AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ರಾಜ್ಯದ ದುಸ್ಥಿತಿ: ಹಳೆ ಸೋಫಾದಿಂದ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಜನ

ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗಳು ನಾಗರಿಕರ ತಾಳ್ಮೆ ಕೆಡಿಸಿವೆ. ಸರ್ಕಾರ ರಸ್ತೆಗಳನ್ನು ಸರಿಪಡಿಸದಿದ್ದಾಗ, ಜನರು ತಾವೇ ತಾತ್ಕಾಲಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಒಂದು ರಸ್ತೆ ಗುಂಡಿಯನ್ನು ಹಳೆಯ ಸೋಫಾದಿಂದ ಮುಚ್ಚಿರುವ ಪೋಸ್ಟ್ ವೈರಲ್ ಆಗಿದ್ದು, BBMP ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ನಗರದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಇದು ರಾಜ್ಯದ ದುಸ್ಥಿತಿ: ಹಳೆ ಸೋಫಾದಿಂದ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರಿನ ಜನ
ವೈರಲ್​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Oct 22, 2025 | 10:38 AM

Share

ಬೆಂಗಳೂರು, ಅ.22; ಬೆಂಗಳೂರಿನ ರಸ್ತೆ ಸಮಸ್ಯೆ (Bengaluru potholes) ಮುಗಿಯದ ಕಥೆ, ದಿನಕ್ಕೊಂದು ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತ ಇರುತ್ತದೆ. ಜನ ಪ್ರತಿದಿನ ಸರ್ಕಾರಕ್ಕೆ ರಸ್ತೆ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ ತರಾಟೆಗೆ ತೆಗೆದುಕೊಳ್ಳತ್ತ ಇರುತ್ತಾರೆ. ಅದ್ರೂ ಯಾವುದಕ್ಕೂ ಸರ್ಕಾರ ಕೇರ್​​​ ಮಾಡುತ್ತಿಲ್ಲ. ಇನ್ನು ಕೊನೆಗೆ ಉಳಿದಿರುವುದು ಒಂದೇ ದಾರಿ, ಜನರೇ ಗುಂಡಿ ಮುಚ್ಚುವುದು. ಈಗ ಅದೇ ಕಾರ್ಯ ನಡೆಯುತ್ತಿರುವುದು. ಇಲ್ಲೊಂದು ಅಂಥಹದೇ ಪೋಸ್ಟ್​​​ ರೆಡ್ಡಿಟ್​​ನಲ್ಲಿ ವೈರಲ್​ ಆಗಿದೆ. ಈ ಪೋಸ್ಟ್​​ಗೆ ತುಂಬಾ ತಮಾಷೆಯಾಗಿ ಕಮೆಂಟ್​​ ಮಾಡಿದ್ದಾರೆ. ಶಿಥಿಲಗೊಂಡ ರಸ್ತೆಗಳ ಬಗ್ಗೆ ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈ ಪೋಸ್ಟ್​​​​ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲೊಂದು ರಸ್ತೆ ಗುಂಡಿಯನ್ನು ಹಳೆಯ ಸೋಫಾದಿಂದ ಮುಚ್ಚಿರುವ ಪೋಸ್ಟ್​​ಗೆ ಭಾರೀ ವೈರಲ್​​ ಆಗಿದೆ.

ಇನ್ನು ಪೋಸ್ಟ್​​​ನಿಂದ ಹೊಸ ಚರ್ಚೆಗಳು ಶುರುವಾಗಿದೆ. ಕೆ.ಆರ್. ರಸ್ತೆಯ ಬಳಿಯ ಒಂದು ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂದಿದೆ. ಈ ಪೋಸ್ಟ್​​​ನ್ನು ರೆಡ್ಡಿಟ್ ಹಂಚಿಕೊಂಡಿದ್ದು, ಬಳಕೆದಾರರು ಈ ರಸ್ತೆ ಗುಂಡಿಯನ್ನು ನೋಡಿ, ಅಬ್ಬಾಬ್ಬ ಈ ಗುಂಡಿ ಎಷ್ಟು ಆಳವಾಗಿದೆ. ಒಂದು ದ್ವಿಚಕ್ರ ವಾಹನವು ಬೀಳುವಷ್ಟು ಅಗಲವಿದೆ ಎಂದು ಹೇಳಿದ್ದಾರೆ. ಈ ಪೋಸ್ಟ್​​ನಲ್ಲಿ ತಿಳಿಸಿರುವ ಪ್ರಕಾರ, ರಸ್ತೆಗೆ ಶಾಶ್ವತ ಪರಿಹಾರ ಸಿಗದ ಕಾರಣ ಸ್ಥಳೀಯ ಅಂಗಡಿಯವರು ತಾತ್ಕಾಲಿಕವಾಗಿ ಈ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ

A pothole covered by an unused couch near KR road. byu/fisherfishyfish inbangalore

ಪೊಲೀಸರು ಕೂಡ ಜನರಿಗೆ ಇಲ್ಲಿ ಗುಂಡಿದೆ ಎಂದು ಎಚ್ಚರಿಸಲು ಬ್ಯಾರಿಕೇಡ್ ಕೂಡ ಹಾಕಿದ್ದಾರೆ. ಆದರೆ ಗುಂಡಿ ಮುಚ್ಚಬೇಕು ಎನ್ನುವ ಮನಸ್ಸು ಯಾರು ಮಾಡಿಲ್ಲ, ಪಕ್ಕದಲ್ಲಿ ವ್ಯಾಪಾರ ಮಾಡುವ ಜನರು ಸಹ ಆ ಗುಂಡಿಯನ್ನು ಮುಚ್ಚುವ ಯೋಚನೆಯನ್ನು ಮಾಡಿಲ್ಲ ಎಂದು ಈ ಪೋಸ್ಟ್​​​ನಲ್ಲಿ ಹೇಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ. ನೀವು ಬಿಬಿಎಂಪಿ ಅಥವಾ ಗ್ರೇಟರ್ ಬೆಂಗಳೂರಿಗೂ ಈ ಬಗ್ಗೆ ದೂರು ನೀಡಿದ್ರು ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹಾಳಾದ ಬೆಂಗಳೂರು ರೋಡ್: 500 ಕಿ.ಮೀ ವೈಟ್‌ ಟಾಪಿಂಗ್, ನಗರದ ರಸ್ತೆಗಳ ಉದ್ದ ಅಗಲ ಬಿಚ್ಚಿಟ್ಟ ಡಿಕೆಶಿ

ಮೊದಲನೆಯದಾಗಿ ರಸ್ತೆಗಳು ಇಷ್ಟೊಂದು ಕೆಟ್ಟದಾಗಿರಬಾರದು, ಮುಂದಿನ ಹತ್ತು ವರ್ಷಗಳ ಕಾಲ ಈ ಬದಲಾವಣೆಗಳು ಆಗುವುದಿಲ್ಲ. ಒಂದಾ ಸರ್ಕಾರ ಈ ಬಗ್ಗೆ ಬದಲಾವಣೆ ತರಬೇಕು. ಇಲ್ಲ ಜನರೇ ಬದಲಾವಣೆಯನ್ನು ಮಾಡಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಆಧುನಿಕ ಸಮಸ್ಯೆಗಳಿಗೆ ಕೆಲವು ರೀತಿಯ ಪರಿಹಾರದ ಅಗತ್ಯವಿದೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ. ಯಾರಾದರೂ ಸೋಫಾವನ್ನು ತಿರುಗಿಸಿ ಟ್ರಾಫಿಕ್ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬಹುದು ಎಂದು ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ.

ಬೆಂಗಳೂರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 am, Wed, 22 October 25