ಬೆಂಗಳೂರು: ನಾನು ದಲಿತ ಸಂಘಟನೆಗಳ ಜೊತೆ ಇದ್ರೆ ತಪ್ಪೇನು ಎಂದ ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ನ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರ ಅಮಾನತಿನ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, 'ನಾನು ಮಂತ್ರಿಯೆಂದ ಮಾತ್ರಕ್ಕೆ ನನಗೆ ಬೇಕಾದ ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ. ನನಗೂ ನಿಯಮಾವಳಿಗಳಿವೆ. ಅದಕ್ಕನುಗುಣವಾಗಿಯೇ ಮಾನತಿನ ನಿರ್ಧಾರ ತೆಗೆದುಕೊಂಡಿರುವುದು. , 'ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ ವಹಿಸಿದ್ದೇನೆಂದಾದರೆ ಆರ್ಎಸ್ ಎಸ್ನ ಪ್ರಾಯೋಜಕರು ಯಾರು?' ಎಂದರು.
ಬೆಂಗಳೂರು, ಅಕ್ಟೋಬರ್ 22: ಆರ್ಎಸ್ಎಸ್ನ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರ ಅಮಾನತಿನ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ನಾನು ಮಂತ್ರಿಯೆಂದ ಮಾತ್ರಕ್ಕೆ ನನಗೆ ಬೇಕಾದ ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ. ನನಗೂ ನಿಯಮಾವಳಿಗಳಿವೆ. ಅದಕ್ಕನುಗುಣವಾಗಿಯೇ ಮಾನತಿನ ನಿರ್ಧಾರ ತೆಗೆದುಕೊಂಡಿರುವುದು’ ಎಂದರು.
ಬೆಂಗಳೂರಿನಲ್ಲಿ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ‘ನಾನು ದಲಿತ ಸಂಘಟನೆಗಳ ಪ್ರಾಯೋಜಕತ್ವ ವಹಿಸಿದ್ದೇನೆಂದಾದರೆ ಆರ್ಎಸ್ ಎಸ್ನ ಪ್ರಾಯೋಜಕರು ಯಾರು? ಅವರದೊಂದು ನೋಂದಾಯಿಸದ ಸಂಘಟನೆ. ಇಂತಹ ಸಂಘಟೆನೆಗೆ ಬಟ್ಟೆ ಹೊಲಿಸಲು, ಕಟ್ಟಡ ಕಟ್ಟಿಸಲು ಹಣ ಎಲ್ಲಿಂದ ಬರುತ್ತಿದೆ’ ಎಂದು ಕೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 22, 2025 02:26 PM
Latest Videos

