Bangalore Power Cut: ಬೆಂಗಳೂರಿನ ಕೋರಮಂಗಲ, ಮಡಿವಾಳ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್

Power Cut in Bengaluru: ಬೆಂಗಳೂರಿನ ಕೋರಮಂಗಲ, ಮಡಿವಾಳ, ರಾಮಯ್ಯ ಲೇಔಟ್ ಸೇರಿದಂತೆ ಹಲವು ಏರಿಯಾಗಳಲ್ಲಿ ಇಂದು (ಜೂನ್ 29) ಪವರ್ ಕಟ್ ಸಮಸ್ಯೆ ಎದುರಾಗಲಿದೆ.

Bangalore Power Cut: ಬೆಂಗಳೂರಿನ ಕೋರಮಂಗಲ, ಮಡಿವಾಳ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್
ಬೆಂಗಳೂರಿನಲ್ಲಿ ಪವರ್ ಕಟ್
Edited By:

Updated on: Jun 29, 2022 | 11:31 AM

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಪವರ್ ಕಟ್ (Power Cut) ಸಮಸ್ಯೆಯೂ ಎದುರಾಗಿದೆ. ಮಳೆಗಾಲ ಶುರುವಾಗಿರುವ ಹಿನ್ನೆಲೆಯಲ್ಲಿ ಮರಗಳನ್ನು ಕತ್ತರಿಸುವುದು, ಕೇಬಲ್ ಹಾಕುವುದು, ನಿರ್ವಹಣಾ ಕಾರ್ಯಗಳಿಂದಾಗಿ ಇಂದು (ಬುಧವಾರ) ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ಹೀಗಾಗಿ, ಇಂದು ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಕೋರಮಂಗಲ, ಮಡಿವಾಳ, ರಾಮಯ್ಯ ಲೇಔಟ್ ಸೇರಿದಂತೆ ಹಲವು ಏರಿಯಾಗಳಲ್ಲಿ ಇಂದು (ಜೂನ್ 29) ಪವರ್ ಕಟ್ ಸಮಸ್ಯೆ ಎದುರಾಗಲಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ: Bangalore Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ

ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ನಿರ್ವಹಣಾ ಕಾರ್ಯದಿಂದಾಗಿ ವಿದ್ಯುತ್ ವ್ಯತ್ಯಯವಾಗಲಿದೆ. ಕೋರಮಂಗಲ 2ನೇ ಬ್ಲಾಕ್, ಮಡಿವಾಳ ಟೋಟಲ್ ಮಾಲ್, ದವನಂ ಜ್ಯುವೆಲರ್ಸ್ ಕಟ್ಟಡ, ಮಡಿವಾಳ ಸಂತೆ, ಸಿದ್ಧಾರ್ಥ ಕಾಲೋನಿ, ಕೋರಮಂಗಲ 5ನೇ ಬ್ಲಾಕ್ ಮತ್ತು ಇಂಡಸ್ಟ್ರಿಯಲ್ ಲೇಔಟ್, ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್ 3ನೇ ಬ್ಲಾಕ್, ರಾಮಯ್ಯ ಲೇಔಟ್, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

 

Published On - 11:30 am, Wed, 29 June 22