ವಿದ್ಯಾಕಾಶಿ ಧಾರವಾಡಕ್ಕೂ-ವೀರ್ ಸಾವರ್ಕರ್ ಗೂ ಏನು ನಂಟು?
ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಆಹ್ವಾನದ ಮೇರೆಗೆ ಸ್ವಾತಂತ್ರ್ಯ ವೀರ್ ಸಾವರ್ಕರ್ ಧಾರವಾಡಕ್ಕೆ ಆಗಮಿಸಿದ್ದರು.
ಸ್ವಾತಂತ್ರ್ಯ ವೀರ್ ಸಾವರ್ಕರ್ (Veer savarkar) ಪುಣೆಯ ಫಾರ್ಗಿಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇವರ ಸಹಪಾಠಿಯಾಗಿದ್ದ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ವೀರ್ ಸಾವರ್ಕರರನ್ನು ಧಾರವಾಡಕ್ಕೆ ಆಹ್ವಾನ ನೀಡುತ್ತಾರೆ. ಆಲೂರು ವೆಂಕಟರಾಯರ ಆಹ್ವಾನದ ಮೇರೆಗೆ 37 ವರ್ಷದ ಅಂಡಮಾನನ ಕಾಲಾಪಾನಿಯ ಸೆರೆಮನೆವಾಸ ಅನುಭವಿಸಿದ ನಂತರ ಧಾರವಾಡಕ್ಕೆ ಬಂದು ಮರಾಠಿಯಲ್ಲಿ ಭಾಷಣ ಮಾಡುತ್ತಾರೆ. ಭಾಷಣ ಮಧ್ಯೆ ಅವರು ಕನ್ನಡ ಕಲಿಯುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.
ಧಾರವಾಡ: ವೀರ್ ಸಾವರ್ಕರ್ ಫೋಟೋಗೆ ಮೊಟ್ಟೆ ಹೊಡೆದು, ಕಾಲಿನಲ್ಲಿ ತುಳಿದು, ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ
ಧಾರವಾಡ: ಕಾಂಗ್ರೆಸ್ ಪ್ರತಿಭಟನೆಯಲ್ಲಿ ವೀರ್ ಸಾವರ್ಕರ್ ಅವರ ಭಾವಚಿತ್ರಕ್ಕೆ ಮೊಟ್ಟೆ ಒಡೆದು, ಬಳಿಕ ಕಾಲಿನಲ್ಲಿ ಭಾವಚಿತ್ರ ತುಳಿದು ಅವಮಾನ ಮಾಡಿದ್ದಾರೆ. ನಂತರ ಕೈ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ದಹಿಸಿರುವ ಘಟನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ದಹನದ ವೇಳೆ ಕಾರ್ಯಕರ್ತರು ಏಕಾಏಕಿ ಸಾವರ್ಕರ್ ಭಾವಚಿತ್ರ ತಂದಿದ್ದಾರೆ. ಕಾರ್ಯಕರ್ತರು ಪೂರ್ವ ನಿಯೋಜಿತವಾಗಿ ಐದಾರು ಭಾವಚಿತ್ರ ತಂದಿದ್ದರು. ಪೊಲೀಸ್ ಬಂದೋಬಸ್ತ್ ಮಧ್ಯೆಯೇ ಸಾವರ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನಾನು ಅದನ್ನು ನೋಡಿಲ್ಲ. ಅದು ಪೂರ್ವನಿಯೋಜಿತವೂ ಅಲ್ಲ. ಯಾರಾದರೂ ಬಿಜೆಪಿಯವರೇ ಮಾಡಿಸಿರಬಹುದು. ನಮ್ಮಲ್ಲಿ ಅಂತಹ ಸಂಸ್ಕೃತಿ ಇಲ್ಲ. ಬಿಜೆಪಿಯಲ್ಲಿ ಆ ಸಂಸ್ಕೃತಿ ಇದೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರು ಅಂಥವರಲ್ಲ. ಶಾಂತಿಯುತವಾದ ಪ್ರತಿಭಟನೆ ಮಾಡಿದ್ದೇವೆ. ಕೇವಲ ಅರಗ ಜ್ಞಾನೇಂದ್ರ ಪ್ರತಿಕೃತಿ ಮಾತ್ರ ದಹಿಸಿದ್ದೇವೆ. ಅಂಥದ್ದನ್ನು ಮಾಡಲು ಸಾಧ್ಯವಿಲ್ಲ. ಅದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
Published On - 5:48 pm, Fri, 19 August 22