
ಬೆಂಗಳೂರ, ಅ.22: ಒಳ್ಳೆಯ ಕೆಲಸ ಮಾಡುವವರಿಗೆ ಸಪೋರ್ಟ್ (Bangalore pothole repair) ಮಾಡಬೇಕೇ ಹೊರತು ಕೆಟ್ಟದನ್ನು ಯಾರಿಗೂ ಬಯಸಬಾರದು, ಇಲ್ಲೊಂದು ಅಂಥಹದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಂತ ಖರ್ಚಿನಿಂದ ತಮ್ಮ ಏರಿಯಾದಲ್ಲಿ ಗುಂಡಿ ಬಿದ್ದಿದ್ದ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ. ಆದರೆ ಗುಂಡಿ ಸರಿ ಮಾಡಿದ ಒಂದು ಗಂಟೆಯೊಳಗೆ ನೀರಿನ ಟ್ಯಾಂಕರ್ ಎಲ್ಲವನ್ನು ಹಾಳು ಮಾಡಿದೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಈ ವ್ಯಕ್ತಿ ಮಾಡಿದ್ದಾರೆ, ಆದರೆ ಆ ಕೆಲಸಕ್ಕೆ ಫಲ ಸಿಗುವ ಮೊದಲೇ ಎಲ್ಲವೂ ಹಾಳಾಗಿದೆ. ಇದರ ಜತೆಗೆ ಗುಂಡಿ ಮುಚ್ಚಲು ಮಾಡಿದ ಖರ್ಚು ವ್ಯರ್ಥವಾಗಿದೆ ಎಂದು ಹೇಳಿದ್ದಾರೆ. ಹೊಸದಾಗಿ ಹಾಕಲಾದ ಸಿಮೆಂಟ್ ರಸ್ತೆ ಮೇಲೆ ನೀರಿನ ಟ್ಯಾಂಕರ್ ಹೋಗಿ ಎಲ್ಲವನ್ನು ಹಾಳಾಗಿದೆ ಎಂದು ಬೇಸರದಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಜನ ಯಾವತ್ತೂ ಸರಿಯಾಗುವುದಿಲ್ಲ ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಈ ನಗರ ಎಂದಿಗೂ ಉತ್ತಮವಾಗುವುದಿಲ್ಲ ಎಂದು ಬೇಸರದಿಂದ ಈ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್ನಲ್ಲಿ ಘಟನೆಯ ಬಗ್ಗೆ ಹೀಗೆ ವಿವರಿಸಲಾಗಿದೆ, “ನನ್ನ ಬೀದಿಯಲ್ಲಿರುವ ರಸ್ತೆ ಗುಂಡಿಗಳನ್ನು ಸ್ವಂತ ಹಣದಿಂದ ಸರಿ ಮಾಡಲು ನಿರ್ಧಾರಿಸಿದೆ. ರಸ್ತೆ ದುರಸ್ಥಿಯಾದ ಒಂದು ಗಂಟೆಯೊಳಗೆ, ಒಂದು ನೀರಿನ ಟ್ಯಾಂಕರ್ ಎಲ್ಲವನ್ನು ಸಮುದ್ರ ಅಲೆಗಳಂತೆ ಕೊಚ್ಚಿಕೊಂಡು ಹೋಗಿದೆ. ಇಡೀ ಸಿಮೆಂಟಿನ ರಸ್ತೆ ಒಂದೇ ಘಳಿಗೆಯಲ್ಲಿ ಟ್ಯಾಂಕರ್ನ ಟ್ಯಾರ್ನಲ್ಲಿ ಅಂಟಿಕೊಂಡು ಹೋಗಿದೆ. ಈ ಬಗ್ಗೆ ಟ್ಯಾಂಕರ್ ಚಾಲಕನನ್ನು ಪ್ರಶ್ನೆ ಮಾಡಿದ್ರೆ, ರಸ್ತೆ ಚೆನ್ನಾಗಿದ್ದಿದ್ದರೆ, ನಾನು ಸಿಮೆಂಟ್ ಮೇಲೆ ಹೋಗುತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ನೀವು ರಾತ್ರಿ ವೇಳೆ ರಸ್ತೆ ರಿಪೇರಿ ಮಾಡಬೇಕಾಗಿತ್ತು ಎಂದು ನನಗೆ ಗದರಿದ್ದಾನೆ” ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಇದು ರಾಜ್ಯದ ದುಸ್ಥಿತಿ: ಹಳೆ ಸೋಫಾದಿಂದ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಜನ
This city will never get better
byu/chimichangas_69 inbangalore
ಚಾಲಕನ ಮಾತಿನಿಂದ ಬೇಸರಗೊಂಡು, ನನ್ನ ಶ್ರಮ ಮತ್ತು ಹಣ ಎಲ್ಲವೂ ವ್ಯರ್ಥ, ಇದರ ಜತೆಗೆ ಭಾನುವಾರ ನನಗೆ ರಜೆ ಇತ್ತು. ಅದು ಕೂಡ ಹಾಳು, ನೀವು ಯಾವ ಕಾರಣಕ್ಕೂ ಸರಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಪೋಸ್ಟ್ನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಹಲವು ಬಳಕೆದಾರರೂ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೂರ್ಖರು ನಿಮ್ಮ ಕೆಲಸವನ್ನು ಎಂದಿಗೂ ಪ್ರಶಂಸಿಸುವುದಿಲ್ಲ. ಅವರು ಬಗ್ಗೆ ಯೋಚನೆ ಮಾಡಬೇಡಿ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ನೀವು ಒಳ್ಳೆಯ ವ್ಯಕ್ತಿ, ನಿಮ್ಮ ಈ ಶ್ರಮಕ್ಕೆ ಖಂಡಿತ ಫಲ ಸಿಗಬೇಕು. ನಿಮ್ಮಂತಹ ವ್ಯಕ್ತಿಗಳು ಸಿಗುವುದು ಕಷ್ಟ, ಹಾಗೆ ನಿಮ್ಮಂತೆ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಕ್ಷಮಿಸಿ ಗೆಳೆಯ, ನೀವು ಸರಿಯಾದ ಕೆಲಸ ಮಾಡಿದ್ದೀರಿ. ದುರದೃಷ್ಟವಶಾತ್ ನಗರದಲ್ಲಿ ತುಂಬಾ ಮೂರ್ಖರಿದ್ದಾರೆ. ನಿಮ್ಮ ಕೆಲಸಕ್ಕೆ ನನ್ನ ಗೌರವ ಇದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ