AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 50 ಸಾವಿರ ರೂ.ಗೆ ನಕಲಿ ಮಾರ್ಕ್ಸ್​ಕಾರ್ಡ್​ ಮಾರುತ್ತಿದ್ದ ಆರೋಪಿಗಳು ಅರೆಸ್ಟ್!

Karnataka News: ಒಂದೊಂದು ಡಿಗ್ರಿ ಸರ್ಟಿಫಿಕೇಟ್​ಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು. ಮುಂಗಡ ಹಣಕೊಟ್ಟ ಒಂದು ತಿಂಗಳೊಳಗಾಗಿ ಮಾರ್ಕ್ಸ್​ಕಾರ್ಡ್ ಕೊಡುತ್ತಿದ್ದರು. ಸದ್ಯ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ 50 ಸಾವಿರ ರೂ.ಗೆ ನಕಲಿ ಮಾರ್ಕ್ಸ್​ಕಾರ್ಡ್​ ಮಾರುತ್ತಿದ್ದ ಆರೋಪಿಗಳು ಅರೆಸ್ಟ್!
ಪ್ರಾತಿನಿಧಿಕ ಚಿತ್ರ
TV9 Web
| Updated By: sandhya thejappa|

Updated on:Nov 29, 2021 | 1:11 PM

Share

ಬೆಂಗಳೂರು: ನಕಲಿ ಮಾರ್ಕ್ಸ್​ಕಾರ್ಡ್ (Fake Marks Card) ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರಾಕೇಶ್, ಕೃಷ್ಣ ಮತ್ತು ತನ್ಮಯ್ ಎಂಬುವವರು ಅರೆಸ್ಟ್ ಆಗಿದ್ದಾರೆ. ಆರೋಪಿಗಳು ಡ್ರೀಮ್ ಎಜುಕೇಷನ್ ಸರ್ವಿಸ್ ಹೆಸರಿನಲ್ಲಿ ಕಚೇರಿ ತೆರೆದಿದ್ದರು. ಹೆಬ್ಬಾಳದ ಕೆಂಪಾಪುರ ಬಳಿಯಲ್ಲಿ ನಕಲಿ ಮಾರ್ಕ್ಸ್​ಕಾರ್ಡ್ ದಂಧೆ ನಡೆಸುತ್ತಿದ್ದರು. ಐವತ್ತು ಸಾವಿರಕ್ಕೆ ಬಿ.ಕಾಂ ಡಿಗ್ರಿ ಸರ್ಟಿಫಿಕೇಟ್ ಕೊಡುತ್ತಿದ್ದರು. ಒಂದೊಂದು ಡಿಗ್ರಿ ಸರ್ಟಿಫಿಕೇಟ್​ಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು. ಮುಂಗಡ ಹಣಕೊಟ್ಟ ಒಂದು ತಿಂಗಳೊಳಗಾಗಿ ಮಾರ್ಕ್ಸ್​ಕಾರ್ಡ್ ಕೊಡುತ್ತಿದ್ದರು. ಸದ್ಯ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ನವೆಂಬರ್ 18ಕ್ಕೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಕಲಿ ಮಾರ್ಕ್ಸ್​ಕಾರ್ಡ್ ದಂಧೆಯನ್ನು ಪತ್ತೆ ಮಾಡಲಾಗಿದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳ ಅಡ್ಮಿಷನ್ ಕೊಡಿಸುವ ಹೆಸರಿನಲ್ಲಿ ಕಚೇರಿ ತೆರಿದಿದ್ದರು. ಆದರ ಒಳಗೆ ಬೇರೆಯದ್ದೇ ಕೆಲಸ ನಡೆಸಿದ್ದು ಪತ್ತೆಯಾಗಿದೆ. ಯಾರು ದುಡ್ಡು ಕೊಡುತ್ತಾರೋ ಅಂಥವರಿಗೆ ನಕಲಿ ಮಾರ್ಕ್ಸ್​ಕಾರ್ಡ್ ಕೊಡುತ್ತಿದ್ದರು. ಈ ದಂಧೆಯಲ್ಲಿ ನಾಲ್ವರಿದ್ದರು. ಸುಮಾರು 12 ಯೂನಿವರ್ಸಿಟಿಯ ಮಾರ್ಕ್ಸ್​ಕಾರ್ಡ್​ಗಳನ್ನ ನೀಡುತ್ತಿದ್ದರು. ದೇಶದ ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಹಿಮಾಚಲ್, ಮೇಘಾಲಯ ಡಿಗ್ರಿ ಸರ್ಟಿಫಿಕೇಟ್ ಹಣಕ್ಕೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಬಂದ ಮಾಹಿತಿ ಆಧರಿಸಿ ತನಿಖೆ ನಡೆಸಿದ ವೇಳೆ ಬಯಲಾಗಿದೆ ಅಂತ ಈಶಾನ್ಯ ವಿಭಾಗದ ಡಿಸಿಪಿ ಸಿಕೆ ಬಾಬಾ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಿಗೆ ಬೇರೆ ಬೇರೆ ಯೂನಿವರ್ಸಿಟಿಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಇದೆ. ಸದ್ಯ ಆರೋಪಿಗಳಿಂದ ಸುಮಾರು 550 ಕ್ಕಿಂತ ಹೆಚ್ಚು ನಕಲಿ ಮಾರ್ಕ್ಸ್​ಕಾರ್ಡ್​ ವಶಕ್ಕೆ ಪಡೆಯಲಾಗಿದೆ ಅಂತ ತಿಳಿಸಿದ್ದಾರೆ.

ಪ್ರಕರಣವೊಂದರಲ್ಲಿ ಕಳಿಂಗ ಯೂನಿವರ್ಸಿಟಿ ಹಳೆಯ ಪ್ರಶ್ನೆಗೆ ಉತ್ತರ ಬರೆಸಿಕೊಂಡಿದ್ದಾರೆ. 2017ರ ಪ್ರಶ್ನೆ ಪತ್ರಿಕೆಗೆ ಈಗ ಉತ್ತರವನ್ನ ಬರೆಸಿ ಹಣ ಪಡೆದು ಮಾರ್ಕ್ಸ್​ಕಾರ್ಡ್ ನೀಡಿದ್ದಾರೆ. ಈ ಸಂಬಂಧ ಯೂನಿವರ್ಸಿಟಿಗಳ ಜೊತೆಗೂ ಲಿಂಕ್ ಇದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಬೆಂಗಳೂರು ಯೂನಿವರ್ಸಿಟಿ, ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿ, ಹುಬ್ಬಳಿ ಬೊರ್ಟ್​ನ ನಕಲಿ‌ ಮಾರ್ಕ್ಸ್​ಕಾರ್ಡ್​ಗಳು ಪತ್ತೆಯಾಗಿವೆ. ಕೆಲ ಮಾರ್ಕ್ಸ್​ಕಾರ್ಡ್​ಗಳು ಓರಿಜನಲ್ ಇದ್ದು, ಈ ಬಗ್ಗೆ ಪೊಲೀಸರು ಸಹ ಪರಿಶೀಲನೆ ನಡೆಸುತ್ತಿದ್ದಾರೆ ಅಂತ ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಇಬ್ಬರು ಪೆಡ್ಲರ್​ಗಳ ಸೆರೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ಪೆಡ್ಲರ್​ಗಳು ಬಂಧನಕ್ಕೊಳಗಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಡ್ರಗ್ಸ್ ಪೆಡ್ಲರ್​ಗಳಿಂದ 30 ಲಕ್ಷ ರೂ. ಮೌಲ್ಯದ ಎಮ್​ಡಿಎಮ್ಎ, ಚರಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ನೈಜೀರಿಯಾ ಪ್ರಜೆಯಿಂದ ಕಡಿಮೆ ಬೆಲೆಗೆ ಸಿಂಥೆಟಿಕ್ ಡ್ರಗ್ ಖರೀದಿ ಮಾಡುತ್ತಿದ್ದರು. ನಂತರ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಮನೆಗಳ್ಳ ಅರೆಸ್ಟ್ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ರಾಜು(44) ಅರೆಸ್ಟ್ ಆಗಿದ್ದಾನೆ. ರಾಮನಗರ ಜಿಲ್ಲೆ ಬಿಡದಿ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಇತ್ತೀಚಿಗೆ ಪಾರ್ವತಮ್ಮ ಎಂಬುವವರ ಮನೆಯ ಬೀಗ ಒಡೆದು ಭಿನ್ನಾಭರಣ ಕಳ್ಳತನ ಮಾಡಿದ್ದ.

ಇದನ್ನೂ ಓದಿ

ಮತಾಂತರ ಆರೋಪ; ಹಾಸನದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

Farm Laws Repeal ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ: ಮೂರು ಕೃಷಿ ಕಾನೂನುಗಳ ರದ್ದತಿಗೆ ಆದ್ಯತೆ, ಎಂಎಸ್​ಪಿ ಕಾಯ್ದೆಗೆ ವಿಪಕ್ಷ ಆಗ್ರಹ

Published On - 11:02 am, Mon, 29 November 21