Bangalore Police: ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ ಬೆಂಗಳೂರು ಪೊಲೀಸರು

ಮುನ್ನಾವರ್ ಫಾರುಕಿ ಅವರು ಜೆಪಿ ನಗರದ ಎಮ್ ಎಲ್ ಆರ್ ಕನ್ ವೆನ್ಷನ್ ಹಾಲ್ ನಲ್ಲಿ ಅಯೋಜನೆ ಮಾಡಿದ್ದರು. ಆದರೆ ಅದಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಹಾಗಾಗಿ ಅದನ್ನು ಕ್ಯಾನ್ಸಲ್ ಮಾಡಲಾಗಿದೆ - ಬೆಂಗಳೂರು ಪೊಲೀಸರು

Bangalore Police: ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ ಬೆಂಗಳೂರು ಪೊಲೀಸರು
ಕಾಮಿಡಿಯನ್ ಮುನಾವರ್ ಫಾರುಕಿ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ ಬೆಂಗಳೂರು ಪೊಲೀಸರು
Updated By: ಸಾಧು ಶ್ರೀನಾಥ್​

Updated on: Aug 19, 2022 | 2:57 PM

ಬೆಂಗಳೂರು: ಬೆಂಗಳೂರು ಪೊಲೀಸರು (Bangalore Police) ಬೆಂಗಳೂರಲ್ಲಿ ಜೆಪಿ ನಗರದ ಎಮ್ ಎಲ್ ಆರ್ ಕನ್ ವೆನ್ಷನ್ ಹಾಲ್ ನಲ್ಲಿ ಅಯೋಜನೆ ಮಾಡಿದ್ದ ಕಾಮಿಡಿಯನ್ ಮುನಾವರ್ ಫಾರುಕಿ (Comedian Munawar Faruqui) ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಈ ಕುರಿತು ಮಾಹಿತಿ ನೀಡಿದ್ದು, ಕಾಮಿಡಿಯನ್ ಮುನ್ನಾವರ್ ಫಾರುಕಿ ಅವರು ಜೆಪಿ ನಗರದ ಎಮ್ ಎಲ್ ಆರ್ ಕನ್ ವೆನ್ಷನ್ ಹಾಲ್ ನಲ್ಲಿ ಅಯೋಜನೆ ಮಾಡಿದ್ದರು. ಆದರೆ ಅದಕ್ಕೆ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಹಾಗಾಗಿ ಅದನ್ನು ಕ್ಯಾನ್ಸಲ್ ಮಾಡಲಾಗಿದೆ. ಎಷ್ಟು ಜನಕ್ಕೆ ಆಯೋಜನೆ ಮಾಡಿದರು ಅನ್ನೋ ಮಾಹಿತಿ ‌ಇಲ್ಲ. ಬುಕ್ ಮೈ ಶೋ ನಲ್ಲಿ ಮುನಾವರ್ ಫಾರುಕಿ ಪ್ರೋಗ್ರಾಂ ಅಂತಷ್ಟೇ ಇತ್ತು. ಈಗ್ಲೇ ಈ ಪ್ರೋಗ್ರಾಂ ಕ್ಯಾನ್ಸಲ್ ಮಾಡಲಾಗಿದೆ ಎಂದು ಹೇಳಿದರು.