Updated on: May 06, 2022 | 8:30 AM
ಮಳೆಗಾಲದಲ್ಲಿ ನೀರು ಕಲುಷಿತವಾಗುತ್ತದೆ. ಹೀಗಾಗಿ ನೀರನ್ನು ಕುದಿಸಿ, ನಂತರ ಸೋಸಿ ಕುಡಿಯಬೇಕು. ಬೇಜವಾಬ್ದಾರಿಯಿಂದ ಹಾಗೇ ಸೇವಿಸಬೇಡಿ.
ಹಣ್ಣುಗಳನ್ನು ಹೆಚ್ಚು ಸೇವಿಸಿ. ಆದರೆ ತಿನ್ನುವ ಮೊದಲು ಫ್ರೆಶ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
ಸ್ಟ್ರೀಟ್ ಫುಡ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ, ಸ್ಟ್ರೀಟ್ ಫುಡ್ ತಿನ್ನಬಾರದು.
ಮಳೆಯಲ್ಲಿ ನೆನೆಯುತ್ತಾ ಡ್ಯಾನ್ಸ್ ಮಾಡುವ ಆಸೆ ಬಹಳಷ್ಟು ಜನರಿಗಿದೆ. ಹೀಗೆ ಮಾಡಿದರೆ, ನೆಗಡಿ, ಜ್ವರ ಶುರುವಾಗುತ್ತದೆ. ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟರೆ ಸರಿಪಡಿಸಿಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ.
ಒಂದೊಮ್ಮೆ ಜ್ವರ ಬಂದರೆ ಆಸ್ಪತ್ರೆಗೆ ಹೋಗಿ. ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಬೇಡಿ.