ಧೂಮಪಾನ ದೃಷ್ಟಿದೋಷಕ್ಕೆ ಕಾರಣವಾಗಬಹುದು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ
Smoking:ಮಪಾನ(Smoking)ದಿಂದ ಹಲವು ಕಾಯಿಲೆಗಳು ಎದುರಾಗುತ್ತವೆ ಅವುಗಳಲ್ಲಿ ದೃಷ್ಟಿ ದೋಷವು ಕೂಡ ಒಂದು. ಸಾಮಾನ್ಯವಾಗಿ, ತಂಬಾಕು ಮತ್ತು ಇದರ ಹೊಗೆಯನ್ನು ಸೇದುವ ಮೂಲಕ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ.
ಧೂಮಪಾನ(Smoking)ದಿಂದ ಹಲವು ಕಾಯಿಲೆಗಳು ಎದುರಾಗುತ್ತವೆ ಅವುಗಳಲ್ಲಿ ದೃಷ್ಟಿ ದೋಷವು ಕೂಡ ಒಂದು. ಸಾಮಾನ್ಯವಾಗಿ, ತಂಬಾಕು ಮತ್ತು ಇದರ ಹೊಗೆಯನ್ನು ಸೇದುವ ಮೂಲಕ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಆದರೆ ಧೂಮಪಾನವು ನಮ್ಮ ದೃಷ್ಟಿಗೆ ಉಂಟುಮಾಡುವ ಹಾನಿಕಾರಕ ಪರಿಣಾಮದ ಬಗ್ಗೆ ನಮಗೆ ತಿಳಿದಿಲ್ಲ.
ದೃಷ್ಟಿ ಮಾಂದ್ಯತೆ, ಮ್ಯಾಕ್ಯುಲಾರ್ ಡಿಜೆನರೇಶನ್ ಅಥವಾ ಕಣ್ಣಿನ ಕೇಂದ್ರ ಭಾಗದ ಮ್ಯಾಕ್ಯುಲಾ ಎಂಬ ಅತಿ ಸೂಕ್ಷ್ಮ ಭಾಗ ಶೀಘ್ರವಾಗಿ ಸವೆಯುವುದು ಮತ್ತು ಕ್ಯಾಟರಾಕ್ಟ್ ಅಥವಾ ಕಣ್ಣಿನ ಪೊರೆ ಈ ಎರಡು ಪ್ರಮುಖ ಕಣ್ಣಿನ ಕಾಯಿಲೆಗಳಿಗೂ ಧೂಮಪಾನಕ್ಕೂ ನೇರವಾದ ಸಂಬಂಧ ಇರುವುದನ್ನು ನೇತ್ರತಜ್ಞರು ಸ್ಪಷ್ಟಪಡಿಸಿದ್ದಾರೆ.
ಧೂಮಪಾನವು ಆರೋಗ್ಯಕ್ಕೆ ಮಾರಕ, ಕ್ಯಾನ್ಸರ್ ಸೇರಿ ಹಲವು ಕಾಯಿಲೆಗಳನ್ನು ತಂದೊಡ್ಡಬಹುದು. ವಯಸ್ಕರು ಮತ್ತು ಮಕ್ಕಳೂ ಸೇರಿದಂತೆ ಪ್ರತ್ಯಕ್ಷ ಧೂಮಪಾನಿಗಳಿಗೂ ಮತ್ತು ಪರೋಕ್ಷ ಧೂಮಪಾನಿಗಳಿಗೂ ಧೂಮಪಾನದ ಹೊಗೆ ಕಣ್ಣಿಗೆ ಮತ್ತು ದೃಷ್ಟಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಆರೋಗ್ಯಕರ ಹವ್ಯಾಸ ಶುರು ಮಾಡಿ: ಕಲೆಯೊಂದನ್ನು ಕಲಿಯುವುದು, ಭಾಷೆಯೊಂದನ್ನು ಕಲಿಯುವುದು, ವ್ಯಾಯಾಮ, ಯೋಗಾಭ್ಯಾಸ, ಓಟ, ಈಜು, ಹೊಸ ಆಟವೊಂದನ್ನು ಆಡುವುದು, ಹವ್ಯಾಸವನ್ನು ಬೆಳೆಸಿಕೊಳ್ಳಿ, ಈ ಮೂಲಕ ಗಮನವನ್ನು ಕೇಂದ್ರೀಕರಿಸಲು ಸಹಾಯ ದೊರಕುತ್ತದೆ ಮತ್ತು ಧೂಮಪಾನದ ಕಡೆ ಕಡೆಗೆ ನಿಮ್ಮ ಗಮನವಿರುವುದಿಲ್ಲ.
ಡಯಾಬಿಟಿಕ್ ರೆಟಿನೋಪತಿ: ಧೂಮಪಾನವು ದೇಹದಲ್ಲಿ ಡಯಾಬಿಟಿಕ್ ಅಂಶವನ್ನು ಹೆಚ್ಚಿಸುವುದರ ಜತೆಗೆ ದೃಷ್ಟಿದೋಷನ್ನುಂಟು ಮಾಡುತ್ತದೆ. ಕಣ್ಣಿನ ನರಗಳಿಗೆ ಮಧುಮೇಹ ತೊಂದರೆ ಮಾಡುತ್ತದೆ.
ದಿನಚರಿ ರೂಪಿಸಿ:ಕೆಲಸದ ನಡುವೆ ಆಗಾಗ ವಿರಾಮ ಪಡೆಯಲು ನೀವು ಹೊರಹೋಗಬಹುದು. ಸಾಮಾನ್ಯವಾಗಿ ಈ ವಿರಾಮದ ಸಮಯದಲ್ಲಿಯೇ ಧೂಮಪಾನಕ್ಕೆ ಹೆಚ್ಚಿನ ಪ್ರಲೋಭನೆ ದೊರಕುತ್ತದೆ. ಹಾಗಾಗಿ, ಈ ಸಮಯದಲ್ಲಿ ನಿಮ್ಮನ್ನು ಕೆಲಸದಲ್ಲಿ ಮಗ್ನರಾಗಿಸಿ ಮತ್ತು ಹೊರಹೋಗದಿರಿ. ಧೂಮಪಾನದಿಂದ ದೂರವಿರಲು ಸರಿಯಾದ ವೇಳಾಪಟ್ಟಿಯನ್ನು ಯೋಜಿಸುವುದು ಬಹಳ ಮುಖ್ಯ.
ಕಣ್ಣುಗಳು ಒಣಗಿಂತಾಗುವುದು: ಹೆಚ್ಚೆಚ್ಚು ದೂಮಪಾನ ಮಾಡುವುದರಿಂದ ಕಣ್ಣುಗಳು ಒಣಗಿದಂತಾಗುತ್ತದೆ, ಕಣ್ಣಿನಲ್ಲಿ ನೀರಿನ ಅಂಶವೇ ಆರಿ ಹೋಗುತ್ತದೆ. ಕಣ್ಣು ಕೆಂಪಾಗುವುದು, ತುರಿಕೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ.
ಆರೋಗ್ಯಕರ ಆಹಾರ ಸೇವಿಸಿ: ವಿಟಮಿನ್ ಸಿ, ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳಿರುವ ಅಧಿಕ ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.
ಧೂಮಪಾನ ತ್ಯಜಿಸಲು ಕೆಲವು ಉಪಾಯಗಳು: ಧೂಮಪಾನಕ್ಕೆ ಪ್ರಚೋದಿಸುವ ಎಲ್ಲಾ ವಸ್ತುಗಳನ್ನು ನಿಮ್ಮ ಕಣ್ಣಿಗೆ ಕಾಣದಷ್ಟು ದೂರಕ್ಕೆ ಇರಿಸಿಬಿಡಿ. ಸ್ನೇಹಿತರು ಸಿಗರೇಟು ನೀಡಲು ಮುಂದೆ ಬಂದಾಗ ನಾನು ಧೂಮಪಾನ ಬಿಡುತ್ತೇನೆಂದು ಮನೆಯವರಿಗೆ ಮಾತು ಕೊಟ್ಟಿದ್ದೇನೆ, ಎಂದು ಹೇಳಿ. ನಿಜವಾದ ಸ್ನೇಹಿತರಾದರೆ ನಿಮ್ಮ ಭಾವನೆಗಳನ್ನು ಗೌರವಿಸುತ್ತಾರೆ ಮತ್ತು ನಿಜವಾದ ಸ್ನೇಹಿತರಲ್ಲದೇ ಇದ್ದರೆ ಮನೆಯವರಿಗೆ ಮೋಸ ಮಾಡಿಯಾದರೂ ಸೇದಿ ಎಂದು ಹೇಳುತ್ತಾರೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಅರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Wed, 1 June 22