ಮಂಡ್ಯ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ; ಹಣಕ್ಕಾಗಿ ಬೇಡಿಕೆ
ಖದೀಮರು ನಕಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಖಾತೆಗೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಫೋಟೋ ಹಾಕಿ ಮೆಸೇಜ್ ಮಾಡುತ್ತಾರೆ. ಅರ್ಜೆಂಟ್ ಹಣ ಬೇಕಿದೆ ಎಂದು ಕೆಲವರಿಗೆ ಸಂದೇಶ ಕಳುಹಿಸುತ್ತಾರೆ.
ಮಂಡ್ಯ: ಟೆಕ್ನಾಲಜಿ ಬೆಳೆದಂತೆ ಸಮಸ್ಯೆಗಳು ಕೂಡಾ ಹುಟ್ಟಿಕೊಳ್ಳುತ್ತವೆ. ಇದಕ್ಕೆ ಉತ್ತಮ ಉದಾಹಾರಣೆ ಅಂದರೆ ಹ್ಯಾಕ್ (Hack). ಟ್ವಿಟರ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ (Social Media) ಬಹುತೇಕರು ಕಾಲ ಕಳೆಯುತ್ತಾರೆ. ಜೊತೆಗೆ ದಿನದಿತ್ಯದ ಸುದ್ದಿ, ಸಂದೇಶಗಳನ್ನ ಗ್ರಹಿಸುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಖಾತೆಗಳನ್ನ ಹ್ಯಾಕ್ ಮಾಡುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಾರೆ. ಇದೀಗ ಕಿಡಿಗೇಡಿಗಳು ಮಂಡ್ಯ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
ಖದೀಮರು ನಕಲಿ ವಾಟ್ಸಾಪ್ ಮತ್ತು ಫೇಸ್ಬುಕ್ ಖಾತೆಗೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಫೋಟೋ ಹಾಕಿ ಮೆಸೇಜ್ ಮಾಡುತ್ತಾರೆ. ಅರ್ಜೆಂಟ್ ಹಣ ಬೇಕಿದೆ ಎಂದು ಕೆಲವರಿಗೆ ಸಂದೇಶ ಕಳುಹಿಸುತ್ತಾರೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಕೊಟ್ಟಿರುವ ಡಿಸಿ, ಯಾರು ಹಣ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: T20 Blast Final: ರಣರೋಚಕ ಫೈನಲ್: ಗೆದ್ದು ಸಂಭ್ರಮಿಸಿದ ಬಳಿಕ ಅಂಪೈರ್ ನೋಬಾಲ್ ಅಂದ್ರು..!
ಇನ್ನು ಈ ಹಿಂದೆ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಶಾಸಕಿ ಮಾಹಿತಿ ನೀಡಿದ್ದರು. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೇ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಈ ಕುರಿತು ಶಾಸಕರೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ನನ್ನ ಖಾತೆ ಇದ್ದಕ್ಕಿದ್ದಂತೆ ನಿಷ್ಕ್ರಿಯವಾಗಿದೆ. ಖಾತೆಯನ್ನು ತೆರೆಯದಂತೆ ನಿಯಂತ್ರಣ ತಪ್ಪಿಸಿಲಾಗಿದೆ ಎಂದು ತಿಳಿಸಿದ್ದರು. ನನ್ನ ಖಾತೆಯಿಂದ ಯಾವುದೇ ಅಸಂಬದ್ಧ ಪೋಸ್ಟ್ ಕಂಡುಬಂದರೆ ಅದು ನನ್ನದಾಗಿರಲ್ಲ ಎಂದು ತಿಳಿಯಬೇಕು ಅಂತ ಮನವಿ ಮಾಡಿದ್ದರು.
ಇದನ್ನೂ ಓದಿ: ENG vs IND ODI: ಮೂರನೇ ಏಕದಿನಕ್ಕೆ ಒಂದು ಬದಲಾವಣೆ: ಪದಾರ್ಪಣೆಗೆ ಸಜ್ಜಾದ ಮತ್ತೊಬ್ಬ ಐಪಿಎಲ್ ಹೀರೋ
Published On - 10:56 am, Sun, 17 July 22