Art Of Yoga: ಒಮ್ಮೆಲೇ ಬರುವ ಹಲವು ಆಲೋಚನೆಗಳ ತಡೆದು ಮನಸ್ಸಲ್ಲಿ ಖಾಲಿ ಜಾಗ ಸೃಷ್ಟಿಸುವ ಆಕಾಶ ಮುದ್ರಾ

Yoga And Health: ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ.

Art Of Yoga: ಒಮ್ಮೆಲೇ ಬರುವ ಹಲವು ಆಲೋಚನೆಗಳ ತಡೆದು ಮನಸ್ಸಲ್ಲಿ ಖಾಲಿ ಜಾಗ ಸೃಷ್ಟಿಸುವ ಆಕಾಶ ಮುದ್ರಾ
Kamala Bharadwaj
Follow us
TV9 Web
| Updated By: ನಯನಾ ರಾಜೀವ್

Updated on: Jun 01, 2022 | 3:28 PM

ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ. ಅದೇ ರೀತಿ ನಮ್ಮ ಶರೀರವು ಸಹ ಪಂಚತತ್ವಗಳಿಂದಾಗಿದೆ. ಯಾವಾಗ ಈ ಪಂಚತತ್ವಗಳು ಸಮತೋಲನದಲ್ಲಿರುತ್ತವೆಯೋ ಆಗ ನಾವು ಆರೋಗ್ಯದಿಂದಿರುತ್ತೇವೆ. ಯಾವಾಗ ಸಮತೋಲನ ಕಳೆದುಕೊಳ್ಳತ್ತೇವೆಯೋ ಆಗ ನಮಗೆ ಅನಾರೋಗ್ಯದಿಂದ ರೋಗಗಳು ತಲೆದೋರುತ್ತವೆ. ಈ ಪಂಚತತ್ವಗಳನ್ನು ಸಮತೋಲನದಲ್ಲಿ ಕಾಪಾಡುವುದೇ ಮುದ್ರಾಯೋಗದ ಉದ್ದೇಶವಾಗಿದೆ.

ಮುದ್ರೆಗಳನ್ನು ಯೋಗದ ಅಂಶವೆಂದು ಪರಿಗಣಿಸಲಾಗಿದೆ. ಕೈಯ ಅಂಗುಷ್ಠದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತಮುದ್ರೆಗಳೆನ್ನುವರು. ಈ ಮುದ್ರೆಗಳಿಂದ ಆರೋಗ್ಯವನ್ನು ಸಂವರ್ಧಿಸಿ,ಸಂರಕ್ಷಿಸಬಹುದಾಗಿರುತ್ತದೆ.

ಆಕಾಶ ಮುದ್ರಾ ಎಂದರೇನು? ಮಾಡುವ ಕ್ರಮಗಳೇನು? ಉಪಯೋಗಗಳೇನು? ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರಧ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಉದಾಹರಣೆ ಸಹಿತ: ಯಾರಾದರೂ ಏರ್​ಪ್ಲೇನ್​ನಲ್ಲಿ ಟ್ರಾವೆಲ್ ಮಾಡುವಾಗ ಅಥವಾ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವಾಗ ಅವರ ಜೆಟ್​ಲ್ಯಾಗ್​ನಿಂದ ಅವರು ಬಳಲುತ್ತಿದ್ದರೆ ಆಕಾಶ ಮುದ್ರಾ ಮಾಡುವುದರಿಂದ ಅವರು ಹೊರಬರಬಹುದು.

ಅಷ್ಟೇ ಅಲ್ಲದೆ ಯಾರೂ ಎಷ್ಟೇ ಮಾಡಿದರೂ ಲೌಕಿಕ ಪ್ರಪಂಚದಿಂದ ಆಧ್ಯಾತ್ಮಿಕದ ಕಡೆಗೆ ಹೋಗಲು ಸಾಧ್ಯವಾಗುತ್ತಿರುವುದಿಲ್ಲ, ಅಂತವರು ಕೂಡ ಈ ಮುದ್ರೆಯನ್ನು ಮಾಡಬಹುದು.

ಮತ್ತಷ್ಟು ಓದಿ

ಹಾಗೆಯೇ ಒಬ್ಬರ ಬಗ್ಗೆ ಎಷ್ಟೇ ಆಲೋಚನೆ ಮಾಡಿದರೂ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತಿಲ್ಲ ಯಾವಾಗಲೂ ಕೆಟ್ಟ ಅಭಿಪ್ರಾಯವೇ ಬರುತ್ತದೆ ಎಂದಾದರೆ ಆಕಾಶ ಮುದ್ರೆ ಮಾಡಿದರೆ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೊರಹಾಕಬಹುದಾಗಿದೆ.

ಸುಲಭವಾಗಿ ಹೇಳುವುದಾದರೆ ಒಂದು ಮಿಕ್ಸಿ ಜಾರ್​ಗೆ ಒಂದಷ್ಟು ಆಹಾರ ಪದಾರ್ಥಗಳನ್ನು ಹಾಕುತ್ತೇವೆ. ರುಬ್ಬುವುದಕ್ಕೆ ಎಲ್ಲಾ ಪದಾರ್ಥಗಳನ್ನು ಹಾಕುವುದಕ್ಕಿಂತ ಹೆಚ್ಚಾಗಿ ಅಗತ್ಯವಿರುವ ಒಂದಷ್ಟು ಪದಾರ್ಥಗಳನ್ನು ಹಾಕುತ್ತೇವೆ. ಚೆನ್ನಾಗಿ ರುಬ್ಬಲು ಖಾಲಿ ಜಾಗವನ್ನು ಕೂಡ ಜಾರಿನಲ್ಲಿ ಬಿಡಲಾಗುತ್ತದೆ. ಮಿಕ್ಸಿಯಲ್ಲಿ ಏನನ್ನು ಹಾಕುತ್ತೇವೆ ಎಂಬುದರ ಜತೆಗೆ ಯಾವ್ಯಾವ ಪದಾರ್ಥಗಳನ್ನು ಹಾಕುವುದಿಲ್ಲ ಎಂಬುದೂ ಪ್ರಮುಖವಾಗಿರುತ್ತದೆ.

ಹಾಗೆಯೇ ಮನುಷ್ಯನ ಮನಸ್ಸು ಕೂಡ ಸ್ವಲ್ಪ ಖಾಲಿ ಜಾಗವನ್ನು ನೀಡಬೇಕು. ಒಂದು ನಿಮಿಷವೂ ಬಿಡುವು ಕೊಡದೆ ಮನಸ್ಸಿನಲ್ಲಿ ಸಾವಿರಾರು ಆಲೋಚನೆಗಳನ್ನು ತುಂಬಿಕೊಂಡರೆ ಅದು ನಮಗೆ ಒತ್ತಡವಾಗಿ ಕಾಡುತ್ತಿದ್ದರೆ ಆಗ ಆಕಾಶ ಮುದ್ರಾ ಮಾಡುವುದರಿಂದ 50-60 ಆಲೋಚನೆಗಳು ಒಟ್ಟೊಟ್ಟಿಗೆ ಬರುವ ಬದಲು ಎರಡು ಮೂರು ಆಲೋಚನೆಗಳು ಬರುತ್ತದೆ.

ಆಕಾಶ ಮುದ್ರೆ ಮಾಡುವ ಕ್ರಮ ಸಮತೋಲನದಲ್ಲಿದ್ದಾಗ ವ್ಯಕ್ತಿ ಸಂಕುಚಿತ ಮನೋಭಾವವಿಲ್ಲದೆ ವಿಶಾಲವಾಗಿ ಯೋಚನೆ ಮಾಡುತ್ತಾನೆ. ಹೆಬ್ಬೆರಳಿನ ತುದಿ ಮತ್ತು ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಿದಾಗ ಆಕಾಶ ಮುದ್ರೆ ಆಗುತ್ತದೆ. ಹೃದಯದ ಯಾವುದೇ ಸಮಸ್ಯೆಯಿದ್ದರೂ, ಈ ಮುದ್ರೆಯಿಂದ ಶಮನವಾಗುತ್ತದೆ. ಕಿವಿಯ ತೊಂದರೆ ಸರಿಪಡಿಸುತ್ತದೆ. ಎಲುಬುಗಳನ್ನು ಗಟ್ಟಿಮುಟ್ಟಾಗಿಡುತ್ತದೆ. ಮೈಗ್ರೇನ್ ತಲೆನೋವುವನ್ನು ಸರಿಪಡಿಸುತ್ತದೆ. ಶರೀರದಲ್ಲಿನ ವಿಷದ್ರವ್ಯಗಳನ್ನು ಹೊರ ಹಾಕಿ ಶರೀರ ಶುದ್ಧವಾಗಿಡುತ್ತದೆ.

ಉಪಯೋಗ: -ದೇಹದಲ್ಲಿ ಆಕಾಶತತ್ವದ ವೃದ್ಧಿಯಾಗುತ್ತದೆ.

-ಹೃದಯದ ತೊಂದರೆಗಳ ನಿವಾರಣೆಯಾಗುತ್ತದೆ.

-ಮೂಳೆಗಳ ರೋಗನಿವಾರಣೆಯಾಗುತ್ತದೆ.

-ಒಳ್ಳೆಯ ಭಾವನೆಗಳು ಮೂಡುತ್ತವೆ.

-ಮೂತ್ರ, ಬೆವರಿನ ಮೂಲಕ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತದೆ

-ಶ್ರವಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿವುಡುತನ ಕಡಿಮೆಯಾಗುತ್ತದೆ. ಕಿವಿನೋವು, ತಲೆ ತಿರುಗಿವಿಕೆ ಮುಂತಾದ ಸಮಸ್ಯೆಗಳಿಗೆ ಇದು ಔಷಧದಂತೆ ಕೆಲಮ ಮಾಡುತ್ತದೆ.

-ಮೂಳೆಯನ್ನು ಬಲಪಡಿಸುತ್ತದೆ ಹಾಗೂ ಇದರ ಸಂಬಂಧದ ಕಾಯಿಲೆಗಳಿಗೂ ಪ್ರಯೋಜನಕಾರಿ.

-ದೇಹದಲ್ಲಿ ಕ್ಯಾಲ್ಸಿಯಂ ಅಂಶವು ಕಡಿಮೆ ಇದ್ದಲ್ಲಿ ಆಕಾಶ ಮುದ್ರೆಯನ್ನು ಮಾಡಿದಲ್ಲಿ ಉತ್ತಮ ಫಲವನ್ನು ಪಡೆಯಬಹುದು.

-ರಕ್ತದ ಒತ್ತಡವನ್ನು ಸುಗಮಗೊಳಿಸುತ್ತದೆ.

-ಹಲ್ಲುನೋವನ್ನು ಕಡಿಮೆ ಮಾಡುತ್ತದೆ.

-ಹೃದಯದ ಬಡಿತವನ್ನು ಸರಿಗೊಳಿಸುತ್ತದೆ. ಸಾಮಾನ್ಯವಾಗಿ ತಲೆದೂರುವ ಮೈಗ್ರೇನ್, ವಾಕರಿಕೆ ಸಂದರ್ಭದಲ್ಲೂ, ರಕ್ತದೊತ್ತಡ, ಹಿಮೊಗ್ಲೋಬಿನ್ ಹೆಚ್ಚುವುದಕ್ಕೂ ಈ ಮುದ್ರೆ ಸಹಕಾರಿ.

-ದೇಹದಲ್ಲಿ ವಿಷಕಾರಕಗಳನ್ನು ಹೊರತೆಗೆಯಲು, ಕಿರುಕುಳ, ಕೆರಳುವಿಕೆ / ಪೀಡಿಸುವಂತಹ ಸಂವೇದನೆ ಈ ಮುದ್ರೆ ಸಹಕರಿ. ಬೆವರು, ಮೂತ್ರ, ಮಲವಿಸರ್ಜನೆ ಸಮರ್ಪಕವಾಗಲು ಆಕಾಶ ಮುದ್ರೆ ಉಪಕಾರಿ.

-ಸಂಜೆಯ ಹೊತ್ತು ಈ ಆಕಾಶ ಮುದ್ರವನ್ನು ಮಾಡಿ.

-ದಿನ 50 ನಿಮಿಷಗಳ ಕಾಲ ಮುದ್ರೆ ಮಾಡಬೇಕು

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ