AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸರಿಂದ ‘ಉಚಿತ ಐಪಿಎಲ್ ಟಿಕೆಟ್’; ಒಮ್ಮೆ ಲಿಂಕ್ ಓಪನ್ ಮಾಡಿ ನೋಡಿ

ಬೆಂಗಳೂರು ನಗರ ಪೊಲೀಸರು ಏಪ್ರಿಲ್ 1 ರಂದು 'ಉಚಿತ IPL ಟಿಕೆಟ್‌ಗಳು' ಎಂಬ ಪೋಸ್ಟರ್ ಹಂಚುವ ಮೂಲಕ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದು ವಂಚಕರ ಜಾಲದ ಬಗ್ಗೆ ಎಚ್ಚರಿಸುವ ಒಂದು ತಂತ್ರವಾಗಿತ್ತು. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಮತ್ತು IPL ಸೀಸನ್‌ನಲ್ಲಿ ಟಿಕೆಟ್ ನೆಪದಲ್ಲಿ ವೈಯಕ್ತಿಕ ಮಾಹಿತಿ ಹಾಗೂ ಹಣ ದೋಚುವ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು ಪೊಲೀಸರಿಂದ 'ಉಚಿತ ಐಪಿಎಲ್ ಟಿಕೆಟ್'; ಒಮ್ಮೆ ಲಿಂಕ್ ಓಪನ್ ಮಾಡಿ ನೋಡಿ
ಬೆಂಗಳೂರು ನಗರ ಪೊಲೀಸ್​​ ಎಕ್ಸ್​​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Apr 01, 2026 | 2:50 PM

Share

ಬೆಂಗಳೂರು, ಏ.1: ಬೆಂಗಳೂರು ಸಿಟಿ ಪೊಲೀಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ “FREE IPL TICKETS” ಎಂಬ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಆದರೆ, ಇದು ನಿಜವಾದ ಆಫರ್ ಅಲ್ಲ, ಬದಲಾಗಿ ಸಾರ್ವಜನಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹೂಡಿರುವ ಒಂದು ತಂತ್ರವಾಗಿದೆ. ಇಂದು ಏಪ್ರಿಲ್ 1, ಅಂದರೆ ಏಪ್ರಿಲ್ ಫೂಲ್ ದಿನ. ಇದನ್ನೇ ಬಳಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು, ಐಪಿಎಲ್ ಕ್ರೇಜ್ ನಡುವೆ ಸಾರ್ವಜನಿಕರಿಗೆ ಹೇಗೆ ಸೈಬರ್ ವಂಚಕರು ಗಾಳ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪೊಲೀಸರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ “ಬೆಂಗಳೂರು ಸಿಟಿ ಪೊಲೀಸ್ ವತಿಯಿಂದ 2 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಲಾಗುತ್ತಿದೆ, ಭಾಗವಹಿಸಲು ಬಯೋದಲ್ಲಿರುವ ಲಿಂಕ್ ಕ್ಲಿಕ್ ಮಾಡಿ” ಎಂದು ಬರೆಯಲಾಗಿದೆ. ಇದನ್ನು ನೋಡಿದ ಅನೇಕರು ನಿಜವೆಂದು ನಂಬಿ ಲಿಂಕ್ ಹುಡುಕತೊಡಗಿದ್ದಾರೆ. ಆದರೆ, ವಾಸ್ತವದಲ್ಲಿ ಇದು ವಂಚಕರ ಜಾಲದ ಬಗ್ಗೆ ಎಚ್ಚರಿಸುವ ಒಂದು ಪ್ರ್ಯಾಂಕ್ ಆಗಿದೆ.

ಇದನ್ನೂ ಓದಿ: ಬೆಂಗಳೂರು ‘ಪೀಕ್ ಹೆಲ್ತ್‌ಕೇರ್’: ಅಮೆರಿಕದಲ್ಲಿ ಸಿಗದ ಲಸಿಕೆ ಕೋರಮಂಗಲದಲ್ಲಿ 10 ನಿಮಿಷದಲ್ಲಿ ಲಭ್ಯ!

ಇಲ್ಲಿದೆ ನೋಡಿ ಪೋಸ್ಟ್​​;

“ಉಚಿತವಾಗಿ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬಿದ್ದು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಐಪಿಎಲ್ ಸೀಸನ್‌ನಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಹಣವನ್ನು ದೋಚುವ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಎಚ್ಚರದಿಂದಿರಿ” ಎಂದು ಪೊಲೀಸರು ಈ ಪೋಲ್ ಮತ್ತು ಪೋಸ್ಟ್ ಮೂಲಕ ಸಂದೇಶ ನೀಡಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದ ಪ್ರಶ್ನೆ ಹಾಗೂ ಉತ್ತರ:

ಪ್ರಶ್ನೆ: ಬೆಂಗಳೂರು ಪೊಲೀಸರು ಸೈಬರ್ ಸುರಕ್ಷತೆಯ ಬಗ್ಗೆ ಹೀಗೆ ಜಾಗೃತಿ ಮೂಡಿಸಿರುವುದು ಯಾಕೆ ?

ಉತ್ತರ: ಉಚಿತವಾಗಿ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬಿದ್ದು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂಬ ಉದ್ದೇಶಕ್ಕೆ ಈ ರೀತಿ ಜಾಗೃತಿ ಮೂಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Wed, 1 April 26

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More