ಕೊಪ್ಪಳದ ಕಿಷ್ಕಿಂಧೆಯಲ್ಲೇ ಹನುಮ ಹುಟ್ಟಿದ್ದ ಎನ್ನುವುದಕ್ಕೆ ಏನೆಲ್ಲಾ ಕುರುಹುಗಳಿವೆ?

ಪಂಪಾ ಸರೋವರ, ಇದು ದೇಶದ ಐದು ಸರೋವರಗಳಲ್ಲಿ ಒಂದು. ಇದು ಶ್ರೇಷ್ಠವಾದ ಸರೋವರ. ಇದು ಕೂಡಾ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಎನ್ನುವುದಕ್ಕೆ ಇರುವ ಕುರುಹು. ಯಾಕೆಂದರೆ ಟಿಟಿಡಿ ಅಥವಾ ಮಹಾರಾಷ್ಟ್ರದಲ್ಲಿ ಪಂಪಾ ಸರೋವರ ಇಲ್ಲ.

ಕೊಪ್ಪಳದ ಕಿಷ್ಕಿಂಧೆಯಲ್ಲೇ ಹನುಮ ಹುಟ್ಟಿದ್ದ ಎನ್ನುವುದಕ್ಕೆ ಏನೆಲ್ಲಾ ಕುರುಹುಗಳಿವೆ?
ಅಂಜನಾದ್ರಿ ಬೆಟ್ಟ
Follow us
TV9 Web
| Updated By: sandhya thejappa

Updated on:Jun 01, 2022 | 1:49 PM

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧೆ (Kishkinda) ಪ್ರದೇಶವೇ ಹನುಮ (Hanuma) ಹುಟ್ಟಿದ ಸ್ಥಳ ಎಂದು ಲಕ್ಷಾಂತರ ಭಕ್ತರ ನಂಬಿಕೆ. ಆದರೆ ಇದೀಗ ಮಹಾರಾಷ್ಟ್ರ ಹೊಸ ಖ್ಯಾತೆ ಆರಂಭಿಸಿದೆ. ಹನುಮ ಹುಟ್ಟಿರುವ ಬಗ್ಗೆ ಮಹಾರಾಷ್ಟ್ರದಲ್ಲಿ ದಾಖಲೆಗಳೇ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಹನುಮನ ಅನೇಕ ಕುರುಹುಗಳಿವೆ. ಕಿಷ್ಕಿಂಧೆ ಪ್ರದೇಶದಲ್ಲಿ ರಾಮ ಹನುಮ ಭೇಟಿಯಾದರು ಅನ್ನೋದು ರಾಮಾಯಾಣದಲ್ಲಿ ಉಲ್ಲೇಖವಿದೆ. ಪಂಪಾ ಸರೋವರದ ಬಳಿ ರಾಮ ಹನುಮನ ಭೇಟಿಯಾದರೂ, ಸೀತೆಯನ್ನ ಹುಡಕುತ್ತಾ ಬಂದನಿಗೆ ಹನುಮ ಭೇಟಿಯಾಗುತ್ತಾನೆ ಎನ್ನುವುದಕ್ಕೆ ಇಲ್ಲಿ ಕುರುಹುಗಳಿವೆ. ಇದೆಲ್ಲ ಕುರುಹುಗಳು ಕೇಲವ ಕಾಲ್ಪನಿಕವಲ್ಲ. ರಾಮಾಯಣದಲ್ಲಿ ಉಲ್ಲೇಖವಾಗಿರುವುದು.

ಪಂಪಾ ಸರೋವರ, ಇದು ದೇಶದ ಐದು ಸರೋವರಗಳಲ್ಲಿ ಒಂದು. ಇದು ಶ್ರೇಷ್ಠವಾದ ಸರೋವರ. ಇದು ಕೂಡಾ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಎನ್ನುವುದಕ್ಕೆ ಇರುವ ಕುರುಹು. ಯಾಕೆಂದರೆ ಟಿಟಿಡಿ ಅಥವಾ ಮಹಾರಾಷ್ಟ್ರದಲ್ಲಿ ಪಂಪಾ ಸರೋವರ ಇಲ್ಲ. ಪಂಪಾ ಸರೋವರದ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಪಂಪಾಂಬಿಕೆ ಇಲ್ಲಿ ಸ್ನಾನ ಮಾಡಿ ಶಿವನನ್ನ ಒಲಿಸಿಕೊಂಡಿರುವ ನಂಬಿಕೆ ಇದೆ. ಪಂಪಾ ಸರೋವರಕ್ಕೆ ಮೋದಿ ಪತ್ನಿ ಜಶೋದಾ ಬೆನ್ ಕೂಡಾ ಪೂಜೆ ಸಲ್ಲಿಸಿ ಹೋಗಿದ್ದಾರೆ. ಇದೇ ಜಾಗದಲ್ಲಿ ಹನುಮ ರಾಮನ ಭೇಟಿಯಾಗಿರುವುದು. ಹೀಗಾಗಿ ಪಂಪಾ ಸರೋವರಗೂ ಹನುಮ ಹುಟ್ಟಿದ್ದು ಇಲ್ಲೆ ಅನ್ನೋದಕ್ಕೆ ಸಾಕ್ಷಿಯಾಗಿದೆ.

ರಾಮನಿಗೆ ಆಂಜನೇಯ ಭೇಟಿಯಾದ ನಂತರ ಸುಗ್ರೀವನ ಭೇಟಿಯಾಗತ್ತದೆ. ರಾಮ, ಸೀತೆ ಅಪಹರಣದ ಬಗ್ಗೆ ಹುಡಕಾಟ ಆರಂಭಿಸಿದಾಗ, ರಾಮ, ಹನುಮ, ಸುಗ್ರೀವ ಚಿಂತೆ ಮಾಡುತ್ತಾ ಕುಳಿತಿರುವ ಪ್ರದೇಶವನ್ನೇ ಚಿಂತಾಮಣಿ ಎನ್ನುತ್ತಾರೆ. ಇಲ್ಲಿಯೇ ರಾಮ ವಾಲಿಯ ಸಂಹಾರ ಮಾಡಿದ್ದಾನೆ ಎನ್ನುವುದು ಉಲ್ಲೇಖವಿದೆ. ಇಂದಿಗೂ ವಾಲಿ ಸಮಾಧಿ ಕಾಣಬಹುದು. ಗಂಗಾವತಿ ತಾಲೂಕಿನ ಕಿಷ್ಕಿಂಧೆ ಪ್ರದೇಶದಲ್ಲಿರುವ ಚಿಂತಾಮಣಿ ಕೂಡಾ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಸುಗ್ರೀವನ ಹೆಂಡತಿಯನ್ನ ಬಲವಂತವಾಗಿ ಇಟ್ಟುಕೊಂಡ ವಾಲಿಯನ್ನ ರಾಮ ಸಂಹಾರ ಮಾಡಿದ ಎನ್ನುವ ಪ್ರತೀತಿಯೂ ಇದೆ.

ಇದನ್ನೂ ಓದಿ
Image
ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹ ನಿರ್ಮಾಣಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ
Image
Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ
Image
Curd:ಮಳೆಗಾಲದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?
Image
Taxation On Paper Gold: ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ವಿವರಣೆ

ಇದನ್ನೂ ಓದಿ: ಹಳ್ಳಿಗಳ ನಾಡಿಮಿಡಿತ ಅರಿತ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಜನ್ಮದಿನ ಇಂದು

ಗಂಗಾವತಿಯಲ್ಲಿ ಪ್ರತಿಭಟನೆ: ಹನುಮ ಹುಟ್ಟಿದ ಸ್ಥಳದ ಬಗ್ಗೆ ಖ್ಯಾತೆ ತೆಗೆದಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೊಪ್ಪಳ ಜಿಲ್ಲೆ ಕರವೇ ಕಾರ್ಯಕರ್ತರು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಖ್ಯಾತೆ ತಗೆದಿರುವ ಸುಧೀಂದ್ರ ಬಾಬಾ ವಿರುದ್ಧವೂ ಅಂಜನಾದ್ರಿ ನಮ್ದು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಕ್ಕೆ ಟ್ವಿಸ್ಟ್: ಹನುಮ ಜನ್ಮಭೂಮಿ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಗೋವಿಂದಾನಂದ ಶ್ರೀಗಳನ್ನೆ ಬಂಧಿಸಬೇಕು ಎಂದು  ಶ್ರೀರಾಮ ಸೇನೆಯ ವಿಭಾಗದ ಮುಖ್ಯಸ್ಥ ಸಂಜೀವ ಮುರಡಿ ಆಗ್ರಹಿಸಿದ್ದಾರೆ. ಆಂಧ್ರದಿಂದ ಗೋವಿಂದಾನಂದ ಶ್ರೀಗಳನ್ನ ಹೊಡೆದು ಓಡಿಸಿದ್ದಾರೆ. ಕೇವಲ ದುಡ್ಡಿಗಾಗಿ ಗೋವಿಂದಾನಂದ ಶ್ರೀಗಳು ಈ ರೀತಿ ಮಾಡುತ್ತಿದ್ದಾರೆ‌. ಅಂಜನಾದ್ರಿಗೂ ಗೋವಿಂದಾನಂದ ಶ್ರೀಗಳಿಗೂ ಸಂಭಂದವೇ ಇಲ್ಲ. ಗೋವಿಂದಾನಂದ ಸ್ವಾಮೀಜಿ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಹಣ ಹೆಸರಿಗಾಗಿ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಂಜೀವ ಮುರಡಿ ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 am, Wed, 1 June 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ