ಲಂಚ ಸ್ವೀಕರಿಸುತ್ತಿದ್ದ ಗೃಹಸಚಿವಾಲಯದ ಹೋಮ್ಗಾರ್ಡ್ ಲೋಕಾಯುಕ್ತ ಬಲೆಗೆ
ಲಂಚಕ್ಕೆ ಕೈಯೊಡ್ಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಗೃಹಸಚಿವಾಲಯದ ಹೋಮ್ಗಾರ್ಡ್ನನ್ನು ಲಂಚದ ಹಣದ ಸಹಿತ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು: ಲಂಚಕ್ಕೆ ಕೈಯೊಡ್ಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು (Lokayukta Police) ಗೃಹಸಚಿವಾಲಯ (Home Ministry)ದ ಹೋಮ್ಗಾರ್ಡ್ನನ್ನು ಲಂಚದ (Bribe) ಹಣದ ಸಹಿತ ನಗರದ ಖಾಸಗಿ ಹೋಟೆಲ್ನಲ್ಲಿ ಬಂಧಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ವೈದ್ಯಕೀಯ ವೆಚ್ಚದ ಬಿಲ್ಗಾಗಿ ಲಂಚ ಪಡೆಯುತ್ತಿದ್ದ ಹೋಮ್ಗಾರ್ಡ್ ಸತೀಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ವೈದ್ಯಕೀಯ ವೆಚ್ಚದ ಬಿಲ್ಗಾಗಿ ಸಂಬಂಧಪಟ್ಟವರಿಂದ ಮರುಪಾವತಿಸಲು ಕ್ರಮಕೈಗೊಳ್ಳಲು ಲಂಚಕ್ಕೆ ಬೇಡಿಕೆ ಇಡಲಾಗಿದೆ. ಅದರಂತೆ ಸಂಬಂಧಪಟ್ಟವರನ್ನು ಹಣ ತರುವಂತೆ ಖಾಸಗಿ ಹೊಟೇಲ್ಗೆ ಆಹ್ವಾನಿಸಲಾಗಿದೆ. ಅದರಂತೆ ಸತೀಶ್ ಅವರು ಲಂಚವಾಗಿ 20,000 ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ತಂದೆಯ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಮಗಳು
ಕಾರವಾರ: ಗಂಡು ಮಕ್ಕಳು ಇಲ್ಲದಿದ್ದಕ್ಕೆ ತಂದೆ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ಹಿರಿಯ ಮಗಳು ನೆರವೇರಿಸಿದ ಘಟನೆ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ. ಮಂಜುನಾಥ ನಾಗಪ್ಪ ನಾಯ್ಕ್(51) ಎಂಬವರು ನಿನ್ನೆ ತಮ್ಮ ಗೃಹಪ್ರವೇಶ ಮುಗಿಸಿ ಇಂದು ಮನೆಯ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಗಂಡು ಮಕ್ಕಳು ಇಲ್ಲದ ಹಿನ್ನೆಲೆ ಮೂವರು ಹೆಣ್ಣು ಮಕ್ಕಳ ಪೈಕಿ ಹಿರಿಯ ಮಗಳು ಶ್ವೇತಾ ನಾಗಪ್ಪ ನಾಯ್ಕ ಅವರೇ ಮುಂದೆ ನಿಂತು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Tue, 22 November 22