Amazon: ಜನ್ಮಾಷ್ಟಮಿ ದಿನ ಶ್ರೀ ಕೃಷ್ಣ ಪರಮಾತ್ಮನ ಅಶ್ಲೀಲ ಪೋಟೋ, ಪೇಂಟಿಂಗ್ ಮಾರಾಟ: ಅಮೆಜಾನ್ ವಿರುದ್ಧ ಕೆಂಡಾಮಂಡಲ
Sri Krishna Photos: ಇದು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಗಂಭೀರ ಅಪರಾಧವಾಗಿದೆ. ಕ್ರಿಮಿನಲ್ ಅಪರಾಧವಾಗಿದ್ದು ಇದರ ವಿರುದ್ಧ ಬೆಂಗಳೂರಿನ ಸುಬ್ರಮಣ್ಯಪುರ ಮತ್ತು ರಾಜಾಜೀನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಗಿದೆ.

ಜನ್ಮಾಷ್ಟಮಿ ದಿನ ಶ್ರೀ ಕೃಷ್ಣ ಪರಮಾತ್ಮನ ಅಶ್ಲೀಲ ಪೋಟೋ, ಪೇಂಟಿಂಗ್ ಮಾರಾಟ: ಅಮೆಜಾನ್ ವಿರುದ್ಧ ಕೆಂಡಾಮಂಡಲ
ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ( Sri Krishna janmashtami) ಭಗವಾನ್ ಶ್ರೀ ಕೃಷ್ಣ ಪರಮಾತ್ಮನ ಅಶ್ಲೀಲ ಫೋಟೋ, ಪೇಂಟಿಂಗ್ ಮಾರಾಟ (Sri Krishna Photos) ಮಾಡ್ತಿದ್ದಾರೆ ಎಂದು ಅಮೆಜಾನ್ ಕಂಪನಿಯ (Amazon company) ವಿರುದ್ಧ ಹಿಂದೂ ಜಾಗೃತಿ ಸಮಿತಿ ಕೆಂಡಾಮಂಡಲವಾಗಿದೆ. ಇದು ಭಾರತೀಯ ದಂಡ ಸಂಹಿತೆ 295 ರ ಪ್ರಕಾರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಗಂಭೀರ ಅಪರಾಧವಾಗಿದೆ. ಕ್ರಿಮಿನಲ್ ಅಪರಾಧವಾಗಿದ್ದು ಇದರ ವಿರುದ್ಧ ಬೆಂಗಳೂರಿನ ಸುಬ್ರಮಣ್ಯಪುರ ಮತ್ತು ರಾಜಾಜೀನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಹಿಂದೂಗಳು ಅಮೆಜಾನ್ ವಸ್ತುಗಳನ್ನು ಬಹಿಷ್ಕಾರ ಹಾಕಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಆಗ್ರಹಿಸಿದ್ದಾರೆ.




