ಸಿದ್ದರಾಮಯ್ಯ ಎಷ್ಟೇ ತುಷ್ಟೀಕರಣ ರಾಜಕಾರಣ ಮಾಡಲಿ, ಎಲ್ಲಿ ಬೇಕಾದ್ರು ಹೋಗಲಿ ಮೊಟ್ಟೆ ಎಸೆಯಬೇಡಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
Siddaramaiah: ಸಿದ್ದರಾಮಯ್ಯ ಯಾರನ್ನಾದ್ರು ಓಲೈಸಿಕೊಳ್ಳಲಿ. ಆದರೆ, ಸಾವರ್ಕರ್ ಬಗ್ಗೆ ಮಾತಾಡುವುದು ಸರಿಯಲ್ಲ. ಅವರೊಬ್ಬ "The Remarkable Son of India" ಅಂತಾ ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಇದನ್ನ ತಿಳಿದುಕೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಆಶಿಸಿದರು.
ಹುಬ್ಬಳ್ಳಿ: ಸಾವರ್ಕರ್ ಭಾವಚಿತ್ರವನ್ನು ಮುಸ್ಲಿಂ ಏರಿಯಾದಲ್ಲಿ (Muslim Area) ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ (Siddaramaiah) ಕಾರಿನ ಮೇಲೆ ಮೊಟ್ಟೆ (Egg) ಎಸೆದಿದ್ದು ತಪ್ಪು. ಸಿದ್ದರಾಮಯ್ಯ ವಿಪಕ್ಷ ನಾಯಕರು, ಅವರು ಏಲ್ಲಿ ಬೇಕಾದ್ರು ಹೋಗಬಹುದು, ಅವರ ಮೇಲೆ ಮೊಟ್ಟೆ ಎಸೆಯುವಂತದ್ದು ಸರಿಯಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಯಾವ ಪಕ್ಷದ ನಾಯಕರಿಗೂ ಹೀಗೆ ಮಾಡಬಾರದು ಎಂದು ಜೋಶಿ ಹೇಳಿದ್ದಾರೆ.
ಸಾವರ್ಕರ್ ಭಾವಚಿತ್ರ ಕುರಿತಂತೆ ಸಿದ್ದರಾಮಯ್ಯ ಅವರ ಮುಸ್ಲಿಂ ಏರಿಯಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಜೋಶಿ, ಸಾವರ್ಕರ್ ಬಗ್ಗೆ ಹೀಗೆ ಮಾತನಾಡುತ್ತಿರುವ ಇವರು ನಕಲಿ ಕಾಂಗ್ರೆಸಿಗರು ಎಂದಿದ್ದಾರೆ.
ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಹ್ಲಾದ್ ಜೋಶಿ ಹೇಳಿದ್ದೇನು?
“ಸಾವರ್ಕರ್ ಗುರುತಿಸಲ್ಪಡುವ ಭಾರತದ ಸುಪುತ್ರ” ಎಂದು ಸ್ವತಃ ಇಂದಿರಾಗಾಂಧಿ ಅವರು ಹೇಳಿದ್ದರು. ಮಹಾತ್ಮ ಗಾಂಧಿಜೀ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಸಾವರ್ಕರ್ ಬಿಡುಗಡೆಗೆ ಬ್ರಿಟೀಷ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸಿಗರು. ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾವರ್ಕರ್ ಅವರ ಹೋರಾಟ, ವ್ಯಕ್ತಿತ್ವಕ್ಕೆ ಗೌರವ ಕೊಡುತ್ತಿದ್ದರು. ಈಗಿರುವವರು ನಕಲಿ ಕಾಂಗ್ರೆಸಿಗರು. ಇವರು ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ತುಷ್ಠಿಕರಣ ರಾಜಕಾರಣದ ಭಾಗವಾಗಿ (Appeasement Politics) ಸಿದ್ದರಾಮಯ್ಯ ಅವರು ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಮುಸ್ಲಿಂ ಒಲೈಕೆಗಾಗಿ ಇಂತಹ ರಾಜಕಾರಣದಲ್ಲಿ ನಿರತರಾಗಿದ್ಧಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸಿಗರಲ್ಲ. ಹೀಗಾಗಿ ಅವರು ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನ ನೀಡ್ತಿದ್ದಾರೆ.
ಅವರು ಯಾರನ್ನಾದ್ರು ಓಲೈಸಿಕೊಳ್ಳಲಿ. ಆದರೆ, ಸಾವರ್ಕರ್ ಬಗ್ಗೆ ಮಾತಾಡುವುದು ಸರಿಯಲ್ಲ. ಅವರೊಬ್ಬ “ರಿಮಾರ್ಕಬಲ್ ಸನ್ ಆಫ್ ಇಂಡಿಯಾ” ಅಂತಾ ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನ ತಿಳಿದುಕೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಆಶಿಸಿದರು.
Published On - 2:23 pm, Fri, 19 August 22