ಕೇಂದ್ರದಿಂದ ರಾಜ್ಯಕ್ಕೆ 8633 ಕೋಟಿ ರೂ. ಜಿ.ಎಸ್.ಟಿ ಪರಿಹಾರ: ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಬೊಮ್ಮಾಯಿ
ಕೇಂದ್ರ ಸರ್ಕಾರವು ರಾಜ್ಯಕ್ಕೆ 2022 ರ ಮೇ 31 ರವರೆಗಿನ 8633 ಕೋಟಿ ರೂ ಜಿ ಎಸ್ ಟಿ ಪರಿಹಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಧಾನ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ 2022ರ ಮೇ 31 ರ ವರೆಗಿನ 8,633 ಕೋಟಿ ರೂ. ಜಿ.ಎಸ್.ಟಿ ಪರಿಹಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ. ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86,912 ಕೋಟಿ ರೂ. ಜಿ ಎಸ್.ಟಿ ಪರಿಹಾರ ನೀಡಿದ್ದು, ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
Thanks to FM @nsitharaman Ji for clearing entire #GST #Compensation of ₹86,912 crores due to the states till 31st May, 2022. Karnataka got its share of Rs. 8633 crores. One more step towards a vibrant economy under the leadership of Hon’ble PM @narendramodi Ji. https://t.co/NpohTJqS9a
— Basavaraj S Bommai (@BSBommai) May 31, 2022
ಈ ನಿರ್ಧಾರವನ್ನು ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡಲು ಮತ್ತು ತಮ್ಮ ಕಾರ್ಯಕ್ರಮಗಳನ್ನು ಅದರಲ್ಲಿಯೂ ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಲಾಗಿದೆ. ಜಿಎಸ್‌ಟಿ ಪರಿಹಾರ ನಿಧಿಯಲ್ಲಿ ಕೇವಲ 25 ಸಾವಿರ ಕೋಟಿ ರೂಪಾಯಿ ಮಾತ್ರ ಲಭ್ಯವಿದ್ದರೂ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಾಕಿಯನ್ನು ಕೇಂದ್ರವು ತನ್ನ ಸ್ವಂತ ಸಂಪನ್ಮೂಲಗಳಿಂದ ಸೆಸ್ ಸಂಗ್ರಹ ಬಾಕಿಯಿಂದ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ
ರಾಜ್ಯಗಳ ಸಂಪನ್ಮೂಲ ಕೊರತೆಯನ್ನು ಪೂರೈಸಲು, ಕೇಂದ್ರವು 2020-21 ರಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮತ್ತು 2021-22 ರಲ್ಲಿ ಒಂದು ಲಕ್ಷ 59 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಕ್-ಟು-ಬ್ಯಾಕ್ ಸಾಲವಾಗಿ ಎರವಲು ಪಡೆದು ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಲ್ಲಿನ ಕೊರತೆಯನ್ನು ನೀಗಿಸಲು ಈ ನಿರ್ಧಾರ ತೆಗೆದುಕೊಂಡಿದ್ದು, ಈ ನಿರ್ಧಾರಕ್ಕೆ ಎಲ್ಲ ರಾಜ್ಯಗಳೂ ಒಪ್ಪಿಗೆ ಸೂಚಿಸಿವೆ. ಜೊತೆಗೆ, ಕೇಂದ್ರವು ಸಂಪನ್ಮೂಲ ಕೊರತೆಯನ್ನು ಪೂರೈಸಲು ನಿಧಿಯಿಂದ ನಿಯಮಿತವಾಗಿ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯಗಳ ಸಂಘಟಿತ ಪ್ರಯತ್ನಗಳಿಂದ, ಸೆಸ್ ಸೇರಿದಂತೆ ಒಟ್ಟು ಮಾಸಿಕ ಜಿಎಸ್‌ಟಿ ಸಂಗ್ರಹವು ಗಮನಾರ್ಹ ಪ್ರಗತಿಯನ್ನು ಹೊಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.