ಕಾಲೇಜು ವಿದ್ಯಾರ್ಥಿಗಳ ಯಡವಟ್ಟಿನಿಂದ ಆತಂಕ: ಕಿಡ್ನಾಪ್ ಮಾಡಲಾಗ್ತಿದೆ ಎಂದು ಮೆಸೇಜ್, ಮುಂದೇನಾಯ್ತು?
ಬನ್ನೇರುಘಟ್ಟ (Bannerughatta) ರಸ್ತೆಯ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳು ಆಟೋ ಚಾಲಕರ ಮೇಲೆ ಆರೋಪ ಮಾಡಿ ಕಾಲೇಜು ವಿದ್ಯಾರ್ಥಿನಿಯರನ್ನ ಕಿಡ್ನಾಪ್(Kidnap) ಮಾಡಲಾಗ್ತಿದೆ ಎಂದು ಮೆಸೇಜ್ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಹುಳಿಮಾವು ಪೊಲೀಸರು, ತನಿಖೆ ಮಾಡಿ ಅಸಲಿ ಸಂಗತಿ ಬಯಲು ಮಾಡಿದ್ದಾರೆ.
ಬೆಂಗಳೂರು, ಮಾ.27: ಕಾಲೇಜು ವಿದ್ಯಾರ್ಥಿನಿಯರನ್ನ ಕಿಡ್ನಾಪ್(Kidnap) ಮಾಡಲಾಗ್ತಿದೆ ಎಂದು ಬನ್ನೇರುಘಟ್ಟ (Bannerughatta) ರಸ್ತೆಯ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳು ಆಟೋ ಚಾಲಕರ ಮೇಲೆ ಆರೋಪ ಮಾಡಿ ಮೆಸೇಜ್ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಹುಳಿಮಾವು ಪೊಲೀಸರು, ತನಿಖೆ ಮಾಡಿ ಅಸಲಿ ಸಂಗತಿ ಬಯಲು ಮಾಡಿದ್ದಾರೆ. ಹೌದು, ಆಟೋ ಚಾಲಕರು ವಿದ್ಯಾರ್ಥಿನಿಯರನ್ನ ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮೆಸೇಜ್ ಮಾಡಿದ್ದರು.
ವಿದ್ಯಾರ್ಥಿಗಳ ಯಡವಟ್ಟಿನಿಂದ ಆತಂಕ!
ಬಳಿಕ ಪೊಲೀಸರು ಆಟೋ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಯುವತಿಯ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು, ‘ಓಲಾದಲ್ಲಿ ಆಟೋ ಒಂದನ್ನ ಬುಕ್ ಮಾಡಿದ್ದ ಯುವತಿ, ಆಟೋ ಕಾಲೇಜು ಬಳಿ ಬರ್ತಿದ್ದಂತೆ ಮತ್ತೊಂದು ಆಟೊ ಹತ್ತಿ ಕೂತಿದ್ದಾಳೆ. ಈ ವೇಳೆ ನನಗೆ 50 ರೂಪಾಯಿ ಲಾಸ್ ಆಗುತ್ತದೆ, ನೀವು ಹೀಗೆ ಮಾಡಿದ್ರೆ ಹೇಗೆ ಎಂದು ಆಟೋ ಚಾಲಕ ಪ್ರಶ್ನೆ ಮಾಡಿದ್ದಾನೆ. ಈ ಹಿನ್ನಲೆ ವಿದ್ಯಾರ್ಥಿನಿ ಮತ್ತು ಆಟೋ ಚಾಲಕನ ಮಧ್ಯೆ ಮಾತುಕತೆ ನಡೆದಿದೆ. ಇದನ್ನೇ ವಿದ್ಯಾರ್ಥಿನಿಯರ ಅಪಹರಣ ಎಂದು ವಿದ್ಯಾರ್ಥಿಗಳು ಸುದ್ದಿ ಹಬ್ಬಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಅ್ಯಂಡ್ ಗ್ಯಾಂಗ್; ಮೂವರು ಅರೆಸ್ಟ್
ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ; ಅಬಕಾರಿ ಅಧಿಕಾರಿಗಳಿಂದ ಮದ್ಯ ಸೀಜ್
ಯಾದಗಿರಿ: ನಗರದ ಗೌತಮ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ಅಬಕಾರಿ ಅಧಿಕಾರಿಗಳು ನಡೆಸಿ 13.28 ಲಕ್ಷ ಮೌಲ್ಯದ 2120 ಲೀಟರ್ ಬಿಯರ್ ಹಾಗೂ 1070 ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಹೋಳಿ ಹಬ್ಬದ ಹಿನ್ನಲೆ ಮಾರ್ಚ್ 24 ರ ಸಂಜೆ 6 ಗಂಟೆಯಿಂದ ಮಾರ್ಚ್ 27 ರ ಬೆಳಗ್ಗೆ 6 ಗಂಟೆ ವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಸುಶೀಲಾ.ಬಿ ಆದೇಶ ಹೊರಡಿಸಿದ್ದರು. ಮಾರಾಟಕ್ಕೆ ನಿಷೇಧವಿದ್ದರೂ ಕೂಡ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಸರಿಯಾದ ಮಾಹಿತಿ ಮೇರೆ ಅಬಕಾರಿ ಉಪ ಆಯುಕ್ತೆ ಶಾರದಾ ಕೋಲಕರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
Published On - 10:04 pm, Wed, 27 March 24