BBMP ಚುನಾವಣಾ ಮೀಸಲಾತಿ ತಿದ್ದುಪಡಿಗೆ ಸಿಎಂ ಬೊಮ್ಮಾಯಿ ಸಂಪುಟ ಅಸ್ತು; ಬಿಬಿಎಂಪಿ ಚುನಾವಣೆ ನಡೆಸಲು ಸಕಲ ಸಜ್ಜು
BBMP ಚುನಾವಣಾ ಮೀಸಲಾತಿ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಬಿಬಿಎಂಪಿ ಚುನಾವಣಾ ಮೀಸಲಾತಿಯಲ್ಲಿ ಆಗಿದ್ದ ತಪ್ಪು ಸರಿಪಡಿಸಿ. ಒಟ್ಟಾರೆ ಮೀಸಲಾತಿ ಶೇ.50ರಷ್ಟು ಮೀರದಂತೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರು: BBMP ಚುನಾವಣಾ ಮೀಸಲಾತಿ ತಿದ್ದುಪಡಿಗೆ ಸಂಪುಟ ಅಸ್ತು ಎಂದಿದೆ. ಬಿಬಿಎಂಪಿ ಚುನಾವಣಾ ಮೀಸಲಾತಿಯಲ್ಲಿ ಆಗಿದ್ದ ತಪ್ಪು ಸರಿಪಡಿಸಿ. ಒಟ್ಟಾರೆ ಮೀಸಲಾತಿ ಶೇ.50ರಷ್ಟು ಮೀರದಂತೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶೇ.50ರಷ್ಟು ಮೀರದಂತೆ ಮೀಸಲಾತಿ ತಿದ್ದುಪಡಿಗೆ ನಿರ್ಧಾರ ಮಾಡಿದೆ.
ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮಹತ್ವದ ಇತರ ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಎಂಟು ವಾರಗಳ ಒಳಗಾಗಿ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಜೊತೆಗೆ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಯ ಬಗ್ಗೆಯೂ ಸುಪ್ರೀಂ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಮುಂದಿನ ನಡೆಯ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ: IPL 2022: ಐಪಿಎಲ್ ಬೆಸ್ಟ್ ಕ್ಯಾಚ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ..?
ಬಿಬಿಎಂಪಿ ಚುನಾವಣೆಯನ್ನು ನಡೆಸಲು ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ, ಈ ವಿಷಯದಲ್ಲಿ ಯಾವುದೇ ಹಿಂದೇಟು ಹಾಕುವುದಿಲ್ಲ. ಬಿಬಿಎಂಪಿ ಚುನಾವಣೆಯನ್ನು ನಾವು ಎದುರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚಿಗೆ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:04 pm, Mon, 30 May 22