IPL 2022: ಐಪಿಎಲ್​ ಬೆಸ್ಟ್ ಕ್ಯಾಚ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ..?

BEST CATCH of IPL 2022: ಅತ್ಯುತ್ತಮ ಕ್ಯಾಚ್​ಗಳ ಪಟ್ಟಿಯಲ್ಲಿ ಅಂಬಾಟಿ ರಾಯುಡು ಹಿಡಿದ ಡೈವಿಂಗ್ ಕ್ಯಾಚ್, ರಾಹುಲ್ ತ್ರಿಪಾಠಿಯ ಸ್ಟನ್ನಿಂಗ್ ಕ್ಯಾಚ್, ಹರ್ಪ್ರೀತ್ ಬ್ರಾರ್​ ಅವರ ಟೈಮಿಂಗ್ ಕ್ಯಾಚ್, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಮೂವಿಂಗ್ ಕ್ಯಾಚ್​ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

IPL 2022: ಐಪಿಎಲ್​ ಬೆಸ್ಟ್ ಕ್ಯಾಚ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ..?
BEST CATCH of IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 30, 2022 | 7:01 PM

BEST CATCH of IPL 2022: ಐಪಿಎಲ್​ ಸೀಸನ್​ 15 ನಲ್ಲಿ ಆರೆಂಜ್ ಕ್ಯಾಪ್ ಯಾರಿಗೆ, ಪರ್ಪಲ್​ ಕ್ಯಾಪ್ ಯಾರಿಗೆ ಸಿಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಪ್ಲೇಆಫ್ ಹಂತದ ಪಂದ್ಯಗಳ ವೇಳೆಯೇ ಲಭಿಸಿತ್ತು. ನಿರೀಕ್ಷೆಯಂತೆ ಬ್ಯಾಟಿಂಗ್ ಮೂಲಕ ಇಡೀ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಇನ್ನು ಬೌಲಿಂಗ್​​ನಲ್ಲಿ 27 ವಿಕೆಟ್ ಪಡೆದ ಯುಜುವೇಂದ್ರ ಚಹಲ್ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.

ಅದೇ ರೀತಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 45 ಸಿಕ್ಸ್ ಬಾರಿಸಿದ ಜೋಸ್ ಬಟ್ಲರ್ ಪಡೆದಿದ್ದಾರೆ. ಇದಾಗ್ಯೂ ಐಪಿಎಲ್ ಸೀಸನ್​ನಲ್ಲಿ ಬೆಸ್ಟ್ ಕ್ಯಾಚ್ ಪ್ರಶಸ್ತಿಗೆ ಕೊನೆಯವರೆಗೂ ಪೈಪೋಟಿ ಇತ್ತು. ಏಕೆಂದರೆ ಪಂದ್ಯದ ಅಂತಿಮ ಎಸೆತದ ವೇಳೆ ಅದ್ಭುತ ಕ್ಯಾಚ್ ಹಿಡಿದರೂ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ನೀಡಬಹುದಾಗಿತ್ತು. ಆದರೆ ಇಂತಹ ಯಾವುದೇ ಕ್ಯಾಚ್ ಫೈನಲ್ ಪಂದ್ಯದ ವೇಳೆ ಕಂಡು ಬಂದಿಲ್ಲ.

ಇದನ್ನೂ ಓದಿ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಈ ಬಾರಿ ಹಲವು ಆಟಗಾರರು ಅದ್ಭುತ ಕ್ಯಾಚ್​ಗಳನ್ನು ಹಿಡಿದಿದ್ದರು. ಅದರಲ್ಲೂ ಅತ್ಯುತ್ತಮ ಕ್ಯಾಚ್​ಗಳ ಪಟ್ಟಿಯಲ್ಲಿ ಅಂಬಾಟಿ ರಾಯುಡು ಹಿಡಿದ ಡೈವಿಂಗ್ ಕ್ಯಾಚ್, ರಾಹುಲ್ ತ್ರಿಪಾಠಿಯ ಸ್ಟನ್ನಿಂಗ್ ಕ್ಯಾಚ್, ಹರ್ಪ್ರೀತ್ ಬ್ರಾರ್​ ಅವರ ಟೈಮಿಂಗ್ ಕ್ಯಾಚ್, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಮೂವಿಂಗ್ ಕ್ಯಾಚ್, ಎವಿನ್ ಲೂಯಿಸ್​ ಅವರ ಸಿಂಗಲ್ ಹ್ಯಾಂಡ್ ಕ್ಯಾಚ್​ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಹೀಗಾಗಿ ಅಧ್ಬುತ ಕ್ಯಾಚ್ ಅವಾರ್ಡ್​ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿತ್ತು.

ಅದರಂತೆ ಅಂತಿಮವಾಗಿ ಬೆಸ್ಟ್ ಕ್ಯಾಚ್ ಅವಾರ್ಡ್​ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಎವಿನ್ ಲೂಯಿಸ್​ ಅವರಿಗೆ ಸಿಕ್ಕಿದೆ. ಏಕೆಂದರೆ ಲೂಯಿಸ್ ಹಿಡಿದ ಕ್ಯಾಚ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಹೌದು, ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ 40 ರನ್​ ಬಾರಿಸಿ ರಿಂಕು ಸಿಂಗ್ ಅಬ್ಬರಿಸಿದ್ದರು. ಮಾರ್ಕಸ್ ಸ್ಟೋಯಿನಿಸ್ ಅವರ ಕೊನೆಯ ಓವರ್​ನಲ್ಲಿ ಇನ್ನೇನು ರಿಂಕು ಸಿಂಗ್ ಪಂದ್ಯ ಗೆಲ್ಲಿಸಿಕೊಡಲಿದ್ದಾರೆ ಅನ್ನುವಷ್ಟರಲ್ಲಿ ರಿಂಕು ಸಿಂಗ್ ಬಾರಿಸಿದ ಚೆಂಡನ್ನು ಓಡಿ ಬಂದು ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಎವಿನ್ ಲೂಯಿಸ್ ಎಲ್ಲರನ್ನೂ ದಂಗಾಗಿಸಿದ್ದರು. ಪರಿಣಾಮ ಆ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 2 ರನ್​ಗಳಿಂದ ರೋಚಕ ಜಯ ಸಾಧಿಸಿತು.

ಹೀಗೆ ಒಂದು ಕ್ಯಾಚ್ ಮೂಲಕ ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿ ಎವಿನ್ ಲೂಯಿಸ್ ಅವರ ಅದ್ಭುತ ಕ್ಯಾಚ್​ಗೆ ಈ ಬಾರಿಯ ಐಪಿಎಲ್​ನ ಬೆಸ್ಟ್ ಕ್ಯಾಚ್ ಅವಾರ್ಡ್​ ಲಭಿಸಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ