Public Toilet: ನೀವು ಸಾರ್ವಜನಿಕ ಶೌಚಾಲಯ ಬಳಕೆ ಮಾಡ್ತೀರಾ ತಪ್ಪದೇ ಇದನ್ನು ಓದಿ
Public Toilet:ಜನರ ಹಿತ ದೃಷ್ಟಿಯಿಂದಲೇ ಸಾರ್ವಜನಿಕ ಶೌಚಾಲಯ(Public Toilet)ಗಳನ್ನು ತೆರೆಯಲಾಗಿದ್ದರೂ ಕೂಡ ಬಳಕೆ ಮಾಡುವುದರಿಂದ ಹಾನಿಯೇ ಹೆಚ್ಚು.
ಜನರ ಹಿತ ದೃಷ್ಟಿಯಿಂದಲೇ ಸಾರ್ವಜನಿಕ ಶೌಚಾಲಯ(Public Toilet)ಗಳನ್ನು ತೆರೆಯಲಾಗಿದ್ದರೂ ಕೂಡ ಬಳಕೆ ಮಾಡುವುದರಿಂದ ಹಾನಿಯೇ ಹೆಚ್ಚು. ಸಾರ್ವಜನಿಕ ಶೌಚಾಲಯದ ಸೀಟ್ ಮೇಲೆ ಕುಳಿತುಕೊಳ್ಳಲು ಭಯ ಎಂದು ಹಲವರು ಹೇಳುತ್ತಾರೆ. ಆದರೆ ಬ್ಯಾಕ್ಟೀರಿಯಾ ಭಯಕ್ಕೆ ನೀವು ಕುಳಿತುಕೊಳ್ಳುವ ಭಂಗಿ ಬದಲಿಸಿದರೂ ಬೇರೆ ಬೇರೆ ರೀತಿಯ ಸಮಸ್ಯೆ ಶುರುವಾಗಬಹುದು ಎಚ್ಚರದಿಂದಿರಿ.
ಪಬ್ಲಿಕ್ ಟಾಯ್ಲೆಟ್ ಅಂದರೆ ಕೊಳಕು ಎನ್ನುವ ಭಾವನೆ ಸಾಕಷ್ಟು ಮಂದಿಯಲ್ಲಿದೆ. ಹೀಗಾಗಿ ಒಮ್ಮೊಮ್ಮೆ ಅನಿವಾರ್ಯವಾಗಿ ಸಾರ್ವಜನಿಕ ಶೌಚಾಲಯಕ್ಕೆ ಹೋದರೂ ಟಾಯ್ಲೆಟ್ ಸೀಟ್ ಮೇಲೆ ಸರಿಯಾಗಿ ಕೂರುವುದಿಲ್ಲ. ಅರ್ಧಮರ್ಧ ಕುಳಿತು ಮೂತ್ರ ವಿಸರ್ಜನೆ ಮಾಡುವವರೇ ಹೆಚ್ಚು. ನೀವೂ ಸರಿಯಾಗಿ ಕುಳಿತುಕೊಳ್ಳದೆ ಮೂತ್ರ ವಿಸರ್ಜನೆ ಮಾಡಿದರೆ ಅದರಿಂದಾಗುವ ಅಪಾಯಗಳ ಬಗ್ಗೆ ಎಚ್ಚರವಿರಲಿ.
ಬ್ಯಾಕ್ಟೀರಿಯಾ ಪ್ರಮಾಣ ಕಡಿಮೆ: ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚು ಬಾರಿ ಶುಚಿ ಮಾಡುವ ಕಾರಣ ಮನೆಗಿಂತಲೂ ಬ್ಯಾಕ್ಟೀರಿಯಾ ಪ್ರಮಾಣ ಕಡಿಮೆ ಇರುತ್ತದೆ. ನಿಮ್ಮ ಆರೋಗ್ಯ ರಕ್ಷಣೆಗೆ ನೀವು ಟಾಯ್ಲೆಟ್ ಸೀಟ್ ಮೇಲೆ ಸರಿಯಾದ ವಿಧಾನದಲ್ಲಿ ಕುಳಿತುಕೊಳ್ಳುವುದು ಬಹಳ ಮುಖ್ಯ. ಸರಿಯಾದ ವಿಧಾನ ಬಳಸದೆ ಹೋದ್ರೆ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸರಿಯಾಗಿ ಕುಳಿತುಕೊಳ್ಳದಿದ್ದರೂ ಈ ಸಮಸ್ಯೆ ಕಾಡುತ್ತೆ: ಎಲ್ಲ ಸಾರ್ವಜನಿಕ ಶೌಚಾಲಯಗಳಲ್ಲೂ ಈಗ ವೆಸ್ಟರ್ನ್ ಟಾಯ್ಲೆಟ್ ಸಾಮಾನ್ಯವಾಗಿದೆ. ಅನೇಕರಿಗೆ ಅದನ್ನು ಬಳಸಿ ಅಭ್ಯಾಸವಿರುವುದಿಲ್ಲ. ಮತ್ತೆ ಕೆಲವರು ಮನೆಯಲ್ಲಿ ಬಳಕೆ ಮಾಡಿದರೂ ಸಾರ್ವಜನಿಕ ಶೌಚಾಲಯದ ಬಳಕೆ ವೇಳೆ ಹೆದರುತ್ತಾರೆ. ಟಾಯ್ಲೆಟ್ ಸೀಟ್ ಮೇಲೆ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಇದರಿಂದ ಶ್ರೋಣಿಯ ಅಂಗಗಳ ಹಿಗ್ಗುವಿಕೆಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಪೆಲ್ವಿಕ್ ಆರ್ಗನ್ ಪ್ರೋಲ್ಯಾಪ್ಸ್ ಆಗಬಹುದು ಮೂತ್ರ ವಿಸರ್ಜನೆ ಮಾಡುವಾಗ ಕಮೋಡ್ ಮೇಲೆ ನೀವು ಸರಿಯಾಗಿ ಕುಳಿತುಕೊಳ್ಳದಿದ್ದರೆ, ಅದು ನಿಮ್ಮ ಪೆಲ್ವಿಕ್ ಫ್ಲೋರ್ ಅನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಸೊಂಟವು ಬಲವಾಗಿರಬೇಕು. ಇಲ್ಲವಾದರೆ ಪೆಲ್ವಿಕ್ ಆರ್ಗನ್ ಪ್ರೋಲ್ಯಾಪ್ಸ್ ಆಗಬಹುದು.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಅಗಿರುವುದಿಲ್ಲ, ಅಧ್ಯಯನ ವರದಿಯನ್ನು ಆಧರಿಸಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ