ಬೆಂಗಳೂರಿನಲ್ಲಿ ಸರಣಿ ಅಪಘಾತ: ಎರಡು ಕಾರುಗಳು ಜಖಂ, ಅದೃಷ್ಟವಶಾತ್​​ ತಪ್ಪಿದ ಭಾರಿ ಅನಾಹುತ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 19, 2022 | 12:48 PM

ಸಾಲದ ಬಾಧೆಯಿಂದಾಗಿ ವಿಷ ಸೇವಿಸಿ ರೈತ ಸಾವಿಗೆ ಶರಣಾಗಿರುವಂತಹ ಘಟನೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಸರಣಿ ಅಪಘಾತ: ಎರಡು ಕಾರುಗಳು ಜಖಂ, ಅದೃಷ್ಟವಶಾತ್​​ ತಪ್ಪಿದ ಭಾರಿ ಅನಾಹುತ
ಹೆಬ್ಬಾಳದ ಬಳಿ ಸರಣಿ ಅಪಘಾತ
Follow us on

ಬೆಂಗಳೂರು: ನಾಲ್ಕು ಕಾರು, ಒಂದು ಕ್ಯಾಂಟರ್ ಸೇರಿದಂತೆ ಸರಣಿ ಅಪಘಾತ (Accident) ವಾಗಿರುವಂತಹ ಘಟನೆ ಹೆಬ್ಬಾಳದ ಬಳಿ ನಡೆದಿದೆ. ಒಂದು ಇನೋವಾ, ಹುಂಡೈ ಕ್ರೇಟಾ, ಸ್ಕೋಡಾ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು, ಎರಡು ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಲ್ಲಿ ಯಾವುದೇ ಪ್ರಾಣ ಅಪಾಯವಾಗಿಲ್ಲ. ಕಾರು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಏರ್​ಬ್ಯಾಗ್ ಒಪನ್ ಆಗಿದ್ದ ಕಾರಣ ತೊಂದರೆಯಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ರಸ್ತೆದಾಟಲು ಯತ್ನಿಸಿದ್ದ ಓರ್ವ ವೃದ್ಧೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ಚಾಲಕ ಓರ್ವ ಬ್ರೇಕ್ ಹಾಕಿದ್ದು, ನಂತರ ಹಿಂದೆ ಬರುತ್ತಿದ್ದ ವಾಹನಗಳು ಸಾಲಾಗಿ ಡಿಕ್ಕಿ ಹೊಡೆದುಕೊಂಡಿವೆ.

ಇದನ್ನೂ ಓದಿ: ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಪೊಲೀಸರ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು

ಸಾಲದ ಬಾಧೆ: ವಿಷ ಸೇವಿಸಿ ಸಾವಿಗೆ ಶರಣಾದ ರೈತ

ದಾವಣಗೆರೆ: ಸಾಲದ ಬಾಧೆಯಿಂದಾಗಿ ವಿಷ ಸೇವಿಸಿ ರೈತ ಸಾವಿಗೆ ಶರಣಾಗಿರುವಂತಹ ಘಟನೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜಪ್ಪ (50) ಸಾವಿಗೆ ಶರಣಾದ ರೈತ. ಎರಡು ಎಕರೆ ಜಮೀನು ಹೊಂದಿದ್ದ ರೈತ, ಬೆಳೆ ಕೈಕೊಟ್ಟ ಹಿನ್ನೆಲೆ ನಿನ್ನೆ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ. ಇಂದು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ವಿವಿಧ ಕಡೆ ಐದು ರಿಂದ ಆರು ಲಕ್ಷ ಸಾಲ ಮಾಡಿದ್ದರು ಎನ್ನಲಾಗುತ್ತಿದೆ. ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mandya News: ಕೊನೆಗೂ ಪತ್ತೆಯಾಯ್ತು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ

ರಸ್ತೆ ‌ದಾಟುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಸಾವು

ದೇವನಹಳ್ಳಿ: ರಸ್ತೆ ‌ದಾಟುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ‌ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಯಲಹಂಕ‌ ಹೊರವಲಯದ ಏರ್ಪೋಟ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದರು.