Curd:ಮಳೆಗಾಲದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?
Curd:ಮಳೆಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಸೇವಿಸಬಾರದು ಎಂಬುದರ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ
ಮಳೆಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು, ಸೇವಿಸಬಾರದು ಎಂಬುದರ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಅನೇಕರು ಬೇಸಿಗೆಯಲ್ಲಿ ಹೆಚ್ಚಾಗಿ ಮೊಸರು ಆಹಾರಗಳನ್ನು ಸೇವಿಸಿದರೆ ಮುಂಗಾರಿನ ಸಂದರ್ಭದಲ್ಲಿ ಮೊಸರು( Curd)ಸೇವನೆಯಿಂದ ಇರುತ್ತಾರೆ.
ಮೊಸರಿನಲ್ಲಿ ಆಮ್ಲೀಯ ಅಂಶ ಹೆಚ್ಚಾಗಿರುವುದರಿಂದ ಈ ಆಹಾರದ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಇಂತಹ ಗೊಂದಲಗಳಿಗೆ ಇಲ್ಲಿದೆ ಉತ್ತರ. ಮಳೆಗಾಲದ ಸಂದರ್ಭದಲ್ಲಿ ರಾತ್ರಿ ವೇಳೆ ಮೊಸರನ್ನು ತಿನ್ನಬೇಡಿ. ಹಾಗೆಯೇ ತಣ್ಣನೆಯ ಮೊಸರನ್ನು ಮಳೆಗಾಲದಲ್ಲಿ ಸೇವಿಸುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಆಹಾರದಲ್ಲಿ ತಾಜಾ ಮೊಸರನ್ನು ಬಳಸಲು ಪ್ರಯತ್ನಿಸಿ.
ಮಳೆಗಾಲದಲ್ಲೂ ಮೊಸರಿನ ಆಹಾರ ಸೇವಿಸುವುದು ಉತ್ತಮ. ಏಕೆಂದರೆ ಈ ಸಂದರ್ಭದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆ ಕುಂಠಿತವಾಗಿರುತ್ತದೆ. ಆದರೆ ಮೊಸರು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅತಿ ಹುಳಿ ಹೊಂದಿರುವ ಮೊಸರನ್ನು ಸೇವಿಸಬೇಡಿ. ಇದರಿಂದ ಆ್ಯಸಿಡಿಟಿ ಸಮಸ್ಯೆ ಉಂಟಾಗಬಹುದು.
ಮೊಸರಿನಲ್ಲಿ ಪ್ರೊಬಯೋಟಿಕ್ ಅಂಶಗಳು ಹೆಚ್ಚಾಗಿರುತ್ತದೆ. ಇದು ಕರುಳಿನ ಕ್ರಿಯೆಯನ್ನು ಉತ್ತಮಪಡಿಸುತ್ತದೆ. ಫುಡ್ ಪಾಯಿಸನಿಂಗ್ ಉಂಟಾದರೆ ಮೊಸರಿನ ಆಹಾರಗಳು ಉತ್ತಮ ಆಯ್ಕೆ.
ಬೇಸಿಗೆಯಲ್ಲಿ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಆರೋಗ್ಯಕರವಾಗಿರುತ್ತದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲ ಜನರು ಮಳೆಗಾಲದಲ್ಲಿ ಮೊಸರನ್ನು ಸೇವಿಸುವುದನ್ನು ನಿಲ್ಲಿಸುತ್ತಿದ್ದಾರೆ.
ಅಂದರೆ, ನಿಯಮಿತವಾಗಿ ಮೊಸರು ಸೇವಿಸುವವರು ಮಳೆಗಾಲದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಳೆಗಾಲದಲ್ಲಿ ಮೊಸರು ಸೇವಿಸುವುದು ನಿಜವಾಗಿಯೂ ಹಾನಿಕಾರಕವೇ ಎಂದು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.
ಮೊಸರು ಸೇವನೆಯ ಆರೋಗ್ಯಕರ ಪ್ರಯೋಜನಗಳು ಇಂತಿವೆ – ಮೊಸರನ್ನು ತ್ವಚೆಯ ಮೇಲೆ ಹಚ್ಚುವುದರಿಂದ ತ್ವಚೆಯು ಆರೋಗ್ಯಕರವಾಗಿರುತ್ತದೆ. ಟ್ಯಾನಿಂಗ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
– ಮೊಸರನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
– ಮೊಸರು ಒಂದು ಪ್ರೋಬಯಾಟಿಕ್ ಆಹಾರವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದರಲ್ಲಿ ಸೂಕ್ಷ್ಮಜೀವಿಗಳಿರುವ ಕಾರಣ ಇದು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಪ್ರೋಬಯಾಟಿಕ್‌ಗಳು ಸೋಂಕನ್ನು ತಡೆಯುತ್ತದೆ.
– ಮೊಸರು ತಿನ್ನುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಿಷ್ಠವಾಗುತ್ತವೆ.
-ಹೊಟ್ಟೆಯ ಆರೋಗ್ಯ, ಜೀರ್ಣ ಶಕ್ತಿ ಇದರಿಂದ ಹೆಚ್ಚಾಗುತ್ತದೆ.
ಆಯುರ್ವೇದ ಏನು ಹೇಳುತ್ತೆ? ಮಳೆಗಾಲದಲ್ಲಿ ಡೈರಿ ಉತ್ಪನ್ನಗಳಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯುವುದರಿಂದ, ಮಳೆಗಾಲದಲ್ಲಿ ಅತಿಯಾದ ಮೊಸರು ಸೇವನೆಯು ಆರೋಗ್ಯವನ್ನು ಹಾಳುಮಾಡುತ್ತದೆ. ಹೀಗಾಗಿ ಮೊಸರು ತಿನ್ನಲು ಬೇಸಿಗೆ ಉತ್ತಮವೆಂದು ಹೇಳಲಾಗುತ್ತದೆ.
ಮೊಸರು ಸೇವನೆಯಿಂದ ಈ ಸಮಸ್ಯೆಗಳು ಎದುರಾಗಬಹುದು
-ಕೀಲು ನೋವಿನಂತಹ ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಮೊಸರು ಸೇವನೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಮೊಸರಿನ ಗುಣಧರ್ಮ ತಣ್ಣಗಿರುವುದರಿಂದ ಮೊಸರಿನ ಸೇವನೆಯನ್ನು ಕಡಿಮೆ ಮಾಡಿ.
– ಮಳೆಗಾಲದಲ್ಲಿನ ತೇವಾಂಶದಿಂದಾಗಿ ಹೆಚ್ಚು ಜಿಗುಟಾದ ಅನುಭವವಾಗುತ್ತದೆ.
– ಮಳೆಗಾಲದಲ್ಲಿ ಬೆಳಗ್ಗೆ ಅಥವಾ ರಾತ್ರಿ ಹೆಚ್ಚು ಮೊಸರು ಸೇವಿಸುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವಿನ ಸಮಸ್ಯೆ ಎದುರಾಗುತ್ತದೆ. ಎದೆಯಲ್ಲಿ ಕಫ ಹೆಚ್ಚಾಗುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.
– ಮಳೆಗಾಲದ ದಿನಗಳಲ್ಲಿ ಹೆಚ್ಚು ಮೊಸರು ತಿನ್ನುವುದರಿಂದ ದೇಹದಲ್ಲಿ ನೋವು ಉಂಟಾಗುತ್ತದೆ. ದೇಹದಲ್ಲಿ ನಿರಂತರ ನೋವು ಹಾಗೂ ಜ್ವರ ಇರುವಂತೆ ಅನಿಸುತ್ತದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 1 June 22