ಲಾಲ್ಬಾಗ್ ಫ್ಲವರ್ ಶೋಗೆ ತೆರೆ: ಈ ವರ್ಷ ಜನ ಕಡಿಮೆ, ಆದ್ರೂ ದಾಖಲೆಯ ಆದಾಯ, ಎಷ್ಟು ಗೊತ್ತಾ?
ನಿನ್ನೆ ಸ್ವಾತಂತ್ರ್ಯ ದಿನಾಚರಣೆ ರಜೆ ಹಾಗೂ ಫ್ಲವರ್ ಶೋಗೆ ಕೊನೆ ದಿನ ಹಿನ್ನೆಲೆ ಸಾವಿರಾರು ಜನ ಸಸ್ಯಕಾಶಿಗೆ ಭೇಟಿ ಕೊಟ್ಟಿದ್ದಾರೆ. ಎಲ್ಲಿ ನೋಡಿದರೂ ಜನರೇ ಕಂಡುಬಂದಿದ್ದಾರೆ. ಹಾಘೂ ಈ ವರ್ಷ ದಾಖಲೆ ಮಟ್ಟದಲ್ಲಿ ಆದಾಯ ಬಂದಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಸ್ವತಂತ್ರ ದಿನಾಚರಣೆಯ ಪ್ರಯಕ್ತವಾಗಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿತ್ತು(Lalbagh Flower Show). ನಿನ್ನೆ ಆ ಫ್ಲವರ್ ಶೋಗೆ ತೆರೆ ಬಿದ್ದುದ್ದು ಕೊನೆಯ ದಿನದ ಫ್ಲವರ್ ಶೋ ನೋಡಲು ಜನರು ಮುಗಿಬಿದ್ದುದ್ರು. ನಿನ್ನೆ ಸ್ವಾತಂತ್ರ್ಯ ದಿನಾಚರಣೆ(Independence Day) ರಜೆ ಹಾಗೂ ಫ್ಲವರ್ ಶೋಗೆ ಕೊನೆ ದಿನ ಹಿನ್ನೆಲೆ ಸಾವಿರಾರು ಜನ ಸಸ್ಯಕಾಶಿಗೆ ಭೇಟಿ ಕೊಟ್ಟಿದ್ದಾರೆ. ಎಲ್ಲಿ ನೋಡಿದರೂ ಜನರೇ ಕಂಡುಬಂದಿದ್ದಾರೆ. ಹಾಘೂ ಈ ವರ್ಷ ದಾಖಲೆ ಮಟ್ಟದಲ್ಲಿ ಆದಾಯ ಬಂದಿದೆ ಎಂದು ತೋಟಗಾರಿಕೆ ಇಲಾಖೆ(Horticulture Department) ತಿಳಿಸಿದೆ.
ಈ ವರ್ಷ ವಿಧಾನಸೌಧ ಹಾಗೂ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ ನಲ್ಲಿ ಎರಡೂವರೆ ಕೋಟಿ ಬಜೆಟ್ ನಲ್ಲಿ 12 ದಿನಗಳ ಕಾಲ ಫ್ಲವರ್ ಶೋ ಆಯೋಜನೆ ಮಾಡಲಾಗಿತ್ತು. ನಿನ್ನೆ 12 ನೇ ದಿನದ ಫ್ಲವರ್ ಶೋಗೆ ತೆರೆಬಿದ್ದಿದ್ದು, ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯಾವರ ಕಾನ್ಸಪ್ಟ್ ಸಿಲಿಕಾನ್ ಜನರ ಮನಸೋರೆ ಗೊಳಿಸಿದೆ. 130 ಬಗೆಯ ಹೂವಿನ ಲೋಕವನ್ನ ನೋಡಲು ಜನರು ನಾ ಮುಂದು ತಾ ಮುಂದು ಅಂತ ಕುಟುಂಬ ಸಮೇತವಾಗಿ ಬಂದಿದ್ದರಿಂದ ನಿನ್ನೆ ಲಾಲ್ ಬಾಗ್ ನಲ್ಲಿ ಎಲ್ಲಿ ನೋಡಿದ್ರು ಜನರೇ ಕಾಣುಸ್ತಾ ಇದ್ರು. ಕೊನೆಯದಿನದಂದು ಕುಟುಂಬ ಸಮೇತವಾಗಿ ಜನರು ಫ್ಲವರ್ ಶೋ ವೀಕ್ಷಣೆ ಮಾಡುವುದಕ್ಕೆ ಬಂದಿದ್ರು. ಪುಟ್ಡ – ಪುಟ್ಟ ಮಕ್ಕಳನ್ನ ನೂಕು ನುಗ್ಗಲಲ್ಲಿ ನಿಭಾಯಿಸುವುದಕ್ಕೆ ಆಗದೇ ರೋಸಿ ಹೋದ್ರು. ಇನ್ನು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಫ್ಲವರ್ ಶೋ ಟಿಕೆಟ್ ಗಾಗಿ ಕಿಲೋ ಮೀಟರ್ ಗಟ್ಟಲೆ ಕ್ಯು ನಿಂತಿದ್ರು. ಹೀಗಾಗಿ ಜನರನ್ನ ನಿಭಾಯಿಸಲು ತೋಟಾಗಾರಿಕಾ ಸಿಬ್ನಂದಿ ಹಾಗೂ ಪೋಲಿಸರು ರೋಸಿ ಹೋದ್ರು.
ಇದನ್ನೂ ಓದಿ: ಲಾಲ್ಬಾಗ್ ಫ್ಲವರ್ ಶೋಗೆ ಮೊದಲ ದಿನ ಅದ್ಭುತ ರೆಸ್ಪಾನ್ಸ್; 27 ಸಾವಿರ ಜನರಿಂದ ವೀಕ್ಷಣೆ; ಇಲ್ಲಿದೆ ಫೋಟೋಸ್
ದಾಖಲೆ ಮಟ್ಟದಲ್ಲಿ ಆದಾಯ
214 ನೇ ಫ್ಲವರ್ ಶೋಗೆ ನಿನ್ನೆ ತೆರೆ ಬಿದ್ದುದ್ದು, 12 ದಿನಗಳಿಂದ ಒಟ್ಟು 7 ರಿಂದ 8 ಲಕ್ಷದಷ್ಟು ಜನರು ಬಂದಿರುವ ಸಾಧ್ಯತೆ ಇದ್ದು ಹಿಂದಿನ ವರ್ಷದ ಪ್ರದರ್ಶನಕ್ಕೆ ಹೋಲಿಸಿದರೆ ಸುಮಾರು ಒಂದು ಲಕ್ಷದಷ್ಟು ಜನರ ಸಂಖ್ಯೆಯಲ್ಲಿ ಕುಸಿತವಾದರೂ 3.98 ಕೋಟಿ ರೂಪಾಯಿಗಳ ಆದಾಯ ಬಂದಿದೆ.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ಮಾತನಾಡಿ, ಕಳೆದ 12 ದಿನಗಳಲ್ಲಿ 8.2 ಲಕ್ಷ ಮಂದಿ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಸುಮಾರು 4 ಕೋಟಿ ಆದಾಯ ಬಂದಿದೆ. ಆದರೆ ಕಳೆದ ಸ್ವಾತಂತ್ರ್ಯ ದಿನದಂದು ದಿವಂಗತ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ವಿಶೇಷ ಫ್ಲವರ್ ಶೋ ಸಮಯದಲ್ಲಿ ನಾವು 9.5 ಲಕ್ಷ ಮಂದಿ ಭೇಟಿ ನೀಡುವ ಮೂಲಕ ದಾಖಲೆ ಸಂಖ್ಯೆಯ ಜನರ ಭೇಟಿಯನ್ನು ನೋಡಿದ್ದೆವು. ಆದರೆ, ಆಗ ಕೇವಲ 3.3 ಕೋಟಿ ರೂ ಅಷ್ಟು ಮಾತ್ರ ಆದಾಯ ಬಂದಿತ್ತು ಎಂದರು.
ಕಳೆದ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಗಿಬಿದ್ದಿದ್ದರು. ನಾವು ಅನೇಕರನ್ನು ಉಚಿತವಾಗಿ ಲಾಲ್ಬಾಗ್ ಫ್ಲವರ್ ಶೋ ವೀಕ್ಷಣೆಗೆ ಅನುವುಮಾಡಿಕೊಟ್ಟಿದ್ದೆವು. ಆದರೆ ಈ ಬಾರಿ ನಾವು ಎಚ್ಚರಿಕೆಯಿಂದ ಎಲ್ಲವನ್ನೂ ನಿಭಾಯಿಸಿದ್ದೇವೆ. UPI ಪಾವತಿಗಳನ್ನು ಸುಗಮಗೊಳಿಸುವುದರ ಜೊತೆಗೆ ಆನ್‌ಲೈನ್ ಬುಕಿಂಗ್ಗೂ ಅವಕಾಶ ಕೊಟ್ಟಿದ್ದೆವು. ಇದರಿಂದ ಸಾಕಷ್ಟು ಆದಾಯ ಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ