Karnataka High Court: 80ರ ಅಜ್ಜಿ ಸೇರಿದಂತೆ ಗಂಡನ ಮನೆಯ ಎಲ್ಲರ ವಿರುದ್ಧವೂ ವರದಕ್ಷಿಣೆ ಕೇಸ್: ಪ್ರಕರಣ ರದ್ದುಪಡಿಸಿದ ಹೈಕೋರ್ಟ್!
ಗಂಡನ ತಾಯಿ, ಅಜ್ಜಿ, ನಾದಿನಿ, ಮೈದುನ ಸೇರಿದಂತೆ ಎಲ್ಲರೂ ಹೀಯಾಳಿಸುತ್ತಿದ್ದರು. ಕುಳ್ಳಗಿದ್ದೀಯ, ಕೀಳು ಜಾತಿಗೆ ಸೇರಿದ್ದೀಯ ಎಂದೆಲ್ಲಾ ಮಾನಸಿಕ ಹಿಂಸೆ ನೀಡಿದರು. ಪತಿ ನನ್ನ ಶೀಲ ಶಂಕಿಸಿದ. ಕುಡಿತದ ಚಟಕ್ಕೆ ಬಿದ್ದು ಹಲ್ಲೆ ಮಾಡುತ್ತಿದ್ದ. ಕೊಲೆ ಮಾಡಲೂ ಯತ್ನಿಸಿದ ಎಂಬುದು ಸೇರಿದಂತೆ ಸಾಲು ಸಾಲು ಆರೋಪಗಳನ್ನು ಮಾಡಿ, ಪೊಲೀಸರಿಗೆ ದೂರು ನೀಡಿದ್ದರು.
ಬೆಂಗಳೂರು: ಯಾವುದೇ ಸೂಕ್ತ ಆಧಾರಗಳಿಲ್ಲದ್ದರೂ ಹಾಸಿಗೆ ಹಿಡಿದಿರುವ 80 ವರ್ಷದ ವೃದ್ಧೆ ಸೇರಿದಂತೆ ಗಂಡನ ಮನೆಯ ಎಲ್ಲರ ವಿರುದ್ಧವೂ ಪತ್ನಿ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ದಾವಣಗೆರೆ ಕೋರ್ಟ್ ನಲ್ಲಿ ಪತ್ನಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಚಿತ್ರದುರ್ಗ ನಿವಾಸಿಯಾಗಿರುವ ಪತಿ ಮತ್ತು ಆತನ 7 ಮಂದಿ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪತ್ನಿ ನೀಡಿದ್ದ ದೂರಿನ ಮೇರೆಗೆ ದಾವಣಗೆರೆ ಮಹಿಳಾ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 498-ಎ, 323, 504, 506, 307, 313, 354, 114 , 34 Jo ತಡೆ ಕಾಯ್ದೆ-1961ರ ಸೆಕ್ಷನ್ 3, 4ರ ಅಡಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ, ತನಿಖೆ ನಡೆಸಿ ದಾವಣಗೆರೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಮತ್ತವರ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.
ಪೀಠ ತನ್ನ ತೀರ್ಪಿನಲ್ಲಿ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣದಲ್ಲಿ ಬೋಳು ಆರೋಪಗಳನ್ನು ಬಿಟ್ಟರೆ ಯಾವುದೇ ಹುರುಳಿಲ್ಲ. ವರದಕ್ಷಿಣೆ ಕಿರುಕುಳಕ್ಕೆ ಸಾಕ್ಷ್ಯಗಳನ್ನೂ ನೀಡಿಲ್ಲ. ಈ ಪ್ರಕರಣದಲ್ಲಿ ನೋಟಿಸ್ ಜಾರಿ ಮಾಡಿದ್ದರೂ ಹೈಕೋರ್ಟ್ ವಿಚಾರಣೆಯಲ್ಲಿ ಪತ್ನಿ ಭಾಗಿಯಾಗಿಲ್ಲ. ವರದಕ್ಷಿಣೆ ತಡೆ ಕಾಯ್ದೆ-1961ರ ಕಲಂ 3 ಮತ್ತು 4ರ ಅಡಿ ದೂರು ಸಲ್ಲಿಸುವಾಗ ಮುಂದೇನಾಗುತ್ತದೆ ಎಂಬುದರ ಪರಿಣಾಮಗಳನ್ನು ದೂರುದಾರ ಮಹಿಳೆ ಅವಲೋಕಿಸಿಲ್ಲ. ಇಂತಹ ಪ್ರಕರಣಗಳನ್ನು ಮುಂದುವರೆಯಲು ಬಿಟ್ಟರೆ ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ವಿಚಾರಣಾ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆ ನಿವಾಸಿಯಾದ 25 ವರ್ಷದ ಮಹಿಳೆ 2020ರ ಅಕ್ಟೋಬರ್ 24ರಂದು 29 ವರ್ಷದ ವ್ಯಕ್ತಿಯನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ದಂಪತಿ ನಡುವಿನ ಸಂಬಂಧ ಹಳಸಿತ್ತು. 2021ರ ಆಗಸ್ಟ್ 22ರಂದು ಪೊಲೀಸರಿಗೆ ಪತ್ನಿ ದೂರು ನೀಡಿದ್ದರು. ದೂರಿನಲ್ಲಿ ಮದುವೆ ಸಂದರ್ಭದಲ್ಲಿ ಪತಿಗೆ 5 ಲಕ್ಷ ಹಣ, ಒಡವೆ, ಇತರೆ ವಸ್ತುಗಳನ್ನು ತಮ್ಮ ಪೋಷಕರು ನೀಡಿದ್ದರು. ಅಷ್ಟು ಸಾಲದೆಂದು ಪತಿ ಕುಟುಂಬಸ್ಥರು ಮತ್ತಷ್ಟು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದರು. ಪೋಷಕರು ಸಾಲ ಮಾಡಿ ಹಣ ಕೊಟ್ಟ ನಂತರವೂ ಕಿರುಕುಳ ಮುಂದುವರೆಸಿದರು.
ಗಂಡನ ತಾಯಿ, ಅಜ್ಜಿ, ನಾದಿನಿ, ಮೈದುನ ಸೇರಿದಂತೆ ಎಲ್ಲರೂ ಹೀಯಾಳಿಸುತ್ತಿದ್ದರು. ಕುಳ್ಳಗಿದ್ದೀಯ, ಕೀಳು ಜಾತಿಗೆ ಸೇರಿದ್ದೀಯ ಎಂದೆಲ್ಲಾ ಮಾನಸಿಕ ಹಿಂಸೆ ನೀಡಿದರು. ಪತಿ ನನ್ನ ಶೀಲ ಶಂಕಿಸಿದ. ಕುಡಿತದ ಚಟಕ್ಕೆ ಬಿದ್ದು ಹಲ್ಲೆ ಮಾಡುತ್ತಿದ್ದ. ಕೊಲೆ ಮಾಡಲೂ ಯತ್ನಿಸಿದ ಎಂಬುದು ಸೇರಿದಂತೆ ಸಾಲು ಸಾಲು ಆರೋಪಗಳನ್ನು ಮಾಡಿ, ಪೊಲೀಸರಿಗೆ ದೂರು ನೀಡಿದ್ದರು.
ಪತ್ನಿ ನೀಡಿದ್ದ ದೂರಿನ ಮೇರೆಗೆ ದಾವಣಗೆರೆ ಮಹಿಳಾ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 498-ಎ, 323, 504, 506, 307, 313, 354, 114, 34 Jo ತಡೆ ಕಾಯ್ದೆ-1961ರ ಸೆಕ್ಷನ್ 3, 4ರ ಅಡಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ, ತನಿಖೆ ನಡೆಸಿ ದಾವಣಗೆರೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಮತ್ತವರ ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. (Source)
Published On - 8:00 pm, Mon, 30 May 22