Mandya News: ಕೊನೆಗೂ ಪತ್ತೆಯಾಯ್ತು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ
7 ವರ್ಷದ ಹಿಂದೆ ನಡೆದಿದ್ದ ಪೇಂಟರ್ ರಮೇಶ್ ಕೊಲೆಗೆ ಟ್ವಿಸ್ಟ್ ಸಿಕ್ಕಿದ್ದು, ಜಿಲ್ಲೆ ಮುಳಬಾಗಿಲಿನಲ್ಲಿ ಪೇಂಟರ್ ರಮೇಶ್ ಹತ್ಯೆಯಾಗಿತ್ತು. ನಗರಸಭೆ ಸದಸ್ಯನ ಕೊಲೆ ಪ್ರಕರಣದ ತನಿಖೆ ವೇಳೆ ಬಹಿರಂಗವಾಗಿದೆ.

ಮಂಡ್ಯ: ಜುಲೈ 13 ರಂದು ಅಸ್ತಿ ವಿಸರ್ಜಿಸುವ ವೇಳೆ ಬೆಂಗಳೂರಿನ ಯಲಹಂಕ ಮೂಲದ ನಿವಾಸಿ ಯುವಕ ಅಶೋಕ್ ನದಿಯಲ್ಲಿ ಕೊಚ್ಚಿ ಹೋಗಿದ್ದ. ಜಿಲ್ಲೆಯ ಶ್ರೀರಂಗಪಟ್ಟಣದ ಸಂಗಮದಲ್ಲಿ ಘಟನೆ ನಡೆದಿತ್ತು. ಸದ್ಯ ಯುವಕನ ಶವ (Dead Body) ಪತ್ತೆಯಾಗಿದೆ. ಮೂರು ದಿನಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್.ಡಿ.ಆರ್.ಎಫ್ ನಿರಂತರ ಶೋಧಕಾರ್ಯ ನಡೆಸಿ ಯುವಕನ ಶವ ಪತ್ತೆ ಮಾಡಿದೆ. ನದಿಯ ಹೊರ ಹರಿವಿನ ಪ್ರಮಾಣ ಹೆಚ್ಚಿದ್ದ ಕಾರಣ ಕಾರ್ಯಚರಣೆ ಸ್ಥಗಿತ ಗೊಳಿಸಲಾಗಿತ್ತು. ನಿನ್ನೆ ಹಾಗೂ ಇಂದು ಕೆ.ಆರ್.ಎಸ್ನಿಂದ ಹೊರ ಹರಿವಿನಲ್ಲಿ ಇಳಿಮುಕ ಹಿನ್ನೆಲೆ ಶ್ರೀರಂಗಪಟ್ಟಣದ ಮಹದೇವಪುರ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್
7 ವರ್ಷದ ಹಿಂದೆ ನಡೆದಿದ್ದ ಪೇಂಟರ್ ರಮೇಶ್ ಕೊಲೆಗೆ ಟ್ವಿಸ್ಟ್
ಕೋಲಾರ: 7 ವರ್ಷದ ಹಿಂದೆ ನಡೆದಿದ್ದ ಪೇಂಟರ್ ರಮೇಶ್ ಕೊಲೆಗೆ ಟ್ವಿಸ್ಟ್ ಸಿಕ್ಕಿದ್ದು, ಜಿಲ್ಲೆ ಮುಳಬಾಗಿಲಿನಲ್ಲಿ ಪೇಂಟರ್ ರಮೇಶ್ ಹತ್ಯೆಯಾಗಿತ್ತು. ನಗರಸಭೆ ಸದಸ್ಯನ ಕೊಲೆ ಪ್ರಕರಣದ ತನಿಖೆ ವೇಳೆ ಬಹಿರಂಗವಾಗಿದೆ. ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ಕೊಲೆಯಾದ ವ್ಯಕ್ತಿ. ಕೊಲೆಯಾದ ಜಗನ್ ಮೋಹನ್ ರೆಡ್ಡಿಯೇ ಸುಪಾರಿ ಕೊಟ್ಟಿದ್ದ ಮಾಹಿತಿ ಹೊರಬಿದಿದ್ದು, ಈ ಕುರಿತು ಪ್ರಕರಣದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಕೆರೆಯಲ್ಲಿ ಹೂಳಲಾಗಿದ್ದ ಶವವನ್ನು ಹೊರ ತೆಗೆಯಲು ಸಿದ್ಧತೆ ಮಾಡಿದ್ದು, ಹೂತಿದ್ದ ಶವದ ಗುರುತು ಪತ್ತೆ ಹಚ್ಚಲು ಪೊಲೀಸರಿಂದ ಸಿದ್ಧತೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಂಡ್ಯ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ; ಹಣಕ್ಕಾಗಿ ಬೇಡಿಕೆ
ಆಟೋ ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು
ಮಂಡ್ಯ: ಆಟೋ ಕಾರು ಮುಖಾಮುಖಿ ಡಿಕ್ಕಿಯಾಗಿ (Accident) ಮೂರು ಜನರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಪರಿಣಾಮ ಆಟೋದಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ. ಆಟೋ ಚಾಲಕ ಶ್ರೀನಿವಾಸ್. ರವಿ ಕುಮಾರ್. ಭಾಸ್ಕರ್ ಮೃತರು. ಡಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಗುಂಡಿಗೆ ಆಟೋ ಬಿದಿದ್ದು, ಆಟೋ ಮೇಲೆ ಕಾರು ಬಿದಿದ್ದಿದೆ. ಸ್ಥಳಕ್ಕೆ ಮಳವಳ್ಳಿ ಠಾಣಾ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Published On - 9:34 am, Tue, 19 July 22




