ಬೆಂಗಳೂರು: ನೈಸ್​ ರಸ್ತೆಯಲ್ಲಿ ಮತ್ತೊಂದು ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ ಸರಿಪಡಿಸಿದ ಟ್ರಾಫಿಕ್ ಪೊಲೀಸರು

ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ಅದಕ್ಕಿರುವ ವೈಜ್ಞಾನಿಕ ಕಾರಣಗಳನ್ನು ಪೊಲೀಸರು ಪತ್ತೆಮಾಡಿದ್ದರು. ನಂತರ ಲೋಪವನ್ನು ಸರಿಪಡಿಸುವಂತೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತರು ನೈಸ್ ಕಂಪನಿಗೆ ಪತ್ರ ಬರೆದಿದ್ದರು. ಜಂಟಿ ಪೊಲೀಸ್ ಆಯುಕ್ತರ ಪತ್ರಕ್ಕೆ ಸ್ಪಂದಿಸಿ ನೈಸ್ ಕಂಪನಿ ರಸ್ತೆ ಸರಿಪಡಿಸಿದೆ.

ಬೆಂಗಳೂರು: ನೈಸ್​ ರಸ್ತೆಯಲ್ಲಿ ಮತ್ತೊಂದು ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ ಸರಿಪಡಿಸಿದ ಟ್ರಾಫಿಕ್ ಪೊಲೀಸರು
ನೈಸ್​ ರಸ್ತೆ (ಸಂಗ್ರಹ ಚಿತ್ರ)
Updated By: Ganapathi Sharma

Updated on: Oct 18, 2023 | 10:05 PM

ಬೆಂಗಳೂರು, ಅಕ್ಟೋಬರ್ 18: ಬೆಂಗಳೂರಿನ ರಸ್ತೆಗಳಲ್ಲಿ ಅಲ್ಲಲ್ಲಿ ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್​ಗಳಿರುವುದು ಹೊಸತಲ್ಲ. ಇದೀಗ ರಾಜ್ಯ ರಾಜಧಾನಿಯ ನೈಸ್​ ರಸ್ತೆಯಲ್ಲಿ (Nice Road) ಮತ್ತೊಂದು ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ ಗುರುತಿಸಿರುವ ಸಂಚಾರಿ ಪೊಲೀಸರು (Traffic Police) ಅದನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ಬೆಂಗಳೂರು ಸಂಚಾರಿ ಪೊಲೀಸರ ಮನವಿಗೆ ಸ್ಪಂದಿಸಿ ನೈಸ್ ಕಂಪನಿ ರಸ್ತೆ ಸರಿಪಡಿಸಿದೆ.

ಬೆಂಗಳೂರಿನಲ್ಲಿರುವ ಹಲವು ರಸ್ತೆಗಳಲ್ಲಿ ಅಪಘಾತದ ಬ್ಲಾಕ್ ಸ್ಪಾಟ್​​ಗಳನ್ನು ಸಂಚಾರಿ ಪೊಲೀಸರು ಇತ್ತೀಚೆಗೆ ಗುರುತಿಸಿದ್ದರು. ಅದರಂತೆ, ನೈಸ್ ರಸ್ತೆಯ ಪೂರ್ವಂಕರ ಅಪಾರ್ಟ್​ಮೆಂಟ್ ಮುಂಭಾಗದ ರಸ್ತೆಯನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು. ಇದೇ ಜಾಗದಲ್ಲಿ ಮೂರು ವರ್ಷಗಳಲ್ಲಿ ಒಂದೇ ಜಾಗದಲ್ಲಿ 9 ಅಪಘಾತಗಳು ಸಂಭವಿಸಿದ್ದವು. ಈ ಪೈಕಿ ಬರೊಬ್ಬರಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 9 ಮಂದಿ ಗಾಯಗೊಂಡಿದ್ದರು. ಹೀಗಾಗಿ ಇದನ್ನ ಅಪಘಾತ ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು.

ಬ್ಲಾಕ್ ಸ್ಪಾಟ್ ಎಂದು ಗುರುತಿಸಿ ಅದಕ್ಕಿರುವ ವೈಜ್ಞಾನಿಕ ಕಾರಣಗಳನ್ನು ಪೊಲೀಸರು ಪತ್ತೆಮಾಡಿದ್ದರು. ನಂತರ ಲೋಪವನ್ನು ಸರಿಪಡಿಸುವಂತೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತರು ನೈಸ್ ಕಂಪನಿಗೆ ಪತ್ರ ಬರೆದಿದ್ದರು. ಜಂಟಿ ಪೊಲೀಸ್ ಆಯುಕ್ತರ ಪತ್ರಕ್ಕೆ ಸ್ಪಂದಿಸಿ ನೈಸ್ ಕಂಪನಿ ರಸ್ತೆ ಸರಿಪಡಿಸಿದೆ.

ಇದನ್ನೂ ಓದಿ: ಸವಾರರೇ ಎಚ್ಚರ; ಬೈಕ್​ ಚಾಲನೆ ವೇಳೆ ನಂಬರ್​ ಪ್ಲೇಟ್​ ಮರೆಮಾಚಿದ್ರೆ ಬೀಳುತ್ತೆ ದಂಡ

ಸ್ಥಳದಲ್ಲಿ 4 ಮೀಟರ್ ರಸ್ತೆಯನ್ನು ಎತ್ತರಗೊಳಿಸಿ ರಸ್ತೆಯನ್ನು ನೇರವಾಗಿ ಕಾಣುವಂತೆ ನೈಸ್ ಕಂಪನಿ ಮಾಡಿದೆ. ಜೊತೆಗೆ ರಸ್ತೆ ಬದಿಯಲ್ಲಿ ಬೀಮ್ ಗಾರ್ಡನ್, ಹೈ ಮಾಸ್ಕ್ ಲೈಟ್ , ಸಿಸಿ ಕ್ಯಾಮೆರಾ, ಸ್ಪೀಡೋಮೀಟರ್ ಹಾಗೂ ಸೋಲಾರ್ ಲೈಟ್ ಅಳವಡಿಸಿ ಅಭಿವೃದ್ದಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದ ರಸ್ತೆಯನ್ನು ಇಂದು (ಅಕ್ಟೋಬರ್ 18) ಸಂಚಾರ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಉದ್ಘಾಟಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ