Anti Tobacco Day 2022: ಬೆಂಗಳೂರಿನಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್​ ಪ್ರಕರಣಗಳೆಷ್ಟು? ವೈದ್ಯರು ಕೊಟ್ಟ ವರದಿಯಲ್ಲೇನಿದೆ?

World No Tobacco Day :ತಂಬಾಕು ಬಳಕೆಯ ಹಾನಿಕಾರಕ ಹಾಗೂ ಮಾರಕ ಪರಿಣಾಮಗಳ ಕುರಿತು ಹಾಗೂ ಪರೋಕ್ಷ ಧೂಮಪಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಯಾವುದೇ ರೂಪದಲ್ಲಿ ತಂಬಾಕು ಬಳಕೆಯನ್ನು ತಡೆಗಟ್ಟುವ ಪ್ರಯತ್ನಗಳಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.

Anti Tobacco Day 2022: ಬೆಂಗಳೂರಿನಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್​ ಪ್ರಕರಣಗಳೆಷ್ಟು? ವೈದ್ಯರು ಕೊಟ್ಟ ವರದಿಯಲ್ಲೇನಿದೆ?
Dr Ramachandra
Follow us
TV9 Web
| Updated By: ನಯನಾ ರಾಜೀವ್

Updated on: May 31, 2022 | 8:00 AM

ತಂಬಾಕು ಬಳಕೆಯ ಹಾನಿಕಾರಕ ಹಾಗೂ ಮಾರಕ ಪರಿಣಾಮಗಳ ಕುರಿತು ಹಾಗೂ ಪರೋಕ್ಷ ಧೂಮಪಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನ(World No Tobacco Day )ವನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಯಾವುದೇ ರೂಪದಲ್ಲಿ ತಂಬಾಕು ಬಳಕೆಯನ್ನು ತಡೆಗಟ್ಟುವ ಪ್ರಯತ್ನಗಳಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.

ತಂಬಾಕು ಸೇವನೆಯು ಕ್ಯಾನ್ಸರ್‌ನಿಂದ ಶುರುವಾಗಿ ವಿವಿಧ ದೀರ್ಘಕಾಲದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳವರೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ರಹಿತ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಪರಿಸರ ಸಂರಕ್ಷಣೆ ಎಂಬುದು ಪ್ರಸ್ತುತ, 2022ರ ಸಾಲಿನ ಘೋಷ-ವಾಕ್ಯವಾಗಿದೆ. ತಂಬಾಕು ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುವತ್ತ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಪೌಷ್ಠಿಕಾಂಶದ ಕೊರತೆ, ಅನಕ್ಷರತೆ, ಪರಿಸರ ಮಾಲಿನ್ಯ ಮತ್ತು ಮುಖ್ಯವಾಗಿ ಒಂದಲ್ಲ ಒಂದು ರೂಪದ ತಂಬಾಕು ಸೇವನೆಯಿಂದಾಗಿ ರೋಗಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲದೆ, ಅವರಲ್ಲಿ ಬಹುತೇಕ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಅತ್ಯಂತ ಕೆಳದರ್ಜೆಯದಾಗಿವೆ. ವಿಶ್ವಾದ್ಯಂತ ಹಾಗೂ ಭಾರತದಲ್ಲಿ ತಂಬಾಕಿನ ಬಳಕೆ ಕ್ರಮೇಣ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಈ ಕುರಿತು ಕಿದ್ವಾಯಿ ಆಸ್ಪತ್ರೆ  ನಿರ್ದೇಶಕ ಡಾ. ರಾಮಚಂದ್ರ ಅವರು ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶೇ.27.2ರಷ್ಟು ಪ್ರಕರಣಗಳು ತಂಬಾಕು ಬಳಕೆಗೆ ಸಂಬಂಧಿಸಿವೆ ಶೇಕಡಾ 27.2ರಷ್ಟು ಕ್ಯಾನ್ಸರ್‌ ಪ್ರಕರಣಗಳು ತಂಬಾಕು (ಹೊಗೆಯ ಮತ್ತು ಹೊಗೆರಹಿತ ರೂಪದಲ್ಲಿ) ಬಳಕೆಗೆ ಸಂಬಂಧಿಸಿವೆ ಎಂದು ಅಂದಾಜಿಸಲಾಗಿದೆ. ಲಭ್ಯವಿರುವ ಮಾಹಿತಿಯು ತಂಬಾಕು ಸಂಬಂಧಿತ ಕ್ಯಾನ್ಸರ್ ಹರಡುವಿಕೆಯು ಪುರುಷರಲ್ಲಿ ಹೆಚ್ಚು (ಶೇಕಡಾ 45ಕ್ಕಿಂತ ಹೆಚ್ಚು) ಎಂದು ಸೂಚಿಸುತ್ತದೆ. ಪುರುಷರಲ್ಲಿ 90ರಷ್ಟು ಪ್ರತಿಶತ ಶ್ವಾಸಕೋಶದ ಕ್ಯಾನ್ಸರ್ ಸಾವುಗಳು ಮತ್ತು ಮಹಿಳೆಯರಲ್ಲಿ ಶೇ.80ರಷ್ಟು ಧೂಮಪಾನದಿಂದ ಉಂಟಾಗುತ್ತವೆ.

ಶ್ವಾಸಕೋಶದ ಕ್ಯಾನ್ಸರ್ ಹೊರತುಪಡಿಸಿ ಅನೇಕ ಅಧ್ಯಯನಗಳು ಶ್ವಾಸಕೋಶ, ಬಾಯಿಯ ಒಳಭಾಗ, ಮೂಗು ಮತ್ತು ಹೈಪೋಫಾರ್ನೆಕ್ಸ್, ಮೂಗಿನ ಒಳಭಾಗ ಮತ್ತು ಪರಾನಾಸಲ್ ಸೈನಸ್ಗಳು, ಧ್ವನಿಪೆಟ್ಟಿಗೆಯನ್ನು, ಅನ್ನನಾಳ, ಹೊಟ್ಟೆ, ಮೇದೋಜೀರಕ ಗ್ರಂಥಿ, ಯಕೃತ್ತು, ಮೂತ್ರಪಿಂಡ (ದೇಹ ಮತ್ತು ಸೊಂಟ), ಮೂತ್ರನಾಳ, ಮೂತ್ರಕೋಶ, ಗರ್ಭಾಶಯದ ಗರ್ಭಗೊರಳು ಮತ್ತು ಅಸ್ಥಿಮಜ್ಜೆ (ಮೈಲೋಯ್ಡ್ ಲ್ಯುಕೇಮಿಯಾ) ಇವುಗಳ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತಿವೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಕ್ಯಾನ್ಸರ್​ಗೆ ಒಳಗಾಗುತ್ತಿರುವವರೆಷ್ಟು? ಕರ್ನಾಟಕದಲ್ಲಿ ಪ್ರತಿ ವರ್ಷ ಅಂದಾಜು 20,935 (ಒಟ್ಟಾರೆ ಕ್ಯಾನ್ಸರ್‌ ಪ್ರಕರಣಗಳ ಪೈಕಿಲ್ಲಿ ಶೇ.24ರಷ್ಟು) ತಂಬಾಕು ಸಂಬಂಧಿತ ಕ್ಯಾನ್ಸರ್ ಆಗಿದೆ. ನಿಗದಿತ ಯಾವುದೇ ಸಮಯದಲ್ಲಿ 56,524 ರೋಗಿಗಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಲಾಗಿದೆ.

ಒಂದು ಲಕ್ಷದಲ್ಲಿ 38 ಪುರುಷರಿಗೆ ಕ್ಯಾನ್ಸರ್ ಪ್ರತಿ ಒಂದು ಲಕ್ಷ ಜನಸಂಖ್ಯೆಯ ಪೈಕಿ 38 ಪುರುಷರಲ್ಲಿ ಮತ್ತು 20 ಮಹಿಳೆಯರಲ್ಲಿ ರೋಗನಿರ್ಣಯ ಮಾಡಲಾಗಿದೆ. ತಂಬಾಕು ಸಂಬಂಧಿತ ಕ್ಯಾನ್ಸರ್ ಅನ್ನು ಹೊರತುಪಡಿಸಿ, ತಂಬಾಕು ಸಂಬಂಧಿತ ಇತರ ಕಾಯಿಲೆಗಳಾದ ಹೃದ್ರೋಗಗಳು, ಉಸಿರಾಟದ ಕಾಯಿಲೆಗಳು, ನಿದ್ರಾಹೀನತೆ, ಮೂತ್ರನಾಳದ ಕಾಯಿಲೆಗಳು, ದುರ್ಬಲತೆ ಮತ್ತು ಮಹಿಳೆಯರಲ್ಲಿ – ಮುಟ್ಟಿನ ಅಸಮತೋಲನ, ದೋಷಯುಕ್ತ ಜನನ ಮತ್ತು ಕಡಿಮೆ ತೂಕದ ಮಗುವಿನ ಜನನ ಮತ್ತು ಗರ್ಭಗೊರಳಿನ ಕ್ಯಾನ್ಸರ್ ರೋಗಗಳು ಪತ್ತೆಯಾಗಿವೆ.

ಕಿದ್ವಾಯಿಯಲ್ಲಿ ವರ್ಷ 3,000ಕ್ಕೂ ಹೆಚ್ಚು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ಬೆಂಗಳೂರು ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆಯ ಪ್ರಕಾರ ತಂಬಾಕು ಸಂಬಂಧಿತ ಕ್ಯಾನ್ಸರ್ ರೋಗಿಗಳ ಸರಾಸರಿ ವಯೋಮಾನ ಹೊಂದಾಣಿಕೆಯ ಪ್ರಮಾಣವು ಒಂದು ಲಕ್ಷ ಪುರುಷರಲ್ಲಿ 40 ಮತ್ತು ಒಂದು ಲಕ್ಷ ಮಹಿಳೆಯರಲ್ಲಿ 21 ಆಗಿದೆ.

ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿವರ್ಷ 3,000 ಕ್ಕೂ ಹೆಚ್ಚು ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ತಂಬಾಕು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಿನ ರೋಗಿಗಳು ರೋಗದ ಉಲ್ಬಣಾವಸ್ಥೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆಯು ಕಷ್ಟಕರ ಮತ್ತು ಹೆಚ್ಚು ಫಲದಾಯಕವಾಗುವುದಿಲ್ಲ .

ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳು/ ಇತರೆ ರೋಗಗಳು ಪ್ರಾಥಮಿಕವಾಗಿ ತಡೆಗಟ್ಟಬಹುದು ಎಂಬುದು ತಿಳಿದ ವಿಷಯವೇ. ಆದರೆ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಗಳ ನಿಯಂತ್ರಣಕ್ಕಾಗಿ ಕಾರ್ಯನೀತಿಗಳು ಮತ್ತು ಕಾರ್ಯತಂತ್ರಗಳ ರೂಪದಲ್ಲಿ ಯೋಜಿತ ಪ್ರಯತ್ನಗಳು ಆಗಬೇಕಾದುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

ತೆರಿಗೆ ಹೇರಿಕೆ, ಜಾಹೀರಾತು ನಿಷೇಧ, ಹೊಗೆ ಮುಕ್ತಗೊಳಿಸಲು ಕಾರ್ಯನೀತಿಗಳು ಮತ್ತು ತಂಬಾಕು ಉದ್ಯಮದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ರಕ್ಷಣೆ ಸೇರಿದಂತೆ ಹೆಚ್ಚುತ್ತಿರುವ ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಗಳ ಅನುಷ್ಠಾನವನ್ನು ಬೆಂಬಲಿಸಲು ವಿಶ್ವ ಆರೋಗ್ಯ ಸಂಸ್ಥೆಯು ಒಂದು ಪಾರಂಪರಿಕ ಕಾರ್ಯಚೌಕಟ್ಟಿನೊಳಗೆ ವಿವರವಾದ ಮಾರ್ಗದರ್ಶನವನ್ನು ನೀಡುತ್ತಿದೆ. ಆದರೆ, ವಿಶ್ವದ ಹೆಚ್ಚಿನ ಭಾಗಗಳಲ್ಲಿ, ಈ ಮಾರ್ಗದರ್ಶೀ ಸೂತ್ರಗಳನ್ನು ಪರಿಣಾಮಕಾರೀ ಶಾಸನಗಳನ್ನಾಗಿ ರೂಪಿಸುವುದು ಬಹಳ ದೂರವೇ ಉಳಿದಿದೆ.

ಕರ್ನಾಟಕದಲ್ಲಿರುವ ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಮಾಹಿತಿ ಕರ್ನಾಟಕದಲ್ಲಿ ಅಂದಾಜು 87304 ಕ್ಯಾನ್ಸರ್ ಪ್ರಕರಣಗಳಿದ್ದು, ಅದರಲ್ಲಿ 20.935 ಪ್ರಕರಣಗಳು ತಂಬಾಕು ಸಂಬಂಧಿತ ಸಂಭವ ಪ್ರಕರಣಗಳಾಗಿವೆ.

ಪುರುಷರು ಶೇ.37749 ಮಂದಿ, ಮಹಿಳೆಯರು 49555 ಮಂದಿ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅದರಲ್ಲಿ 37,260 ಮಂದಿ ಪುರುಷರು, 19,265 ಮಂದಿ ಮಹಿಳೆಯರು ತಂಬಾಕು ಸಂಬಂಧಿತ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಕ್ಯಾನ್ಸರ್ ಪ್ರಕರಣಗಳು ನಗರದಲ್ಲಿ ಒಟ್ಟು 15827 ಮಂದಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಅದರಲ್ಲಿ 6868 ಮಂದಿ ಪುರುಷರು, 8959 ಮಂದಿ ಮಹಿಳೆಯರಿಗೆ ಕ್ಯಾನ್ಸರ್ ಇದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ. ರಾಮಚಂದ್ರ ಮಾಹಿತಿ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್