Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ

Drumstick: ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ.

Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ
ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 01, 2022 | 6:06 AM

ನುಗ್ಗೆ ಕಾಯಿ, ನುಗ್ಗೆ ಸೊಪ್ಪು ಎಲ್ಲರಿಗೂ ಚಿರಪರಿಚಿತವಾದ ತರಕಾರಿ. ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳಿಂದ ತುಂಬಿವೆ. ಆಂಗ್ಲ ಭಾಷೆಯಲ್ಲಿ Drumstick tree. Moringa drumstick tree, ಸಂಸ್ಕೃತ ಭಾಷೆಯಲ್ಲಿ ಶೋಭಾಂಜನ, ತೀಕ್ಷ್ಣ ಗಂಧ ಎಂದೂ. ಹಿಂದಿ ಭಾಷೆಯಲ್ಲಿ ಸಹಜನ, ಮುನಗಾ ಎಂದೂ ತೆಲುಗುವಿನಲ್ಲಿ ಮುನಗ ಮಾನು, ಮುನಗ ಕಾಯಿ ಎಂದು ಕರೆಯುತ್ತಾರೆ.

ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ:

  1. * ನುಗ್ಗೆ ಸೊಪ್ಪು ಬೇಯಿಸಿ ತೆಗೆದು ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  2. * ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನುಗ್ಗೆ ಸೊಪ್ಪು ಕಾಯಿ ಉತ್ತಮ ಆಹಾರವಾಗಿದೆ.
  3. * ಬೇಯಿಸಿ ಬಸಿದ ಸೊಪ್ಪಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ತಲೆ ಸುತ್ತು ನಿವಾರಣೆಯಾಗುತ್ತದೆ.
  4. * ನುಗ್ಗೆ ಕಾಯಿ ಸೇವನೆಯಿಂದ ನಿರ್ವೀರ್ಯತೆ, ನರಗಳ ದೌರ್ಬಲ್ಯ, ಮಲಬದ್ಧತೆ ನಿವಾರಣೆಯಾಗುತ್ತದೆ.
  5. * ನುಗ್ಗೆ ಎಲೆಗಳ 10 ಎಂ ಎಲ್ ರಸದಲ್ಲಿ ಶುದ್ಧವಾದ ಒಂದು ಟೀ ಚಮಚ ಜೇನುತುಪ್ಪ ಬೆರೆಸಿ ಅಂಜನ ಮಾಡಿದರೆ ಕಣ್ಣಿನ ರೋಗಗಳಲ್ಲಿ ಉಪಯುಕ್ತವಾಗಿದೆ.
  6. * ದೇಹದ ಬಾವು ನೋವುಗಳಿಗೆ ನುಗ್ಗೆ ಗಿಡದ ಚಕ್ಕೆಯನ್ನು ನೀರಿನಲ್ಲಿ ತೇಯ್ದು 10 ಗ್ರಾಂ ನಷ್ಟು ಸೇವನೆ ಮಾಡಬೇಕು.
  7. * ಪುರುಷತ್ವ ವೃದ್ಧಿಗೆ ಎಂಟ್ಹತ್ತು ನುಗ್ಗೆ ಹೂಗಳನ್ನು ಹಾಲಿನಲ್ಲಿ ಬೇಯಿಸಿ ಎರಡು ಬಾರಿ ಕುಡಿಯಬೇಕು.
  8. * ನುಗ್ಗೆ ಸೊಪ್ಪು ಅರೆದು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಮೊಳಕಾಲು ನೋವಿಗೆ ಬಳಸಬಹುದಾಗಿದೆ.
  9. * ನುಗ್ಗೆ ಗಿಡದ ಬೇರನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿದ ಎಣ್ಣೆಯು ಚರ್ಮ ರೋಗಗಳಿಗೆ ಉಪಯುಕ್ತವಾಗಿದೆ.
  10. * ನುಗ್ಗೆ ಗಿಡದ 100 ಗ್ರಾಂ ನಷ್ಟು ಎಲೆಗಳಲ್ಲಿ 20 ಗ್ರಾಂ ಒಣ ಶುಂಠಿ, 05 ಗ್ರಾಂ ಇಂಗು ಸೇರಿಸಿ ನೀರಿನಲ್ಲಿ ಅರೆದು ಸಣ್ಣ ಸಣ್ಣ ಗಾತ್ರದ ಗುಳಿಗೆಗಳನ್ನು ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿದರೆ ಹೊಟ್ಟೆಯುಬ್ಬರ ಮತ್ತು ಹೊಟ್ಟೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
  11. * ಇದರ ಅಂಟನ್ನು ಬಾಯಿಯಲ್ಲಿ ಚೀಪುತ್ತಿದ್ದರೆ ಹಲ್ಲು ನೋವಿಗೆ ಪರಿಹಾರ.
  12. * ಅರ್ಧ ತಲೆ ನೋವಿಗೆ ನುಗ್ಗೆ ಎಲೆಗಳ ರಸವನ್ನು ನೋವಿರುವ ವಿರುದ್ಧದ ಕಿವಿಯಲ್ಲಿ ನಾಲ್ಕೈದು ಹನಿ ಹಾಕಬೇಕು.
  13. * ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಮಾಡುವ ಮತ್ತು ರಕ್ತದೊತ್ತಡ ನಿವಾರಿಸುವ ಗುಣ ನುಗ್ಗೆಯಲ್ಲಿದೆ. ಮೂಳೆಗಳನ್ನು ಬಲಪಡಿಸುವ, ಮಲಬದ್ಧತೆ ಅಸಿಡಿಟಿ ಗ್ಯಾಸ್ಟ್ರಿಕ್ ದೂರ ಮಾಡುವ ಗುಣ ಹೊಂದಿರುವ ಈ ನುಗ್ಗೆ ಗಿಡದ ಚಕ್ಕೆಗೆ ಸ್ವದೇಶಿ ಪೆನ್ಸಿಲಿನ್ ಎಂದೂ ಕರೆಯಲಾಗುತ್ತದೆ.
  14. ಮಾರುಕಟ್ಟೆಯಲ್ಲಿ ನುಗ್ಗೆ ಬೀಜದ ಎಣ್ಣೆ, Moringa ಹೆಸರಿನಲ್ಲಿ ಇದರ ಸೊಪ್ಪಿನ ಪೌಡರ್ ಮಾರಾಟ ಮಾಡುತ್ತಾರೆ. (ಮಾಹಿತಿ ಸಂಗ್ರಹ: ಎಸ್​ ಹೆಚ್​ ನದಾಫ್)

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ