ಬಿಬಿಎಂಪಿ ವಾರ್ಡ್ಗಳ ಸಂಖ್ಯೆ 243ಕ್ಕೆ ಏರಿಕೆ; ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ
ಮಳೆ ಮುಂಜಾಗ್ರತ ಕ್ರಮಗಳ ಬಗ್ಗೆ ಮಾತನಾಡಿದರು. ಬೆಂಗಳೂರಲ್ಲಿ ಮಳೆ ನಡುವೆಯೂ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ನಗರದಲ್ಲಿ ಈವರೆಗೂ 5,500 ರಸ್ತೆಗುಂಡಿಗಳನ್ನ ಮುಚ್ಚಲಾಗಿದೆ. ಜೂನ್ 6ರೊಳಗೆ ಎಲ್ಲಾ ರಸ್ತೆಗುಂಡಿಗಳನ್ನ ಮುಚ್ಚಲಾಗುತ್ತದೆ.
ಬೆಂಗಳೂರು: ಬಿಬಿಎಂಪಿ ವಾರ್ಡ್ಗಳ (BBMP Ward) ಸಂಖ್ಯೆ 243ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಟಿ ನಡೆಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವರದಿ ಸಿದ್ಧಪಡಿಸಲಾಗಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮುದ್ರಣ ಮಾಡಬೇಕು. 2-3 ದಿನಗಳಲ್ಲಿ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ ಮುಖ್ಯ ಆಯುಕ್ತರು, ಮಳೆ ಮುಂಜಾಗ್ರತ ಕ್ರಮಗಳ ಬಗ್ಗೆಯೂ ಮಾತನಾಡಿದರು. ಬೆಂಗಳೂರಲ್ಲಿ ಮಳೆ ನಡುವೆಯೂ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ನಗರದಲ್ಲಿ ಈವರೆಗೂ 5,500 ರಸ್ತೆಗುಂಡಿಗಳನ್ನ ಮುಚ್ಚಲಾಗಿದೆ. ಜೂನ್ 6ರೊಳಗೆ ಎಲ್ಲಾ ರಸ್ತೆಗುಂಡಿಗಳನ್ನ ಮುಚ್ಚಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಬಿಬಿಎಂಪಿ ಅಧಿಕಾರಿಯಿಂದ ಗುತ್ತಿಗೆದಾರರ ಮೇಲೆ ಹಲ್ಲೆ ನಡೆದ ವಿಚಾರಕ್ಕೆ ಸಂಬಂಧಿಸಿ ಆಯುಕ್ತರು ಪ್ರತಿಕ್ರಿಯೆ ನೀಡಿದರು. ಮುಖ್ಯ ಇಂಜಿನಿಯರ್-ಗುತ್ತಿಗೆದಾರರ ನಡುವೆ ಸಂಧಾನ ನಡೆದಿದೆ. ವಿಶೇಷ ಆಯುಕ್ತ ರವೀಂದ್ರ ನೇತೃತ್ವದಲ್ಲಿ ತನಿಖೆ ನಡೆಸುತ್ತೇವೆ ಎಂದರು.
ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಕೊರೊನಾ ಟೆಸ್ಟ್ ಈಗ 15 ಸಾವಿರ ಮಾಡಲಾಗುತ್ತಿದೆ. ಟೆಸ್ಟಿಂಗ್ ಹೆಚ್ಚಳ ಮಾಡುತ್ತೇವೆ. ಆರು ಕೋಟಿ ಹೊಸ ವಾರ್ಡ್ಗೆ, ಹಳೆ ವಾರ್ಡ್ಗಳಿಗೆ ನಾಲ್ಕು ಕೋಟಿ ನೀಡಲಾಗಿದೆ. ಡ್ರೇನ್ ಕ್ಲೀನ್ ಮಾಡೋಕ್ಕೆ 50 ಲಕ್ಷ ಮೀಸಲಿಡಲಾಗಿದೆ. ಫುಟ್ ಪಾತ್ ಕ್ಲೀನ್ ಗೆ 30 ಲಕ್ಷ, ಪಾಟ್ ಹೋಲ್ಗೆ 30 ಲಕ್ಷ ಮೀಸಲು ಇಡಲಾಗಿದೆ ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Wed, 1 June 22