ಅಕ್ರಮ ಸಂಬಂಧದಿಂದ ಮಗು ಜನನ; ಹುಟ್ಟುತ್ತಲೇ ಕುತ್ತಿಗೆ ಹಿಚುಕಿ ಕೊಂದ‌ ತಂದೆ, ಅಜ್ಜಿ

ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಚುಕಿ ಕೊಂದ ಧಾರುಣ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ(Kushalnagar) ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಕೂಡಲೇ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಅಕ್ರಮ ಸಂಬಂಧದಿಂದ ಮಗು ಜನನ; ಹುಟ್ಟುತ್ತಲೇ ಕುತ್ತಿಗೆ ಹಿಚುಕಿ ಕೊಂದ‌ ತಂದೆ, ಅಜ್ಜಿ
ಆರೋಪಿ ತಂದೆ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 10, 2024 | 2:42 PM

ಕೊಡಗು, ಮಾ.10: ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಚುಕಿ ಕೊಂದ ಧಾರುಣ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ(Kushalnagar) ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ. ತಂದೆ ಕುಮಾರ (37), ಅಜ್ಹಿ ಯಮುನಾ (57) ಕೊಲೆ ಆರೋಪಿಗಳು. ಇಬ್ಬರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗಳು ಕೊಂದ ಬಳಿಕ‌ ಮೃತ ಹಸುಗೂಸನ್ನು ಗದ್ದೆಯಲ್ಲಿ ಹೂತಿಟ್ಟಿದ್ದಾರೆ.

ಘಟನೆ ವಿವರ

ಆರೋಪಿ ಕುಮಾರ್​ ವಿವಾಹಿತನಾಗಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಹೆರಿಗೆಗೆಂದು ಕುಮಾರನ ಪತ್ನಿ ತವರಿಗೆ ತೆರಳಿದ್ದಳು. ಇದೇ‌ ಸಂದರ್ಭ ತುಂಬು ಗರ್ಭಿಣಿ ಯುವತಿಯನ್ನ ಮನೆಗೆ ಕರೆತಂದ ಕುಮಾರ್​, ಮಗು ಜನಿಸಿದ ಬಳಿಕ‌ ತಾನೇ ಸಾಕುವುದಾಗಿ ಪ್ರೇಯಸಿಗೆ ಭರವಸೆ ನೀಡಿದ್ದಾನೆ. ಬಳಿಕ ಕುಮಾರ್​  ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ‌ನೀಡಿದ್ದಾಳೆ. ಯಾವಾಗ ಯುವತಿ ಮನೆಯಿಂದ‌ ತೆರಳಿದಳೋ ತಕ್ಷಣ ಮಗುವಿನ ಹತ್ಯೆ ಮಾಡಿದ್ದಾರೆ. ಇಂದು(ಮಾ.10) ಬೆಳಗ್ಗಿನ ಜಾವ ಗದ್ದೆಯಲ್ಲಿ ಮೃತ ಹಸುಗೂಸಿನ ತಂದೆ ಕುಮಾರ್​ ಹಾಗೂ ಅಜ್ಜಿ ಜಾನಕಿ ಗುಂಡಿ ತೆಗೆದಿದ್ದಾರೆ.  ಇದನ್ನ ಸ್ಥಳೀಯ ನಿವಾಸಿಗಳು ಗಮನಿಸಿ, ಶಂಕೆಯಿಂದ ಮಣ್ಣು ತೆಗೆದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ.

ಇದನ್ನೂ ಓದಿ:‘ರಾಮನಗರ: 500 ರೂಪಾಯಿಗೆ ಯುವಕನ ಕೊಲೆ; ಮಲಗೋದಕ್ಕೆ ಜಾಗ ಕೊಟ್ಟು, ಹತ್ಯೆ ಮಾಡಿದವ ಅಂದರ್

ಸಾಲಗಾರರ ಕಾಟಕ್ಕೆ ಬೇಸತ್ತು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿಯಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ಮನೆಯಲ್ಲೇ ವಿಷ ಸೇವಿಸಿ ಶಶಿಕುಮಾರ್(35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ಲಕ್ಷ ರೂಪಾಯಿ ಸಾಲ ಇದೆ, ತೀರಿಸಲು ಕಷ್ಟ ಆಗುತ್ತಿದೆ. ಅಮ್ಮ ಹಣ ಕೊಡ್ತಿಲ್ಲವೆಂದು ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 6 ತಿಂಗಳಿಂದ ಪತ್ನಿ ಮಾಲಾ ತವರು ಮನೆ ಸೇರಿದ್ದರು, ಸಾಲ ಹಾಗೂ ಪತ್ನಿ ವಿಷಯವಾಗಿ ನೊಂದಿದ್ದ ಶಶಿಕುಮಾರ್, ಇಂದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು  ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್