Bangalore Police: ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿ, ಮಾನವೀಯತೆ-ಕರ್ತವ್ಯ ನಿಷ್ಠೆ ಮೆರೆದ ಬೆಂಗಳೂರು ಪೊಲೀಸರು!

| Updated By: ಸಾಧು ಶ್ರೀನಾಥ್​

Updated on: May 11, 2022 | 8:58 PM

ಕರ್ನಾಟಕ ಪೊಲೀಸ್​ ಅಂದರೆ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುತ್ತದೆ. ಅಂತಹ ಛಾತಿ, ದಕ್ಷತೆ, ಕಾರ್ಯತತ್ಪರತೆ ನಮ್ಮ ಪೊಲೀಸರಲ್ಲಿ ತುಂಬಿತುಳುಕುತ್ತದೆ. ಆದರೆ ಇತ್ತೀಚೆಗೆ ಅನ್ಯ ಕಾರಣಗಳಿಗಾಗಿ ನಮ್ಮ ಕರ್ನಾಟಕ ಪೊಲೀಸರ ಈ ವರ್ಚಸ್ಸಿಗೆ ಪೆಟ್ಟು ಬಿದ್ದಿರುವುದು, ಧಕ್ಕೆಯೊದಗಿರುವುದು ಸುಳ್ಳಲ್ಲ. ಆದರೂ ನಮ್ಮ ಪೊಲೀಸರು ತಮ್ಮಲ್ಲಿ ಆ ದಕ್ಷತೆ, ಮಾನವೀಯ ಗುಣಗಳು ನಶಿಸಿಲ್ಲ ಎಂಬುದನ್ನು ಸಾಬೀತುಪಡಿಸುವ ಘಟನೆಯೊಂದು ಇಂದು ರಾಜಧಾನಿಯಲ್ಲಿ ನಡೆದಿದೆ.

Bangalore Police: ಅನಾಥ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿ, ಮಾನವೀಯತೆ-ಕರ್ತವ್ಯ ನಿಷ್ಠೆ ಮೆರೆದ ಬೆಂಗಳೂರು ಪೊಲೀಸರು!
ಅನಾಥ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ, ಕರ್ತವ್ಯ ನಿಷ್ಠೆ ಮೆರೆದ ಬೆಂಗಳೂರು ಪೊಲೀಸರು!
Follow us on

ಬೆಂಗಳೂರು: ಕರ್ನಾಟಕ ಪೊಲೀಸ್​ ಅಂದರೆ ಇಡೀ ದೇಶವೇ ನಮ್ಮತ್ತ ತಿರುಗಿ ನೋಡುತ್ತದೆ. ಅಂತಹ ಛಾತಿ, ದಕ್ಷತೆ, ಕಾರ್ಯತತ್ಪರತೆ ನಮ್ಮ ಪೊಲೀಸರಲ್ಲಿ ತುಂಬಿತುಳುಕುತ್ತದೆ. ಆದರೆ ಇತ್ತೀಚೆಗೆ ಅನ್ಯ ಕಾರಣಗಳಿಗಾಗಿ ನಮ್ಮ ಕರ್ನಾಟಕ ಪೊಲೀಸರ ಈ ವರ್ಚಸ್ಸಿಗೆ ಪೆಟ್ಟು ಬಿದ್ದಿರುವುದು, ಧಕ್ಕೆಯೊದಗಿರುವುದು ಸುಳ್ಳಲ್ಲ. ಆದರೂ ನಮ್ಮ ಪೊಲೀಸರು ತಮ್ಮಲ್ಲಿ ಆ ದಕ್ಷತೆ, ಮಾನವೀಯ ಗುಣಗಳು ನಶಿಸಿಲ್ಲ ಎಂಬುದನ್ನು ಸಾಬೀತುಪಡಿಸುವ ಘಟನೆಯೊಂದು ಇಂದು ರಾಜಧಾನಿಯಲ್ಲಿ (bangalore police) ನಡೆದಿದೆ. ಅನಾಥ ಶವಕ್ಕೆ ಅಂತ್ಯಸಂಸ್ಕಾರ (orphan dead body) ನೆರವೇರಿಸಿ, ಮಾನವೀಯತೆ ಮೆರೆದದಿದ್ದಾರೆ ಅಮೃತಹಳ್ಳಿ ಠಾಣಾ ಪೊಲೀಸ್​​ ಸಿಬ್ಬಂದಿ (amruthahalli police). ಮರಣೋತ್ತರ ಪರೀಕ್ಷೆ ಮಾಡಿಸಿ, ಕಲ್ಲಪಲ್ಲಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ (last rites) ನಡೆಸಲಾಗಿದೆ.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೇ 4ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ 55 ವರ್ಷದ ವ್ಯಕ್ತಿಯನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದಾಗ ಆತ ಮೃತಪಟ್ಟಿದ್ದರು. ಕುಟುಂಬದ ಬಗ್ಗೆ ವಿಚಾರಿಸಿದಾಗ ಮೃತ ವ್ಯಕ್ತಿ ಅನಾಥ ಎಂದು ತಿಳಿದುಬಂದಿತ್ತು. ನಂತರ ಮರಣೋತ್ತರ ಪರೀಕ್ಷೆ ಮಾಡಿಸಿದ ಅಮೃತಹಳ್ಳಿ ಠಾಣಾ ಸಿಬ್ಬಂದಿ ಮುಂದೆ ನಿಂತು ಕಲ್ಲಪಲ್ಲಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸಿದ ಸಿಬ್ಬಂದಿಗಳಾದ ಸಿದ್ದನಗೌಡ ಮತ್ತು ಭೀಮಾಶಂಕರ ಅವರುಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ಪೊಲೀಸರ ಕರ್ತವ್ಯದ ಒಂದು ಭಾಗವಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:54 pm, Wed, 11 May 22