ಬೆಂಗಳೂರು ನಗರ DHO ಡಾ. ಶ್ರೀನಿವಾಸ್ ವಿರುದ್ಧ ಲಂಚ ಆರೋಪ: ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಮುಖ್ಯ ಕಚೇರಿಯಲ್ಲಿ ಡಿಹೆಚ್ಓ ಡಾ. ಶ್ರೀ ನಿವಾಸ್ ವಿರುದ್ಧ ಲಂಚ ಪಡೆದ ಆರೋಪ ಮಾಡಲಾಗಿದೆ. ಈ ಕುರಿತಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ ಪ್ರತಿಭಟನೆ ಮಾಡಿದರು.
ಬೆಂಗಳೂರು: ನಗರದ ಡಿಎಚ್ಓ ಡಾ. ಶ್ರೀನಿವಾಸ್ ವಿರುದ್ಧ ಮುಖ್ಯ ಕಚೇರಿಯಲ್ಲೇ ಲಂಚ ಪಡೆದಿರುವುದಾಗಿ ಆರೋಪ ಮಾಡಲಾಗಿದ್ದು, ಬಿಳಿ ಬಣ್ಣದ ಕವರ್ನಲ್ಲಿ ಡಾ. ಶ್ರೀನಿವಾಸ್ಗೆ 500 ರೂಪಾಯಿ ನೋಟುಗಳಿದ್ದ 4 ಕವರ್ನ್ನು ಅಪರಿಚಿತ ವ್ಯಕ್ತಿಗಳು ನೀಡಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಮಧ್ಯಾಹ್ನ 3ರ ಸುಮಾರಿಗೆ ಡಿಎಚ್ಓ ಲಂಚ ಪಡೆದಿರುವುದಾಗಿ ಆರೋಪಿಸಿದ್ದು, ಡಾ. ಶ್ರೀನಿವಾಸ್ಗೆ ಇಬ್ಬರು ಹಣ ನೀಡುವ ದೃಶ್ಯ ಟಿವಿ 9ಗೆ ಲಭ್ಯವಾಗಿದೆ. ಹಣದ ಕವರ್ ನೀಡಿದ ಬಳಿಕ ಆಪ್ ಕಾರ್ಯಕರ್ತರಿಂದ DHOಗೆ ಪ್ರಶ್ನೆ ಮಾಡಿದ್ದು, ಆನ್ಲೈನ್ ಫೀಸ್ ಕಟ್ಟಲು ಹಣ ನೀಡಿದ್ದಾರೆ ಎಂದು ಡಿಹೆಚ್ಒ ಉತ್ತರ ನೀಡಿದ್ದಾರೆ. ಫೀಸ್ ಬಗ್ಗೆ ಪ್ರಶ್ನೆ ಮಾಡಿದಾಗ ಮತ್ತೊಂದು ಉತ್ತರ ನೀಡಿದ ಡಿಹೆಚ್ಒ, ಹಣ ಕೊಟ್ಟವರು ಯಾರು ಎಂದು ನನಗೆ ಗೊತ್ತೇ ಇಲ್ಲ ಎಂದು ಡಾ. ಶ್ರೀನಿವಾಸ್ ಹೇಳಿದರು. ಈ ವೇಳೆ ಕಚೇರಿಯಿಂದ ತಪ್ಪಿಸಿಕೊಳ್ಳಲು ಡಿಹೆಚ್ಒ ಡಾ. ಶ್ರೀನಿವಾಸ್ ಯತ್ನಿಸಿದ್ದು, ಕಾರಿನ ಮುಂದೆ ಮಲಗಿ ಆಪ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ ಬಿಟ್ಟು ನಡೆದುಕೊಂಡೇ ತೆರಳಿದರು.
ಪ್ರಕರಣ ಏನು ಅಂತ ನೋಡೋದಾದ್ರೆ:
ಯಲಹಂಕ ಭಾಗದಲ್ಲಿ ಕ್ಲೋಸ್ ಆಗಿದ್ದ ಪ್ರಾರ್ಥಮಿಕ ಆರೋಗ್ಯ ಕೇಂದ್ರವನ್ನು ಮತ್ತೆ ಓಪನ್ ಮಾಡುವಂತೆ ಮನವಿ ಮಾಡಲು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಸುಹಾಸಿನಿ ಡಿಹೆಚ್ಓ ಡಾ. ಶ್ರೀನಿವಾಸ್ರನ್ನು ಭೇಟಿ ಮಾಡಿ ಮನವಿ ನೀಡಲು ಬಂದಿದ್ದರು. ಈ ವೇಳೆ ಒಬ್ಬ ಮಹಿಳೆ ಮತ್ತು ಪುರುಷ ಐನೂರು ರುಪಾಯಿ ನೋಟುಗಳನ್ನು ಎಣಿಸಿ ಬಿಳಿ ಬಣ್ಣದ ಕವರ್ ನಲ್ಲಿ ಹಾಕುತ್ತಿದ್ದರು. ಆ ಕವರ್ಗಳನ್ನು ತೆಗೆದುಕೊಂಡು ಡಿಹೆಚ್ಓ ರೂಮ್ನೊಳಗೆ ಹೋದರು. ನಂತರ ರೂಮ್ನೊಳಗೆ ಹೋಗಿ ನೋಡಿದರೆ ಹಣವಿದ್ದ ಬಿಳಿ ಬಣ್ಣದ ಕವರ್ಗಳು ಡಿಹೆಚ್ಓ ಕುಳಿತಿದ್ದ ಟೇಬಲ್ ಮೇಲೆ ಕಂಡುಬಂದಿದೆ. ನಂತರ ಸುಹಾಸಿನಿ ಆಮ್ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಬಂದು, ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು, ಕೇಂದ್ರ ಸಚಿವ ಸಂಪುಟ ಮತ್ತೆ ಪುನರ್ರಚನೆ ಸಾಧ್ಯತೆ
ಡಿಹೆಚ್ಓ ಡಾ. ಶ್ರೀನಿವಾಸ್ ಅವರು ನಾರಾಯಣ ಹೃದಯಲುದವರು. ಆನ್ಲೈನ್ನಲ್ಲಿ ಫೀಸ್ ಕಟ್ಟಲು ಹಣ ನೀಡಿದರು ಅಂತ ಉತ್ತರಿಸಿದರು. ಯಾವುದಕ್ಕೆ ಈ ಫೀಸ್ ಎಂದು ಪ್ರಶ್ನೆ ಮಾಡಿದರೆ, ಅವರು ಯಾರು ಅಂತ ನನಗೆ ಗೊತ್ತಿಲ್ಲ ನನ್ನ ಟೇಬಲ್ ಮೇಲೆ ಹಣವಿಟ್ಟು ಹೋಗಿದ್ದಾರೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದು, ಈ ವೇಳೆ ಡಾ. ಶ್ರೀ ನಿವಾಸ್ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಾರಿನ ಮುಂದೆ ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ ಬಿಟ್ಟು ಡಿಹೆಚ್ಓ ಡಾ. ಶ್ರೀನಿವಾಸ್ ನಡೆದುಕೊಂಡೆ ಹೋಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.