯದ್ ಗೂಡು ಮತ್ತು ಯುವತಿಯು ಪ್ರೀತಿಸುತ್ತಿದ್ದರು. ಇಬ್ಬರದ್ದೂ ಒಂದೇ ಮುಸ್ಲಿಂ ಜಾತಿ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಇಬ್ಬರೂ ಪ್ರೇಮಿಗಳು ವಾಸವಾಗಿದ್ದರು. ಒಂದೇ ಊರು. ಪ್ರೇಮಿಗಳು ಕೆಲವು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಈ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪುವುದಿಲ್ಲ ಎನ್ನುವ ಭಯ ಆ ಪ್ರೇಮಿಗಳನ್ನು ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಪ್ರೇಮಿಗಳು ಒಂದಾಗಬೇಕೆಂದು ಡಿಸೈಡ್ ಮಾಡಿದ್ದರು.

ಪ್ರೇಮಿಗಳು ಗಪ್ ಚುಪ್ ಆಗಿ ಮನೆ ಬಿಟ್ಟು ಓಡಿಹೋಗಿದ್ದರು. ಇಬ್ಬರೂ ಲವ್ ಮ್ಯಾರೇಜ್ ಆಗುವ ನಿರ್ಧಾರ ಮಾಡಿದ್ದರು. ಈ ಇಬ್ಬರೂ ಓಡಿಹೋಗಿರುವ ವಿಷಯವು ಗೊತ್ತಾಗಿತ್ತು. ಇಬ್ಬರನ್ನೂ ಮನವೊಲಿಸಿ, ಇಬ್ಬರಿಗೂ ಮದುವೆ ಮಾಡುವುದಾಗಿ ಪ್ರೇಮಿಗಳನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಇಂದು ಸಂಜೆ ಯುವತಿಯ ಮನೆಯಲ್ಲಿ ಮದುವೆಯ ನಿಶ್ಚಿತಾರ್ಥವಿತ್ತು. ಆದ್ರೆ ಇದಕ್ಕೂ ಮೊದಲು ಯುವತಿಯ ಸಹೋದರ ಜಬೀ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಪ್ರಿಯಕರ ಸಲ್ಮಾನ್ ನ್ನು ಪಟ್ಟಣದಿಂದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ. ಯುವತಿಯ ಸಹೋದರನಿಗೆ ಈ ಲವ್ ಮ್ಯಾರೇಜ್ ಇಷ್ಟರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಕ ಪ್ರೀತಿಸಿದ ಪ್ರಿಯಕರನ ಕಥೆ ಮುಗಿಸಲು ತಮ್ಮ ಡಿಸೈಡ್ ಮಾಡಿದ್ದನಂತೆ. ತಕ್ಷಣ ಯುವಕನನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಹೀಗೆ ಲವ್ ಮಾಡಿ ಇನ್ನೇನು ಮದುವೆಯಾಗುವ ಖುಷಿಯಲ್ಲಿದ್ದ ಪ್ರಿಯಕರನಿಗೆ ದೊಡ್ಡ ಶಾಕ್. ಉಪಾಯದಿಂದ ನಿನ್ನೆ ರಾತ್ರಿ ಸ್ನೇಹಿತನೊಬ್ಬನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಶಿರಾಳಕೊಪ್ಪದ ಹೊರವಲಯದಲ್ಲಿ ಪ್ರಿಯಕರ ಮೇಲೆ ಸೇಡು ತೀರಿಸಿಕೊಳ್ಳಲು ಅಲ್ಲಿ ಪ್ರೇಯಸಿಯ ತಮ್ಮ ಜಬೀ ಕಾದು ಕುಳಿತಿದ್ದ. ಪ್ರಿಯಕರನ ತಮ್ಮನನ್ನು ನೋಡಿದ ಪ್ರಿಯಕರನಿಗೆ ಅಚ್ಚರಿಯಾಗಿದೆ.

ಇದನ್ನೂ ಓದಿ: ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಈ ನಡುವೆ ಯಾವುದೋ ಮಾಯದಲ್ಲಿ ಕೈಯಲ್ಲಿದ್ದ ಚಾಕು ತೆಗೆದು ಅಕ್ಕನ ಮದುವೆಯಾಗುವ ಸಲ್ಮಾನ್ ನ ಹೊಟ್ಟೆಗೆ ತಮ್ಮ ಜಬೀ ಚಾಕುವಿಂದ ಇರಿದ್ದಾನೆ. ಚಾಕು ಇರಿದ ಬಳಿಕ ಜಬೀ ಕ್ಷಣಾರ್ಧದಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಹೀಗೆ ಪ್ರೀತಿಸಿದ ಯುವತಿಯನ್ನೇ ಮದುವೆಯಾಗುತ್ತಿರುವ ಖುಷಿಯಲ್ಲಿ ಸಲ್ಮಾನ್ ಇದ್ದನು. ಆದರೆ ತನ್ನ ಅಕ್ಕನ ಲವ್ ಮಾಡಿ ಕುಟುಂಬಕ್ಕೆ ಕೆಟ್ಟು ಹೆಸರು ತಂದಿರುವ ಪ್ರಿಯಕರಿಗೆ ಬುದ್ದಿ ಕಲಿಸಲು ತಮ್ಮನು ಮುಂದಾಗಿದ್ದನು.

ಈ ಪ್ರಕರಣದಲ್ಲಿ ಶಿರಾಳಕೊಪ್ಪ ಪೊಲೀಸರು ಜಬೀಯನ್ನು ಬಂಧಿಸಿದ್ದಾರೆ. ಈತನ ಜೊತೆ ಇದ್ದ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸಲ್ಮಾನ್ ಅದೃಷ್ಟ ಚೆನ್ನಾಗಿತ್ತು. ಹೊಟ್ಟೆಗೆ ಚಾಕು ಇರಿದು ಗಂಭೀರವಾಗಿ ಗಾಯಗೊಂಡಿದ್ದರೂ ನಿನ್ನೆ ತಡರಾತ್ರಿ ಶಿರಾಳಕೊಪ್ಪದ ಕಾಂಗ್ರೆಸ್ ಮುಖಂಡ ಬಿಲಾಲ್ ಅವರೇ ಸ್ವತಃ ಅಂಬುಲೆನ್ಸ್ ಮೂಲಕ ಸಲ್ಮಾನನ್ನು ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಸೂಕ್ತ ಸಮಯದಲ್ಲಿ ಸಲ್ಮಾನನಿಗೆ ಚಿಕಿತ್ಸೆ ಸಿಕ್ಕಿದ್ದರಿಂದ ಆತ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದಾಳಿಯಲ್ಲಿ ಗಾಯಾಳು ಪರಿಸ್ಥಿತಿ ಗಂಭೀರವಾಗಿತ್ತು. ಈಗ ಚಿಕಿತ್ಸೆ ಬಳಿಕ ಆತನ ಆರೋಗ್ಯ ಸ್ಥಿರವಾಗಿರುವ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:44 am, Sat, 9 March 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್