ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ

ಬೆಂಗಳೂರಿನಲ್ಲಿ ಜೀವನ ವೆಚ್ಚ ದುಬಾರಿಯಲ್ಲ ಎಂದು 24ರ ಯುವತಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಾಸಿಕ ಬಜೆಟ್ ಹಂಚಿಕೊಂಡ ಇವರು, ಸರಿಯಾಗಿ ಖರ್ಚು ನಿರ್ವಹಿಸಿದರೆ ಬೆಂಗಳೂರು ಕೈಗೆಟಕುವಂತಿದೆ ಎನ್ನುತ್ತಾರೆ. ಬಾಡಿಗೆ, ಊಟ, ಪ್ರಯಾಣದ ವಿವರ ನೀಡಿದ್ದು, ಜೀವನಶೈಲಿ ನಿರ್ವಹಣೆಯಿಂದ ವೆಚ್ಚ ಕಡಿಮೆಯಾಗುತ್ತದೆ ಎಂದು ವಿವರಿಸಿದ್ದಾರೆ. ದುಬಾರಿಯೆಂಬ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ
ಸಾಂದರ್ಭಿಕ ಚಿತ್ರ

Updated on: Jan 09, 2026 | 3:33 PM

ಬೆಂಗಳೂರು, ಜ.9: ಬೆಂಗಳೂರು ದುಬಾರಿ… ದುಬಾರಿ (Bangalore living cost) ಎಂದು ಹೇಳುವವರು, ತಮ್ಮ ಖರ್ಚನ್ನು ಕಡಿಮೆ ಮಾಡಿದ್ರೆ ದುಬಾರಿ ಆಗುವುದಿಲ್ಲ, ಬೆಂಗಳೂರು ದುಬಾರಿ ಅಲ್ಲ. ಇಲ್ಲಿ ಪ್ರತಿಯೊಬ್ಬರು ಉತ್ತಮವಾಗಿ ಜೀವನ ಮಾಡಬಹುದು, ಹಾಗೂ ಖರ್ಚು ಕಡಿಮೆ ಎಂದು ಯುವತಿಯೊಬ್ಬಳು ರೆಡ್ಡಿಟ್​​​​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​ ಭಾರೀ ವೈರಲ್​​ ಆಗುತ್ತಿದೆ. 24 ವರ್ಷದ ಈ ಯುವತಿ ತಮ್ಮ ಮಾಸಿಕ ವೆಚ್ಚಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಬೆಂಗಳೂರಿನಲ್ಲಿ ಕಡಿಮೆ ವೆಚ್ಚ ಎಂದು ಈ ಯುವತಿ ಹೇಳಿದ್ದಾರೆ. ಬೆಂಗಳೂರಿನ ಜೀವನ ವೆಚ್ಚವು ಹೆಚ್ಚಾಗಿ ನೀವು ನಿಮ್ಮ ಜೀವನಶೈಲಿಯನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೆಂಗಳೂರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಷ್ಟು ದುಬಾರಿಯಲ್ಲ ಎಂದು ಹೇಳಿದ್ದಾರೆ.

ಈ ಯುವತಿ ಒಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. “ಜನರು ಆಗಾಗ್ಗೆ ‘ಬೆಂಗಳೂರು ತುಂಬಾ ದುಬಾರಿಯಾಗಿದೆ’ ಎಂದು ಹೇಳುವುದರಿಂದ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ” ಎಂದು ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ಖರ್ಚು ಎಷ್ಟಿದೆ ಎಂಬುದನ್ನು ವಿವರಿಸಿದ್ದಾರೆ. ಬಾಡಿಗೆ (1BHK, ಮಲಗುವ ಕೋಣೆ/ಹಾಲ್/ಅಡುಗೆಮನೆ) ಈ ಬಾಡಿಗೆ ಮನೆಯಲ್ಲಿ ನಾನು ಮತ್ತು ನನ್ನ ಸ್ನೇಹಿತೆ ಇಬ್ಬರಿಗೆ ಸೇರಿ 13,000 ರೂ., ಒಬ್ಬರಿಗೆ 7 ಸಾವಿರ ಬೀಳುತ್ತದೆ. ತಿಂಗಳ ಊಟದ ಖರ್ಚು, 10,800 ರೂ., ಪ್ರಯಾಣದ ಖರ್ಚು ಒಂದು ಸಾವಿರ, ಊರಿಗೆ ಹೋಗಿ ಬರಲು 4000 ರೂ., ವೈ-ಫೈ 500, ನೀರು (ಬಿಲ್ + ಕುಡಿಯುವ ಶುಲ್ಕ) 400 ರೂ., ಜಿಮ್-ವರ್ಕ್​ಔಟ್​​​​ 570 ರೂ., ಇತರೆ ಎಲ್ಲ ಖರ್ಚು 3000 ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ?

ಆದರೆ ಇದು ಬೆಂಗಳೂರಿನಲ್ಲಿ ದೊಡ್ಡ ಖರ್ಚೇ ಅಲ್ಲ, ನಿಮ್ಮ ಜೀವನಶೈಲಿ ನಿಮ್ಮ ನಿಯಂತ್ರಣದಲ್ಲಿದ್ದರೆ ಬೆಂಗಳೂರು ಅಷ್ಟು ದುಬಾರಿಯಲ್ಲ, 3 ಕಿ.ಮೀ ದೂರದಲ್ಲಿ ವಾಸಿಸುವ ನನ್ನ ಕೆಲವು ಸ್ನೇಹಿತರು ತಿಂಗಳಿಗೆ ಸುಮಾರು 45,000 ರೂ. ಖರ್ಚು ಮಾಡುತ್ತಾರೆ. ದೊಡ್ಡ ವ್ಯತ್ಯಾಸವೇನು? ಅವರ 1BHK ಬಾಡಿಗೆ ಮಾತ್ರ 26,000 ರೂ. ನೀಡುತ್ತಾರೆ. ಮತ್ತೆಲ್ಲ ನಮ್ಮಷ್ಟೇ ಖರ್ಚು. ಹಣ ಉಳಿಸಲು ದೊಡ್ಡ ಸಲಹೆ ಎಂದರೆ, ಶನಿವಾರ ಮತ್ತು ಭಾನುವಾರದಂದು ಮಧ್ಯಾಹ್ನ 12 ಗಂಟೆಯವರೆಗೆ ಮಲಗುವುದು. ಇನ್ನು ಪೋಸ್ಟ್​​ಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆಗಿಂತ 1.5 ಪಟ್ಟು ಹೆಚ್ಚು ಆಹಾರಕ್ಕಾಗಿ ಖರ್ಚು ಮಾಡುವ ಏಕೈಕ ವ್ಯಕ್ತಿ ನೀವಾಗಿರಬಹುದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನನಗೆ ಮನೆಯಲ್ಲೇ ಅಡುಗೆ ಮಾಡಲು ಇಷ್ಟಪಡುತ್ತೇನೆ. ಆದರೆ ಅದಕ್ಕೆ ಹೆಚ್ಚಿನ ಸಮಯಬೇಕು. ಆಹಾರ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ