Art Of Yoga: ನಿಮ್ಮ ಮನಸ್ಸನ್ನು ನಿಯಂತ್ರಿಸುವ ಶಕ್ತಿ ಇರುವ ಚಿನ್​ಮುದ್ರೆಯ ಬಗ್ಗೆ ತಿಳಿಯಿರಿ

Yoga And Health: ನಮ್ಮ ಕೈಗಳ ಒಂದೊಂದು ಬೆರಳೂ ಒಂದೊಂದು ಪಂಚಭೂತವನ್ನು ಪ್ರತಿನಿಧಿಸುತ್ತದೆ. ಈ ಬೆರಳುಗಳನ್ನು ಬಳಸಿ ಮುದ್ರೆ ಮಾಡಿದಾಗ ಹೃದಯದ ಸ್ನಾಯುಗಳು ಬಲಗೊಂಡು ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ರಕ್ತಸಂಚಾರವಾಗುತ್ತದೆ.

Art Of Yoga: ನಿಮ್ಮ ಮನಸ್ಸನ್ನು ನಿಯಂತ್ರಿಸುವ ಶಕ್ತಿ ಇರುವ ಚಿನ್​ಮುದ್ರೆಯ ಬಗ್ಗೆ ತಿಳಿಯಿರಿ
Chin Mudra
Follow us
TV9 Web
| Updated By: ನಯನಾ ರಾಜೀವ್

Updated on:May 30, 2022 | 5:23 PM

ನಮ್ಮ ಕೈಗಳ ಒಂದೊಂದು ಬೆರಳೂ ಒಂದೊಂದು ಪಂಚಭೂತವನ್ನು ಪ್ರತಿನಿಧಿಸುತ್ತದೆ. ಈ ಬೆರಳುಗಳನ್ನು ಬಳಸಿ ಮುದ್ರೆ ಮಾಡಿದಾಗ ಹೃದಯದ ಸ್ನಾಯುಗಳು ಬಲಗೊಂಡು ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ರಕ್ತಸಂಚಾರವಾಗುತ್ತದೆ. ಅದರಲ್ಲಿ ಮೊದಲನೆಯದು ಚಿನ್​ಮುದ್ರೆ ಅದರ ಬಗ್ಗೆ ಯೋಗತಜ್ಞೆ ಕಮಲಾ ಭಾರಧ್ವಾಜ್ ಅವರು ನೀಡಿರುವ ವಿವರಣೆ ಇಲ್ಲಿದೆ.

ಪ್ರಾಣಾಯಾಮ ಮಾಡುವಾಗ ನಮ್ಮ ದೇಹದಲ್ಲಿರುವ ಐದು ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುದ್ರೆಗಳನ್ನು ಯೋಗದ ಅಂಶ ಎಂದು ಪರಿಗಣಿಸಲಾಗುತ್ತಿದೆ. ಇದು ಕೈಗಳು ಮತ್ತು ಬೆರಳುಗಳ ಸಹಾಯದಿಂದ ಮಾಡುವಂತಹುದು. ಕೈ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ.

ಮತ್ತಷ್ಟು ಓದಿ

ಪದ್ಮಾಸನ, ಸುಖಾಸನದಲ್ಲಿ ಈ ಮುದ್ರ ಮಾಡಬಹುದು. 30-35 ನಿಮಿಷಗಳ ಕಾಲ ಮುದ್ರೆ ಮಾಡಬೇಕು. ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ ಹಾಗೂ ಪ್ರತಿ ಬೆರಳೂ ತನ್ನದೇ ಆದ ಶಕ್ತಿ ಮತ್ತು ಚೈತನ್ಯವನ್ನು ಹೊಂದಿದೆ.

ಯಾವ ಬೆರಳುಗಳು ಏನನ್ನು ಸೂಚಿಸುತ್ತವೆ? ಎಲ್ಲ ಬೆರಳುಗಳೂ ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನಿ ತತ್ವ, ತೋರು ಬೆರಳು ವಾಯು, ಮಧ್ಯದ ಬೆರಳು ಆಕಾಶ, ಉಂಗುರದ ಬೆರಳು ಪೃಥ್ವಿ (ಭೂಮಿ), ಕಿರುಬೆರಳು ವರುಣನನ್ನು (ಜಲತತ್ವ) ಪ್ರತಿನಿಧಿಸುತ್ತವೆ. ಹೀಗೆ ಪಂಚಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ ಬೆರಳುಗಳ ತುದಿಗೆ ಸ್ಪರ್ಶಿಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತವೆ.

ಒತ್ತಡ ಆಗದಂತೆ ನಿಯಂತ್ರಿಸಲು ಚಿನ್​ಮುದ್ರೆ ಮಾಡುವುದು ಉಪಯುಕ್ತ. ತೋರು​ಬೆರಳು ವಾಯು ತತ್ವ ಹೊಂದಿರುತ್ತದೆ ಮತ್ತು ಹೆಬ್ಬೆರಳು ಅಗ್ನಿ ತತ್ವ ಹೊಂದಿರುತ್ತದೆ. ಇವೆರಡರ ಅಗ್ರಭಾಗವನ್ನು ಸ್ಪರ್ಶಿಸಿ ಮಾಡುವ ಮುದ್ರೆಯಿದು. ಚಿನ್ಮುದ್ರವು ನಮ್ಮ ದೇಹದಲ್ಲಿ ವಾಯುವಿನ ಸಮತೋಲನವನ್ನು ಕಾಪಾಡುತ್ತದೆ.

ಚಿನ್ಮುದ್ರೆಯಲ್ಲಿ ಜೋಡಣೆಗೊಳ್ಳುವ ಹಸ್ತದಲ್ಲಿನ ಕಿರು ಬೆರಳು, ಉಂಗುರ ಬೆರಳು ಹಾಗೂ ಮಧ್ಯದ ಬೆರಳುಗಳು ದೇಹ, ಮನಸ್ಸು ಹಾಗೂ ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆ.

ಚಿತ್ ಎಂದರೆ ಸಂಸ್ಕೃತದಲ್ಲಿ ಪ್ರಜ್ಞೆ ಎಂಬ ಅರ್ಥ. ಮುದ್ರೆ ಎಂದರೆ ಮೊಹರು ಎಂದರ್ಥ. ಈ ಮುದ್ರೆಯು ಜ್ಞಾನದ ಸೂಚಕವಾಗಿದೆ ಎಂದು ಯೋಗಗಳಲ್ಲಿ ಹೇಳುತ್ತಾರೆ. ಹೆಬ್ಬೆರಳಿನಲ್ಲಿ ಅಗ್ನಿತತ್ತ್ವವಿದೆ. ತೋರುಬೆರಳಲ್ಲಿ ವಾಯುತತ್ತ್ವವಿದೆ. ಇವೆರಡು ಜೊತೆಯಾದಾಗ ಮನಸ್ಸು ಸ್ಥಿರಗೊಂಡು ಶಾಂತತೆ, ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚುತ್ತದೆ.

ಸಮತೋಲನ: ಚಿನ್​ಮುದ್ರೆಯು ನಮ್ಮ ದೇಹದಲ್ಲಿ ವಾಯುವನ್ನು ಸಮತೋಲನದಲ್ಲಿಡುತ್ತದೆ. ಹಾಗೂ ಮನಸ್ಸನ್ನು ಸ್ಥಿರವಾಗಿರಿಸುತ್ತದೆ. ವಾಯು ಎಂದರೆ ಚಲನೆ ಹಾಗೂ ಕಲ್ಪನೆ, ಅಗ್ನಿ ಎಂದರೆ ಮೆದುಳು. ವಾಯು ಹಾಗೂ ಅಗ್ನಿ ಎರಡೂ ಮನಸ್ಸನ್ನು ಹಿಡಿತದಲ್ಲಿಡಲು ನೆರವಾಗುತ್ತದೆ.

ಪಿಟ್ಯುಟರಿ ಗ್ರಂಥಿ ಎಂದರೇನು? ಮಾನವ ದೇಹದ ಅತಿ ಚಿಕ್ಕ ಗ್ರಂಥಿ ಎಂದರೆ ಪಿಟ್ಯುಟರಿ ಗ್ರಂಥಿ. ಈ ಗ್ರಂಥಿಯನ್ನು ಗ್ರಂಥಿಗಳ ರಾಜ ಎಂದು ಕರೆಯುತ್ತಾರೆ. ಇದೊಂದು ನಿರ್ನಾಳ ಗ್ರಂಥಿಯಾಗಿದೆ. ಇದು ಮೆದುಳಿನ ಬಳಿ ಕಂಡು ಬರುತ್ತದೆ. ಅಂದರೆ ಹೈಪೊಥಾಲಸ್‌ನ ಕೆಳ ಭಾಗದಲ್ಲಿ ಕಂಡು ಬರುತ್ತದೆ. ಈ ಗ್ರಂಥಿಯು ಇತರೆ ಗ್ರಂಥಿಗಳನ್ನು ನಿಯಂತ್ರಿಸುತ್ತದೆ ಅಲ್ಲದೇ ಬೆಳವಣಿಗೆಗೆ ಹಾರ್ಮೋನನ್ನು ಉತ್ಪಾದಿಸುತ್ತದೆ.

ಚಿನ್​ಮುದ್ರೆಯಿಂದಾಗುವ ಪ್ರಯೋಜನಗಳೇನು? ಚಿನ್​ಮುದ್ರೆಯು ನಿದ್ರಾಹೀನತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗೂ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ವ್ಯಕ್ತಿಯು ನಿತ್ಯ ಚಿನ್​ಮುದ್ರೆಯನ್ನು ಅಭ್ಯಾಸ ಮಾಡಿದಾಗ ಕೋಪ, ಖಿನ್ನತೆ, ಒತ್ತಡ ಮತ್ತು ಆತಂಕ ಸೇರಿದಂತೆ ಎಲ್ಲಾ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಈ ಮುದ್ರೆ ಮನಸ್ಸನ್ನು ಹಿಂಡುವ ಹಳೆ ನೋವನ್ನು (ಮಾನಸಿಕ ಒತ್ತಡ) ನಿವಾರಿಸುತ್ತದೆ. ಧ್ಯಾನದ ಸಮಯದಲ್ಲಂತೂ ಏಕಾಗ್ರತೆಯ ಸುಧಾರಣೆ, ದೇಹ-ಮನಸ್ಸಿನ ಒತ್ತಡ ನಿಯಂತ್ರಣವಾಗುವುದು. ಪದೇಪದೆ ಮಾನಸಿಕ ಒತ್ತಡ, ಗಡಿಬಿಡಿ, ಪದೇಪದೆ ಕೋಪಕ್ಕೆ ಒಳಗಾಗುವವರಿಗೆ ಜ್ಞಾನಮುದ್ರೆ ಸಹಕಾರಿಯಾಗುತ್ತದೆ.

ವಿಧಾನ: ಯಾವುದಾದರೊಂದು ಒಂದು ಭಂಗಿಯಲ್ಲಿ (ಪದ್ಮಾಸನ, ಸುಖಾಸನ ಇತ್ಯಾದಿ ಆಸನಗಳಲ್ಲಿ) ಕುಳಿತುಕೊಂಡು ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಯನ್ನು ಲಘುವಾಗಿ ಹಿಡಿದುಕೊಳ್ಳಿ. ಉಳಿದ ಮೂರು ಬೆರಳುಗಳನ್ನು ನೇರವಾಗಿಸಿ, ಕೈಗಳನ್ನು ಮಂಡಿಯ ಮೇಲಿಟ್ಟು ಅಭ್ಯಾಸ ಮಾಡಿ. ಎಷ್ಟು ಹೊತ್ತು ಬೇಕಾದರೂ ಅಭ್ಯಾಸ ಮಾಡಬಹುದು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Mon, 30 May 22