Hanuman Birth Place: ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಗೋವಿಂದಾನಂದ ಸ್ವಾಮೀಜಿ ಹೇಳಿಕೆ
ಧರ್ಮ ಸಂಸದ ಸಭೆಯಲ್ಲಿ ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂದಿದ್ದಾರೆ ಎಂದು ನಾಸಿಕ್ನಲ್ಲಿ ಟಿವಿ9ಗೆ ಹನುಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಗೋವಿಂದಾನಂದ ಸ್ವಾಮೀಜಿ ಹೇಳಿದ್ದಾರೆ.
ಮಹಾರಾಷ್ಟ್ರ: ಕರ್ನಾಟಕದ (Karnataka) ಅಂಜನಾದ್ರಿ (Anjanadri) ಬೆಟ್ಟವೇ ಹನುಮನ (Hanuman) ಜನ್ಮಸ್ಥಳದ ಕುರಿತು ಎದ್ದಿರುವ ವಿವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರದ (Mharashtra) ನಾಸಿಕ್ನ (Nasik) ತ್ರಯಂಬಕೇಶ್ವರದಲ್ಲಿ ಧರ್ಮ ಸಂಸದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂದಿದ್ದಾರೆ ಎಂದು ನಾಸಿಕ್ನಲ್ಲಿ ಟಿವಿ9ಗೆ ಹನುಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಗೋವಿಂದಾನಂದ ಸ್ವಾಮೀಜಿ ಹೇಳಿದ್ದಾರೆ.
ಈ ವಿಚಾರವನ್ನು ಶೇಕಡಾ 90ರಷ್ಟು ವಿದ್ವಾಂಸರು ಒಪ್ಪಿದ್ದಾರೆ. ಆದರೆ ಕೆಲವರು ಹನುಮನ ಜನ್ಮಸ್ಥಳ ವಿಚಾರದಲ್ಲಿ ವಿವಾದ ಎಬ್ಬಿಸುತ್ತಿದ್ದಾರೆ. ಆನೇಕರು ತಮ್ಮ ಊರು ಹನುಮನ ಜನ್ಮಸ್ಥಳ ಎಂದಿದ್ದಾರೆ. ಅಜ್ಞಾನದಿಂದ ವಿವಾದ ಹುಟ್ಟಿಸೋ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ನಾಸಿಕ್ನಲ್ಲಿ ಧರ್ಮ ಸಂಸದ್ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತೆ ನಾವು ಕಳೆದ 5 ದಿನಗಳಿಂದ ನಾಸಿಕ್ನಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ಈ ಧರ್ಮ ಸಭೆಯಲ್ಲಿಅಯೋದ್ಯಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ಮಾಡಿದ ವಿದ್ವಾಂಸ ಗಂಗಾಧರ್ ಪಾಠಕ್ ಭಾಗಿಯಾಗುತ್ತಿದ್ದಾರೆ.
ಇದನ್ನು ಓದಿ: ವಿಶ್ವದ ಅತ್ಯಂತ ಹಿರಿಯ ಪ್ಯಾರಾಚೂಟರ್ ಎಂಬ ದಾಖಲೆ ನಿರ್ಮಿಸಿದ 103 ವರ್ಷದ ಅಜ್ಜಿ
ನಾಸಿಕ್ನ ತ್ರಯಂಬಕೇಶ್ವರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅನೇಕ ಸಾಧು ಸಂತರು ಭಾಗಿಯಾಗಿದ್ದಾರೆ. ನಾವು ನಿಮ್ಮ ಚರ್ಚೆಗೆ ಸಿದ್ದರಿದ್ದೇವೆ, ನೀವು ಚರ್ಚೆಗೆ ಕರೆದಿದ್ದೀರಿ ಅಂತ ಸಾದು ಸಂತರು ಹೇಳುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ಸಾದು ಸಂತರು ಗೋವಿಂದಾನಂದ ಸರಸ್ವತಿ ಸಮೀಜಿಗೆ ಸಾಧು ಸಂತರು ಪ್ರಶ್ನಿಸುತ್ತಿದ್ದಾರೆ. ಸದ್ಯ ಸಭೆ ಗೊಂದಲದ ಗೂಡಾಗಿದೆ. ಸಭೆಗೆ ಆಹ್ವಾನಿಸಿ ನಮಗೆ ಕೆಳಗೆ ಕೂರಿಸುತ್ತಿದ್ದಾರೆ. ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮಾತ್ರ ಖುರ್ಚಿ ಮೇಲೆ ಕೂಳತಿದ್ದಾರೆ. ನಾಸಿಕ ಸಾಧು ಸಂತರಿಗೆ ಅಪಮಾನ ಮಾಡುತ್ತಿದ್ದಾರೆ. ಎಂದು ಸಭೆಯಲ್ಲಿ ಭಾಗಿಯಾಗ ಕೆಲ ಸಾದುಗಳು ಗದ್ದಲ ಮಾಡುತ್ತಿದ್ದಾರೆ.
ಇದನ್ನು ಓದಿ: ಪಾರ್ವತಮ್ಮ ಐದನೇ ವರ್ಷದ ಪುಣ್ಯಸ್ಮರಣೆ; ರಾಜ್ಕುಮಾರ್ ಅಕಾಡೆಮಿ ಸಾಧನೆಯನ್ನು ಅಮ್ಮನಿಗೆ ಅರ್ಪಿಸಿದ ರಾಘಣ್ಣ
ಸಭೆ ಗದ್ದಲವಾಗಿ ಮಾರ್ಪಾಡಾಗುತ್ತಿದ್ದಂತೆ ನಾಸಿಕ್ ಮೂಲದ ಕೆಲ ಸಾದು ಸಂತರು ಸಭೆಯನ್ನು ಬಹಿಷ್ಕರಿಸಿದ್ದಾರೆ. ನಮ್ಮನ್ನು ಚರ್ಚೆ ಗೆ ಕರೆದು ಅಪಮಾನ ಮಾಡಿದ್ದಾರೆ. ಅವರು ತಮ್ಮನ್ನು ತಾವೇ ಶಂಕರಾಚಾರ್ಯರರ ರೀತಿ ವರ್ತಿಸುತ್ತಿದ್ದಾರೆ. ಚರ್ಚೆಗೆ ಕರೆದು ನಮಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಸಭೆ ಬಹಿಷ್ಕರಿಸುತ್ಕಿದ್ದೇವೆ. ಮಹಾಂತ ಭಕ್ತಚಾರ್ಯ, ದಿಗಂಬರ ಆಶ್ರಮ ನಾಸಿಕ್ ನ ಸಾಧು ಸಭೆ ಆಯೋಜಿಸಿದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.