ಬೆಂಗಳೂರಲ್ಲಿ ಮಹಾನ್ ವಂಚನೆ ಬೆಳಕಿಗೆ; ಟ್ರಾವೆಲ್ಸ್ ಹೆಸರಲ್ಲಿ ಕಾರು ಅಟ್ಯಾಚ್ ಮಾಡಿಸಿಕೊಂಡು ಎಸ್ಕೇಪ್ ಆದ ತಮಿಳುನಾಡು ಮೂಲದ ವ್ಯಕ್ತಿ
Karnataka News: ತಮಿಳುನಾಡು ಮೂಲದ ಶಿವಕುಮಾರ್, ಆರ್ಎಸ್ ಟ್ರಾವೆಲ್ಸ್ ಹೆಸರಲ್ಲಿ ಕಂಪನಿ ತೆರೆದಿದ್ದರು. ಇನೋವಾ ಈಟಿಯೋಸ್ ಸ್ವಿಫ್ಟ್ ಕಾರುಗಳನ್ನ ಬಾಡಿಗೆಗೆ ಅಟ್ಯಾಚ್ ಮಾಡಿಕೊಳ್ಳುತ್ತಿದ್ದರು.
ಬೆಂಗಳೂರು; ಟ್ರಾವೆಲ್ಸ್ ಹೆಸರಲ್ಲಿ ಕಾರು ಅಟ್ಯಾಚ್ ಮಾಡಿಸಿಕೊಂಡು ವಂಚಕರು ಪರಾರಿಯಾಗಿದ್ದಾರೆ. ಸುಮಾರು 130ಕ್ಕೂ ಹೆಚ್ಚು ಕಾರುಗಳ ಜತೆ ವಂಚಕರು ಎಸ್ಕೇಪ್ ಆಗಿದ್ದಾರೆ. ತಮಿಳುನಾಡು ಮೂಲದ ಶಿವಕುಮಾರ್ ಮಾಲೀಕತ್ವದ ಬೆಂಗಳೂರಿನ ನಾಗಸಂದ್ರದಲ್ಲಿದ್ದ ಆರ್ಎಸ್ ಟ್ರಾವೆಲ್ಸ್ನಿಂದ ವಂಚನೆ ನಡೆದಿದೆ. 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಮಾಲೀಕ ಶಿವಕುಮಾರ್ ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ತಮಿಳುನಾಡು ಮೂಲದ ಶಿವಕುಮಾರ್, ಆರ್ಎಸ್ ಟ್ರಾವೆಲ್ಸ್ ಹೆಸರಲ್ಲಿ ಕಂಪನಿ ತೆರೆದಿದ್ದರು. ಇನೋವಾ ಈಟಿಯೋಸ್ ಸ್ವಿಫ್ಟ್ ಕಾರುಗಳನ್ನ ಬಾಡಿಗೆಗೆ ಅಟ್ಯಾಚ್ ಮಾಡಿಕೊಳ್ಳುತ್ತಿದ್ದರು. ಪ್ರತಿ ತಿಂಗಳ 8 ರಂದು ಅಟ್ಯಾಚ್ ಮಾಡಿದ್ದ ಕಾರು ಮಾಲೀಕರ ಅಕೌಂಟ್ಗೆ ಬಾಡಿಗೆ ಹಣ ಹಾಕುತ್ತಿದ್ದರು. ಆದ್ರೆ ಈ ತಿಂಗಳು ಹಣ ಹಾಕಿಲ್ಲ. ಬದಲಿಗೆ 130ಕ್ಕೂ ಹೆಚ್ಚು ಕಾರುಗಳ ಜೊತೆ ಎಸ್ಕೇಪ್ ಆಗಿದ್ದಾರೆ. ಬೆಂಗಳೂರಿನ ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿಯಿಂದ ರಾತ್ರೋರಾತ್ರಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ ಕಾರುಗಳನ್ನ ಅಟ್ಯಾಚ್ ಮಾಡಿದ್ದ ಮಾಲೀಕರು ಕಂಗಾಲಾಗಿದ್ದಾರೆ.
50 ಸಾವಿರಕ್ಕೆ ನಕಲಿ ಮಾರ್ಕ್ಸ್ಕಾರ್ಡ್ ಮಾರಾಟ ನಕಲಿ ಮಾರ್ಕ್ಸ್ಕಾರ್ಡ್ (Fake Marks Card) ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ರಾಕೇಶ್, ಕೃಷ್ಣ ಮತ್ತು ತನ್ಮಯ್ ಎಂಬುವವರು ಅರೆಸ್ಟ್ ಆಗಿದ್ದಾರೆ. ಆರೋಪಿಗಳು ಡ್ರೀಮ್ ಎಜುಕೇಷನ್ ಸರ್ವಿಸ್ ಹೆಸರಿನಲ್ಲಿ ಕಚೇರಿ ತೆರೆದಿದ್ದರು. ಹೆಬ್ಬಾಳದ ಕೆಂಪಾಪುರ ಬಳಿಯಲ್ಲಿ ನಕಲಿ ಮಾರ್ಕ್ಸ್ಕಾರ್ಡ್ ದಂಧೆ ನಡೆಸುತ್ತಿದ್ದರು. ಐವತ್ತು ಸಾವಿರಕ್ಕೆ ಬಿ.ಕಾಂ ಡಿಗ್ರಿ ಸರ್ಟಿಫಿಕೇಟ್ ಕೊಡುತ್ತಿದ್ದರು. ಒಂದೊಂದು ಡಿಗ್ರಿ ಸರ್ಟಿಫಿಕೇಟ್ಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು. ಮುಂಗಡ ಹಣಕೊಟ್ಟ ಒಂದು ತಿಂಗಳೊಳಗಾಗಿ ಮಾರ್ಕ್ಸ್ಕಾರ್ಡ್ ಕೊಡುತ್ತಿದ್ದರು. ಸದ್ಯ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ
ಮತ್ತೆ ಹವಾಮಾನ ವೈಪರೀತ್ಯ, ಚಂಡಮಾರುತದ ಲಕ್ಷಣ: ಆದರೆ ಕರ್ನಾಟಕದಲ್ಲಿ ಬಾಧೆ ಇಲ್ಲ: ಹವಾಮಾನ ತಜ್ಞ ಡಾ. ಪಾಟೀಲ
ಕೊರೊನಾ 3ನೆಯ ಅಲೆ ಮುನ್ನೆಲೆ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ -ಸಚಿವ ಡಾ. ಕೆ. ಸುಧಾಕರ್